ಪೀಠಿಕೆ

ಈ ದಸ್ತಾವೇಜು ಈ ಕೆಳಗಿನ ವಿಷಯಗಳನ್ನು ಒಳಗೊಂಡಿದೆ:

  • ಅನುಸ್ಥಾಪನೆಗೆ-ಸಂಬಂಧಿತ ಟಿಪ್ಪಣಿಗಳು

  • ತಾಂತ್ರಿಕ ಮುನ್ನೋಟಗಳು

  • ತಿಳಿದಿರುವ ಸಂಗತಿಗಳು

  • ಸಾಮಾನ್ಯ ಮಾಹಿತಿ

  • ಚಾಲಕ ಅಪ್ಡೇಟ್ ಕಾರ್ಯಕ್ರಮಗಳು

  • ಅಂತರಾಷ್ಟ್ರೀಕರಣ

  • ಕರ್ನಲ್ ಟಿಪ್ಪಣಿಗಳು

ಬಿಡುಗಡೆಯ ಟಿಪ್ಪಣಿಗಳ ಈ ಆವೃತ್ತಿಯಲ್ಲಿ Red Hat ಎಂಟರ್ಪ್ರೈಸ್ ಲಿನಕ್ಸ್ 5ರ ಮೇಲಿನ ಕೆಲವೊಂದು ಅಪ್ಡೇಟುಗಳು ಕಾಣಿಸದೇ ಇರಬಹುದು. ಬಿಡುಗಡೆ ಟಿಪ್ಪಣಿಗಳ ಒಂದು ಅಪ್ಡೇಟೆಡ್ ಆವೃತ್ತಿ ಈ URLನಲ್ಲಿಯೂ ಸಹ ದೊರೆಯುತ್ತದೆ:

http://www.redhat.com/docs/manuals/enterprise/RHEL-5-manual/index.html

ಅನುಸ್ಥಾಪನೆಗೆ-ಸಂಬಂಧಿತ ಟಿಪ್ಪಣಿಗಳು

ಈ ಕೆಳಗಿನ ವಿಭಾಗಗಳು Red Hat ಎಂಟರ್ಪ್ರೈಸ್ ಲಿನಕ್ಸ್ ಅನುಸ್ಥಾಪನೆ ಹಾಗು Anaconda ಅನುಸ್ಥಾಪನ ಪ್ರೊಗ್ರಾಂ ಬಗೆಗಿನ ನಿಶ್ಚಿತ ಮಾಹಿತಿಯನ್ನು ಒಳಗೊಂಡಿವೆ.

ಸೂಚನೆ

ಈಗಾಗಲೇ ಅನುಸ್ಥಾಪನೆಗೊಂಡಿರುವ Red Hat ಎಂಟರ್ಪ್ರೈಸ್ ಲಿನಕ್ಸ್ ಅನ್ನು ಅಪ್ಗ್ರೇಡ್ ಮಾಡುವ ಅನುಕೂಲವಾಗುವಂತೆ, ಬದಲಾದ ಪ್ಯಾಕೇಜುಗಳನ್ನು ನೀವು ಅಪ್ಡೇಟ್ ಮಾಡಲು Red Hat ಜಾಲಬಂಧವನ್ನು ಉಪಯೋಗಿಸಬೇಕು.

Anacondaವನ್ನು ಹೊಸ Red Hat ಎಂಟರ್ಪ್ರೈಸ್ ಲಿನಕ್ಸ್ 5ರ ಅನುಸ್ಥಾಪನೆಯನ್ನು ಮಾಡಲು ಅಥವ ಇತ್ತೀಚಿನ ಅಪ್ಡೇಟಾದ ಆವೃತ್ತಿನ Red Hat ಎಂಟರ್ಪ್ರೈಸ್ ಲಿನಕ್ಸ್4 ರಿಂದ Red Hat ಎಂಟರ್ಪ್ರೈಸ್ ಲಿನಕ್ಸ್ 5 ಕ್ಕೆ ಅಪ್ಗ್ರೇಡ್ ಮಾಡಲು ಉಪಯೋಗಿಸಬಹುದು.

ನೀವು Red Hat ಎಂಟರ್ಪ್ರೈಸ್ ಲಿನಕ್ಸ್ 5ರ ಸೀಡಿ-ರಾಂಗಳಲ್ಲಿರುವ ವಿಷಯಗಳನ್ನು ನಕಲಿಸುತ್ತಿದ್ದರೆ, ಕಾರ್ಯವ್ಯವಸ್ಥೆಗಾಗಿ ಮಾತ್ರವನ್ನು ನಕಲಿಸಲು ಮರೆಯಬೇಡಿ (ಉದಾಹರಣೆಗೆ, ಜಾಲಬಂಧ ಆಧರಿತ ಅನುಸ್ಥಾಪನೆಯನ್ನು ಮಾಡಲು ತಯಾರಾಗುತ್ತಿದ್ದರೆ). ಪೂರಕ ಸೀಡಿ-ರಾಂಗಳನ್ನು ಅಥವ ಯಾವುದೇ ಲೇಯರ್ಡ್ ಪ್ರಾಡಕ್ಟ್ ಸೀಡಿ-ರಾಂಗಳನ್ನು ನಕಲಿಸಬೇಡಿ, ಏಕೆಂದರೆ ಇದರಿಂದಾಗಿ Anacondaದ ಯೋಗ್ಯ ಕಾರ್ಯನಿರ್ವಹಣೆಗೆ ಬೇಕಾಗುವ ಕಡತಗಳ ಮೇಲೆಯೇ ಬರೆಯಲ್ಪಡುತ್ತದೆ. Red Hat ಎಂಟರ್ಪ್ರೈಸ್ ಲಿನಕ್ಸ್ಅನ್ನು ಅನುಸ್ಥಾಪಿಸಿದ ನಂತರವೇ ಈ ಸೀಡಿರಾಂಗಳ ಅನುಸ್ಥಾಪನೆಯನ್ನು ಮಾಡಬೇಕು.

ISO ವಿಷಯಗಳು ಹಾಗು ನೊಂದಣಿ

ನಿಶ್ಚಿತ ಪ್ರಾಡಕ್ಟ್ ವೇರಿಯಂಟುಗಳನ್ನು ತಂತ್ರಾಂಶ ಘಟಕಗಳ ಪ್ಯಾಕೇಜುಗಳ ಸಂಯೋಜಸುವಲ್ಲಿ ಈ ಬಾರಿ ಹಿಂದಿನ Red Hat ಎಂಟರ್ಪ್ರೈಸ್ ಲಿನಕ್ಸ್ ಆವೃತ್ತಿಗಿಂತ ಬದಲಾವಣೆ ಮಾಡಲಾಗಿದೆ. ವಿವಿಧ ವೇರಿಯಂಟುಗಳು ಹಾಗು ISO ಚಿತ್ರಿಕೆಗಳ ಒಟ್ಟು ಸಂಖ್ಯೆಗಳನ್ನು ಎರಡಕ್ಕೆ ಇಳಿಸಲಾಗಿದೆ:

  • Red Hat ಎಂಟರ್ಪ್ರೈಸ್ ಲಿನಕ್ಸ್ 5 ಪರಿಚಾರಕ

  • Red Hat ಎಂಟರ್ಪ್ರೈಸ್ ಲಿನಕ್ಸ್ 5 ಕ್ಲೈಂಟ್

ISO ಚಿತ್ರಿಕೆಗಳು ವಾಸ್ತವೀಕರಣ, ಕ್ಲಸ್ಟರಿಂಗ್ ಅಥವ ಕ್ಲಸ್ಟರ್ ಶೇಖರಣೆಯಂತಹ ಕೋರ್ ವಿತರಣೆಯ ಮೇಲೆ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡಬಲ್ಲ ಬಹಳಷ್ಟು ಆಯ್ಕಾ ಆಕರಗಳಿಗಾಗಿ ತಂತ್ರಾಂಶ ಪ್ಯಾಕೇಜುಗಳನ್ನು ಹೊಂದಿದೆ. ಪರಿಚಾರಕ ರೂಪಾಂತರಗಳು, ಕ್ಲೈಂಟ್ ರೂಪಾಂತರಗಳು ಮತ್ತು ಲಭ್ಯವಿರುವ ಆಯ್ಕೆಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟುhttp://www.redhat.com/rhel/ ಅನ್ನು ಸಂಪರ್ಕಿಸಿ.

ಅದೇ ವೃಕ್ಷ ಅಥವ ISO ಚಿತ್ರಿಕೆಯನ್ನು ಇರಿಸಿಕೊಂಡು, ಅನುಸ್ಥಾಪನೆಗಾಗಿ ಅರ್ಪಿಸಲಾದ ಅಂಶಗಳು ಮತ್ತು ಚಂದಾದಲ್ಲಿ ಒಳಗೊಂಡ ಅಂಶಗಳ ನಡುವೆ ಹೊಂದಾಣಿಕೆಯಾಗದೇ ಇರುವುದನ್ನು ತಪ್ಪಿಸಬೇಕು. ಈ ರೀತಿ ಹೊಂದಾಣಿಕೆಯಾಗದೇ ಇದ್ದ ಪಕ್ಷದಲ್ಲಿ ಅದು ದೋಷ ಮತ್ತು ದುರ್ಭಲ ಅಪಾಯಗಳ ತೋರುವಿಕೆಗೆ ಕಾರಣವಾಗುತ್ತದೆ.

ಅರ್ಪಿಸಿದ ಅಂಶಗಳು ಚಂದಾದಲ್ಲಿ ನೀಡಿದವುಗಳ ಜೊತೆಗೆ ಹೊಂದಿಕೆಯಾಗಿರುವನ್ನು ಖಚಿತ ಪಡಿಸಲು, ಸರಿಯಾದ ಪ್ಯಾಕೇಜ್ ಸೆಟ್ ಅನ್ನು ನೀಡಿ ಅನುಸ್ಥಾಪಕವನ್ನು ಸಂರಚಿಸಲುಬಲ್ಲಂತಹ ಒಂದು ಅನುಸ್ಥಾಪನ ಸಂಖ್ಯೆಯನ್ನು Red Hat ಎಂಟರ್ಪ್ರೈಸ್ ಲಿನಕ್ಸ್ 5ಕ್ಕಾಗಿ ನಮೂದಿಸುವುದು ಅಗತ್ಯವಾಗುತ್ತದೆ. ನಿಮ್ಮ ಚಂದಾದಲ್ಲಿ ಈ ಅನುಸ್ಥಾಪನ ಸಂಖ್ಯೆಯನ್ನು ಸೇರಿಸಲಾಗಿದೆ.

ನೀವು ಅನುಸ್ಥಾಪನ ಸಂಖ್ಯೆಯನ್ನು ನಮೂದಿಸದಿದ್ದರೆ, ಅದು ಕೋರ್ ಪರಿಚಾರಕ ಅಥವ ಡೆಸ್ಕ್ ಟಾಪ್ ಅನುಸ್ಥಾಪನೆಗೆ ಕಾರಣವಾಗುತ್ತದೆ. ಹೆಚ್ಚಿನ ಕಾರ್ಯಲಕ್ಷಣಗಳನ್ನು ನಂತರ ಹೊರಗಿನಿಂದ ಸೇರಿಸಿಕೊಳ್ಳಬಹುದು. ಅನುಸ್ಥಾಪನ ಸಂಖ್ಯೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು http://www.redhat.com/apps/support/in.html ಅನ್ನು ಸಂಪರ್ಕಿಸಿ.

ಅನುಸ್ಥಾಪನಾ ಪ್ರಕ್ರಿಯೆಯಲ್ಲಿ ಉಪಯೋಗಿಸಲ್ಪಟ್ಟ ಅನುಸ್ಥಾಪನ ಸಂಖ್ಯೆಯನ್ನು /etc/sysconfig/rhn/install-num ಕಡತದಲ್ಲಿ ಉಳಿಸಲಾಗುತ್ತದೆ. Red Hat ಜಾಲಬಂಧದೊಂದಿಗೆ ನೊಂದಾಯಿಸುವಾಗ, ಯಾವ ಸರಿಯಾದ ಚೈಲ್ಡ್ ಮಾರ್ಗಗಳಿಗೆ ಗಣಕವು ಚಂದಾದಾರವಾಗಬೇಕೆಂದು ಯಾಂತ್ರಿಕವಾಗಿ ಪತ್ತೆಹಚ್ಚಲು ಈ ಕಡತವು rhn_register ನಿಂದ ಉಲ್ಲೇಖಿತಗೊಳ್ಳುತ್ತದೆ.

ಹೊಸ RPM GPG ಸೈನಿಂಗ್ ಕೀಗಳು

ಒಂದು ಹೊಸ ಬಿಡುಗಡೆಯ ಸೈನಿಂಗ್ ಕೀಗಳು Red Hat ಎಂಟರ್ಪ್ರೈಸ್ ಲಿನಕ್ಸ್ 5 ಪ್ಯಾಕೇಜುಗಳನ್ನು ಸೈನ್ ಮಾಡಲು ಉಪಯೋಗಿಸಲ್ಪಡುತ್ತದೆ. ಪ್ರಥಮ ಬಾರಿಗೆ ಒಂದು ಗಣಕವನ್ನು ಅಪ್ಡೇಟ್ ಮಾಡುವಾಗ, ನೀವು ಈ ಕೀಯನ್ನು ಪ್ರಾಂಪ್ಟ್ ಮಾಡಲು ಅನುಮತಿಸಲಾಗುವುದು.

ಸೈನಿಂಗ್ ಕೀಗಳು ಈ ಕೆಳಗಿನ ಕಡತಗಳಲ್ಲಿ ನೀಡಲಾಗಿದೆ:

  • /etc/pki/rpm-gpg/RPM-GPG-KEY-redhat-release — ಹೊಸ ಬಿಡುಗಡೆಯ ಸೈನಿಂಗ್ ಕೀಗಾಗಿ ಸಾರ್ವತ್ರಿಕ ಕೀಯನ್ನು ಹೊಂದಿದೆ

  • /etc/pki/rpm-gpg/RPM-GPG-KEY-redhat-auxiliary — ಸದ್ಯಕ್ಕೆ ಉಪಯೋಗದಲ್ಲಿರದ, ಸಹಾಯಕ ಬಿಡುಗಡೆಯ ಸೈನಿಂಗ್ ಕೀಗಾಗಿ ಸಾರ್ವತ್ರಿಕ ಕೀಯನ್ನು ಹೊಂದಿದೆ

  • /etc/pki/rpm-gpg/RPM-GPG-KEY-redhat-former — Red Hat ಎಂಟರ್ಪ್ರೈಸ್ ಲಿನಕ್ಸ್ನ ಹಿಂದಿನ ಬಿಡುಗಡೆಯಲ್ಲಿ ಉಪಯೋಗಿಸಲಾದ ಮುಂಚಿನ ಬಿಡುಗಡೆಯ ಸೈನಿಂಗ್ ಕೀಗಾಗಿ ಸಾರ್ವಜನಿಕ ಕೀಯನ್ನು ಹೊಂದಿದೆ

Subversion

Red Hat ಎಂಟರ್ಪ್ರೈಸ್ ಲಿನಕ್ಸ್ 5 ರಲ್ಲಿ, Subversion ಆವೃತ್ತಿ ನಿಯಂತ್ರಣ ವ್ಯವಸ್ಥೆಯು Berkeley DB 4.3ಗೆ ಸರಿಹೊಂದುವಂತೆ ಸಂಯೋಜಿತಗೊಂಡಿದೆ. ನೀವು Red Hat ಎಂಟರ್ಪ್ರೈಸ್ ಲಿನಕ್ಸ್ ೪ ರಿಂದ ಅಪ್ಗ್ರೇಡ್ ಮಾಡುವಂತಿದ್ದರೆ ಮತ್ತು Berkeley DB backend "BDB" ಅನ್ನು (ಪ್ಯೂರ್ ಕಡತ ವ್ಯವಸ್ಥೆ ಆಧರಿತ "FSFS" ಬ್ಯಾಕೆಂಡ್ ಬದಲಿಗೆ) ಉಪಯೋಗಿಸುವ ಬೇರಾವುದೇ Subversion ಆಕರಗಳು ಗಣಕದಲ್ಲಿ ನಿರ್ಮಿತವಾಗಿದ್ದರೆ, ಅಪ್ಗ್ರೇಡಿನ ನಂತರವೂ ಆಕರಗಳು ನಿಲುಕುವುದನ್ನು ಖಚಿತಗೊಳಿಸಲು ಹೆಚ್ಚಿನ ಗಮನವನ್ನು ನೀಡಬೇಕು. ಈ ಕೆಳಗಿನ ಪ್ರಕ್ರಿಯೆಗಳನ್ನು Red Hat ಎಂಟರ್ಪ್ರೈಸ್ ಲಿನಕ್ಸ್ 4 ಗಣಕದ ಮೇಲೆ ನಿರ್ವಹಿಸಬೇಕು, Red Hat ಎಂಟರ್ಪ್ರೈಸ್ ಲಿನಕ್ಸ್ 5 ಗೆ ಅಪ್ಗ್ರೇಡ್ ಮಾಡುವ ಮೊದಲು:

  1. ಚಾಲನೆಯಲ್ಲಿರುವ ಎಲ್ಲಾ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ ಮತ್ತು ಯಾವುದೇ ಪ್ರಕ್ರಿಯೆ ಆಕರವನ್ನು ನಿಲುಕದಂತೆ ಖಚಿತಪಡಿಸಿಕೊಳ್ಳಿ (ಉದಾಹರಣೆಗೆ httpd, svnserve ಅಥವ ನೇರ ಅನುಮತಿಯಿರುವ ಇತರ ಯಾವುದೇ ಸ್ಥಳೀಯ ಬಳಕೆದಾರ).

  2. ಈ ಕೆಳಗಿನ ಆಜ್ಞೆಯನ್ನು ಉಪಯೋಗಿಸಿಕೊಂಡು ಆಕರದ ಬ್ಯಾಕಪ್ ನಿರ್ಮಿಸಿ:

    svnadmin dump /path/to/repository | gzip > repository-backup.gz
    
  3. ಆಕರದಲ್ಲಿ ಈ ಆಜ್ಞೆಯನ್ನು ಚಲಾಯಿಸಿsvnadmin recover:

    svnadmin recover /path/to/repository
    
  4. ಉಪಯೋಗಿಸದೇ ಇರುವ ಲಾಗ್ ಕಡತಗಳನ್ನು ಆಕರದಿಂದ ಅಳಿಸಿಹಾಕಿ:

    svnadmin list-unused-dblogs /path/to/repository | xargs rm -vf
    
  5. ಉಳಿದ ಯಾವುದೇ ಹಂಚಿಕಾ-ಮೆಮೊರಿ ಕಡತಗಳನ್ನು ಆಕರದಿಂದ ಅಳಿಸಿಹಾಕಿ:

    rm -f /path/to/repository/db/__db.0*
    

ಇತರೆ ಅನುಸ್ಥಾಪನ ಟಿಪ್ಪಣಿಗಳು

  • ವಿಭಜಿತ ಅನುಸ್ಥಾಪನ ಮಾಧ್ಯಮವನ್ನು (ಉದಾಹರಣೆಗೆ, ಸೀಡಿ ಅಥವ NFSISO) ಉಪಯೋಗಿಸಿ Red Hat ಎಂಟರ್ಪ್ರೈಸ್ ಲಿನಕ್ಸ್ 5 ಅನ್ನು ಅನುಸ್ಥಾಪಿಸುವಾಗ, amanda-serverಅನ್ನು ಅನುಸ್ಥಾಪಿಸುವಲ್ಲಿ ದೋಷ ಕಂಡು ಬಂದಿದೆ.

    ಹಾಗೆಯೇ, ನೀವು amanda-serverಅನ್ನು ಉಪಯೋಗಿಸಬೇಕೆಂದರೆ, ಅದನ್ನು ನೀವು Red Hat ಎಂಟರ್ಪ್ರೈಸ್ ಲಿನಕ್ಸ್ 5ಅನ್ನು ಅನುಸ್ಥಾಪಿಸಿದ ನಂತರ yum after ಅನ್ನು ಉಪಯೋಗಿಸಿ ಅನುಸ್ಥಾಪಿಸಬೇಕು.

    ವಿಭಜಿತವಾಗದ ಮಾಧ್ಯಮಗಳನ್ನು (ಉದಾಹರಣೆ, ಡೀವಿಡಿ ಅಥವ ವೃಕ್ಷ ಅನುಸ್ಥಾಪನೆಗಳು) ಉಪಯೋಗಿಸಿದಲ್ಲಿ ಈ ಸಂಚಿಕೆಯು ಅನುಸ್ಥಾಪನೆಗಳಿಗೆ ತೊಂದರೆ ಮಾಡುವುದಿಲ್ಲ ಎನ್ನುವುದನ್ನು ಗಮನಿಸಿ.

  • ಎಲ್ಲಿಯಾದರೂ IDE/PATA (Parallel ATA) ಸಾಧನಗಳು "100% Native" ಕ್ರಮದಲ್ಲಿ ಸಂರಚಿಸಲ್ಪಟ್ಟರೆ, ಕೆಲವು BIOSಗಳು Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಅನುಸ್ಥಾಪನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಸಮಾಪ್ತಿಯಾಗದಂತೆ ತಡೆಯುತ್ತವೆ. ಹೀಗಾಗದಂತೆ ತಡೆಯಲು IDE/PATA ಅನ್ನು BIOSನಲ್ಲಿ "Legacy"ಕ್ರಮದಲ್ಲಿ ಸಂರಚಿಸಿ.

  • ಐಬಿಎಂ ಸಿಸ್ಟಂ z ಸಾಂಪ್ರದಾಯಿಕ ಯುನಿಕ್ಸ್ ರೀತಿಯ ಕನ್ಸೋಲನ್ನು ಒದಗಿಸುವುದಿಲ್ಲ. ಹಾಗೆಯೇ Red Hat ಎಂಟರ್ಪ್ರೈಸ್ ಲಿನಕ್ಸ್ 5 ಐಬಿಎಂ ಸಿಸ್ಟಂ z ಗಾಗಿ ಪ್ರಾರಂಭಿಕ ಲೋಡ್ ಆಗುವಾಗ ಪ್ರಥಮ ಬೂಟ್ ಕಾರ್ಯಾತ್ಮಕತೆಯನ್ನು ಬೆಂಬಲಿಸುವುದಿಲ್ಲ.

    ಐಬಿಎಂ ಸಿಸ್ಟಂ zನ ಮೇಲೆ Red Hat ಎಂಟರ್ಪ್ರೈಸ್ ಲಿನಕ್ಸ್ 5ಗಾಗಿ ಸೆಟ್ ಅಪ್ ಅನ್ನು ಸರಿಯಾದ ಕ್ರಮದಲ್ಲಿ ಪ್ರಾರಂಭಿಸಲು, ಅನುಸ್ಥಾಪನೆಯ ನಂತರ ಈ ಕೆಳಗಿನ ಆಜ್ಞೆಯನ್ನು ಚಲಾಯಿಸಿ:

    • /usr/bin/setupsetuptool ಪ್ಯಾಕೇಜಿನಲ್ಲಿ ದೊರೆಯುವ

    • /usr/bin/rhn_registerrhn-setup ಪ್ಯಾಕೇಜಿನಲ್ಲಿ ದೊರೆಯುವ

  • ಅನುಸ್ಥಾಪನ ಪ್ರಕ್ರಿಯೆಯಲ್ಲಿ, Anacondaವು ಅನುಸ್ಥಾಪಿಸಬೇಕಾದ ಕರ್ನಲ್ ಪ್ಯಾಕೇಜುಗಳನ್ನು ಸ್ವಯಂ ಆಯ್ಕೆಮಾಡುತ್ತದೆ. ಡೀಫಾಲ್ಟ್ ಆಗಿ ಆಯ್ಕೆಯಾದ ಕರ್ನಲ್ Red Hat ಎಂಟರ್ಪ್ರೈಸ್ ಲಿನಕ್ಸ್ 5ಕ್ಕೆ ೪ ಜೀಬಿಗಿಂತ ಹೆಚ್ಚಿನ RAM ಅನ್ನು ಪತ್ತೆ ಮಾಡಲು ಬಿಡುವುದಿಲ್ಲ. ನಿಮ್ಮ ಗಣಕವು ಈಗಾಗಲೆ ೪ ಜೀಬಿಗಿಂತ ಹೆಚ್ಚಿನ RAM ಹೊಂದಿದ್ದರೆ, ಅನುಸ್ಥಾಪನೆಯ ನಂತರ ಕರ್ನಲ್ಲಿನ ರೂಪಾಂತರಿಕೆಯಾದ kernel-PAE ಅನ್ನು ಅನುಸ್ಥಾಪಿಸುವುದು ಅಗತ್ಯ.

    ವಾಸ್ತವಿಕ ಅನುಸ್ಥಾಪನೆಯನ್ನು ಮಾಡಿದಾಗ ಇದು ಅನ್ವಯಿಸುವುದಿಲ್ಲ ಎಂಬುದನ್ನು ಗಮನಿಸಿ.

  • ಅನಕೊಂಡಾವನ್ನು PXE ಯೊಂದಿಗೆ ksdevice=bootif ನಿಯತಾಂಕವನ್ನು ಉಪಯೋಗಿಸಿಕೊಂಡು ಬೂಟ್ ಮಾಡುವಾಗ, ಅನುಸ್ಥಾಪನೆಯ ವೇಳೆಯಲ್ಲಿ ಬಳಸಲು ಎತರ್ನೆಟ್ ಅಂತರ್ಮುಖಿಯನ್ನು ನೀಡುವಂತೆ ಅಪೇಕ್ಷಿಸುತ್ತದೆ. ನಿಮ್ಮ ಎತರ್ನೆಟ್ ಸಾಧನವು ಸಂಪರ್ಕಿತವಾಗಿದ್ದರೆ, ಬದಲಿಗೆ ನಿಯತಾಂಕವನ್ನು ksdevice=link ಬಳಸಿ. ವ್ಯತಿರಿಕ್ತವಾಗಿ, ನೀವು ಅಂತರ್ಮುಖಿಯನ್ನು ನೀವು ಹಸ್ತ ಮುಖೇನವೂ ಸಹ ನಿಗದಿಸಬಹುದು.

ತಂತ್ರಜ್ಞಾನದ ಪೂರ್ವಾವಲೋಕನ

ಪ್ರಸ್ತುತ Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಚಂದಾ ಸೇವೆಯಲ್ಲಿ ತಂತ್ರಜ್ಞಾನದ ಪೂರ್ವಾವಲೋಕನ ಸ್ವರೂಪಕ್ಕೆ ಬೆಂಬಲ ಇಲ್ಲ, ಸಂಪೂರ್ಣವಾಗಿ ಕಾರ್ಯತತ್ಪರವಾಗಿಲ್ಲದಿರಬಹುದು, ಮತ್ತು ಸಾಮಾನ್ಯವಾಗಿ ಉತ್ಪಾದನೆಯಲ್ಲಿ ಉಪಯೋಗಿಸಲು ತಕ್ಕದಾದುದಲ್ಲ. ಆದರೆ, ಈ ಸ್ವರೂಪಗಳನ್ನು ಗ್ರಾಹಕರ ಅನುಕೂಲಕ್ಕನುಗುಣವಾಗಿ ಮತ್ತು ಸ್ವರೂಪವನ್ನು ಹೆಚ್ಚಿನ ಬೆಳಕಿಗೆ ತರಲು ಸೇರಿಸಿಕೊಳ್ಳಬಹುದು .

ಗ್ರಾಹಕರು ಈ ಸ್ವರೂಪವನ್ನು ಉತ್ಪಾದನೆಯಲ್ಲದೆ ವಾತಾವರಣದಲ್ಲಿ ಬಳಸಲು ಯೋಗ್ಯವೆನಿಸಬಹುದು. ತಂತ್ರಜ್ಞಾನ ಪೂರ್ವಾವಲೋಕನ ಸ್ವರೂಪವು ಸಂಪೂರ್ಣವಾಗಿ ಬೆಂಬಲಿತವಾಗುವು ಮೊದಲು ಗ್ರಾಹಕರು ಅದರ ಬಗೆಗಿನ ತಮ್ಮ ಫೀಡ್ ಬ್ಯಾಕ್ ಮತ್ತು ಕಾರ್ಯಮುಖಗೊಳಿಸುವೆಡೆಗಿನ ಸಲಹೆಗಳನ್ನು ನೀಡಬಹುದು. ಮುದ್ರಣ ದೋಷ ಪಟ್ಟಿಗಳನ್ನು ಅತ್ಯಧಿಕ ತೀವ್ರಮಟ್ಟದ ಭದ್ರತಾ ವಿಷಯಗಳಿಗೆ ನೀಡಲಾಗುತ್ತದೆ.

ತಂತ್ರಜ್ಞಾನ ಪೂರ್ವಾವಲೋಕನವನ್ನು ಅಭಿವೃದ್ಧಿಪಡಿಸುವಾಗ, ಹೆಚ್ಚುವರಿ ಘಟಕಗಳು ಸಾರ್ವಜನಿಕರಿಗೆ ಪರೀಕ್ಷಿಸಲು ಲಭ್ಯವಾಗಬಹುದು. ಮುಂಬರುವ ಬಿಡುಗಡೆಗಳಲ್ಲಿ ತಂತ್ರಜ್ಞಾನ ಪೂರ್ವಾವಲೋಕನವನ್ನು ಸ್ವರೂಪಗಳನ್ನು ಸಂಪೂರ್ಣವಾಗಿ ಬೆಂಬಲ ನೀಡುವುದು Red Hatನ ಉದ್ದೇಶ.

ಸ್ಥಿತಿ ಇಲ್ಲದ ಲಿನಕ್ಸ್ (Stateless Linux)

Red Hat ಎಂಟರ್ಪ್ರೈಸ್ ಲಿನಕ್ಸ್ 5ರ ಈ ಬಿಡುಗಡೆಯಲ್ಲಿ ಸ್ಥಿತಿಯಿಲ್ಲದ ಲಿನಕ್ಸ್ಗೆ ಮೂಲಭೂತ ವ್ಯವಸ್ಥೆಯ ತುಣುಕುಗಳನ್ನು ಸೇರಿಸಲಾಗಿದೆ. ಗಣಕವನ್ನು ಹೇಗೆ ಚಲಾಯಿಸುವುದು ಮತ್ತು ನಿಭಾಯಿಸುವುದು, ಸುಲಭವಾಗಿ ಬದಲಾಯಿಸುವ ಮೂಲಕ ಅಧಿಕ ಸಂಖ್ಯೆಯ ಗಣಕಗಳ ಸರಬರಾಜು ಹಾಗು ನಿರ್ವಹಣೆಯನ್ನು ಸರಳೀಕೃತವಾಗುವಂತೆ ರಚಿಸುವಲ್ಲಿನ ದಿಶೆಯಲ್ಲಿ ಸ್ಥಿತಿಯಿಲ್ಲದ ಲಿನಕ್ಸ್ ಒಂದು ಹೊಸ ರೀತಿಯ ಆಲೋಚನೆ. ತಯಾರಾದ ಗಣಕ ಚಿತ್ರಿಕೆಗಳನ್ನು ಸ್ಥಾಪಿಸುವ ಮೂಲಕ ಇದನ್ನು ಪ್ರಾಥಮಿಕವಾಗಿ ಸಾಧಿತವಾಗಿಸಬಹುದು, ಇದು ಅಧಿಕ ಸಂಖ್ಯೆಯ ಸ್ಥಿತಿಯಿಲ್ಲದ ಗಣಕಗಳಲ್ಲಿ ಪ್ರತಿರೂಪಗೊಂಡು ಹಾಗೂ ನಿರ್ವಹಿತವಾಗಿರುತ್ತದೆ, ಕಾರ್ಯವ್ಯವಸ್ಥೆಯನ್ನು 'ಓದಲು ಮಾತ್ರ' ವಿಧಾನದಲ್ಲಿ ಚಲಾಯಿಸುತ್ತದೆ(ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು /etc/sysconfig/readonly-root ಅನ್ನು ಸಂಪರ್ಕಿಸಿ).

ಈಗಿನ ಅಭಿವೃದ್ಧಿಯ ಸ್ಥಿತಿಯಲ್ಲಿ, ಸ್ಥಿತಿಯಿಲ್ಲದ ಸ್ವರೂಪಗಳು ಉದ್ದೇಶಿತ ಗುರಿಗಳ ಅಡಿಯಲ್ಲಿದೆ. ಹಾಗಾಗಿ ಈ ಸಾಮರ್ಥ್ಯವನ್ನು ತಂತ್ರಜ್ಞಾನ ಪೂರ್ವಾವಲೋಕನ ಎಂದು ಹೆಸರಿಸಲಾಗಿದೆ.

ಈ ಕೆಳಗಿನ ಪಟ್ಟಿಯು Red Hat ಎಂಟರ್ಪ್ರೈಸ್ ಲಿನಕ್ಸ್ 5ಯು ಹೊಂದಿರುವ ಆರಂಭಿಕ ಸಾಮರ್ಥ್ಯಗಳದ್ದಾಗಿದೆ:

  • NFSನ ಮೇಲೆ ಸ್ಥಿತಿ ಇಲ್ಲದ ಚಿತ್ರಿಕೆಯನ್ನು ಚಲಾಯಿಸಲಾಗುತ್ತಿದೆ

  • NFS ನ ಮೇಲೆ ಲೂಪ್ ಬ್ಯಾಕ್ ಮೂಲಕ ಸ್ಥಿತಿಯಿಲ್ಲದ ಚಿತ್ರಿಕೆಗಳನ್ನು ಚಲಾಯಿಸಲಾಗುತ್ತಿದೆ

  • iSCSI ಮೇಲೆ ಚಲಾಯಿಸಲಾಗುತ್ತಿದೆ

ಸ್ಥಿತಿಯಿಲ್ಲದ ಕೋಡ್ ಗಳನ್ನು ಪರೀಕ್ಷಿಸಲು ಆಸಕ್ತಿ ಇರುವವರು http://fedoraproject.org/wiki/StatelessLinuxHOWTOನಲ್ಲಿನ HOWTO ಅನ್ನು ಓದಲು ಹಾಗು stateless-list@redhat.comನಲ್ಲಿ ಸೇರ್ಪಡೆಯಾಗಲು ಸೂಚಿಸಲಾಗಿದೆ .

GFS2

GFS2 ಒಂದು GFS ಕಡತ ವ್ಯವಸ್ಥೆಯ ಆಧರಿತವಾದ ವಿಕಾಸಾತ್ಮಕ ಪ್ರಗತಿ. ಇದು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದರೂ, GFS2 ವು ಇನ್ನೂ ಉತ್ಪಾದನೆಗೆ ತಯಾರಿದೆ ಎಂದು ಪರಿಗಣಿತವಾಗಿಲ್ಲ. ಮುಂಬರುವ Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಅಪ್ಡೇಟುಗಳಲ್ಲಿ GFS2 ಅನ್ನು ಸಂಪೂರ್ಣವಾಗಿ ಬೆಂಬಲಿಸುವ ಗುರಿಯನ್ನು ಹೊಂದಲಾಗಿದೆ. ಇಲ್ಲಿ ಸ್ಥಳದಲ್ಲೇ ಬದಲಾಯಿಸಬಹುದಾದ ಉಪಯೋಗವನ್ನು ಹೊಂದಿದೆ, gfs2_convert, ಇದು ಹಳೆಯ GFS ಕಡತ ವ್ಯವಸ್ಥೆಯ ಮೆಟಡಾಟವನ್ನು ಅಪ್ಡೇಟ್ ಮಾಡಿ GFS2 ಆಗಿ ಬದಲಾಯಿಸುತ್ತದೆ.

FS-Cache

FS-Cache ಯು ಸ್ಥಳೀಯವಾಗಿ ಆರೋಹಿತವಾದ ಡಿಸ್ಕಿನ ಮೇಲೆ NFS ದತ್ತಾಂಶಗಳನ್ನು ಕ್ಯಾಶೆ ಮಾಡಲು ಬಳಕೆದಾರನಿಗೆ ಅನುಮತಿಸಬಲ್ಲ ದೂರದ ಕಡತ ವ್ಯವಸ್ಥೆಗಳನ್ನು ಸ್ಥಳೀಯವಾಗಿ ಹಿಡಿದಿಟ್ಟುಕೊಳ್ಳುವ ಒಂದು ಸೌಕರ್ಯ. FS-Cache ಸೌಕರ್ಯವನ್ನು ಹೊಂದಿಸಲು, cachefilesd RPMಅನ್ನು ಅನುಸ್ಥಾಪಿಸಿ ಮತ್ತು ಮಾಹಿತಿಗಾಗಿ /usr/share/doc/cachefilesd-<version>/README ಅನ್ನು ಸಂಪರ್ಕಿಸಿ.

<version>ಯನ್ನು ಅನುಸ್ಥಾಪಿಸಲ್ಪಟ್ಟಿರುವ cachefilesd ಪ್ಯಾಕೇಜಿಗೆ ಸರಿಹೊಂದುವ ಆವೃತ್ತಿಯೊಂದಿಗೆ ಬದಲಾಯಿಸಿ.

Compiz

Compiz ಒಂದು OpenGL-ಆಧರಿತ ಸಂಯೋಜಕ ವಿಂಡೋ ವ್ಯವಸ್ಥಾಪಕ. ಮಾಮೂಲಿಯ ವಿಂಡೋ ವ್ಯವಸ್ಥಾಪನೆಯ ಜೊತೆಗೆ, compiz ಒಂದು ಸಂಯೋಜಕ ವ್ಯವಸ್ಥಾಪಕವಾಗಿ, ಸಹವರ್ತನೀಯತೆ ಮತ್ತು ಒಟ್ಟಾರೆ ಡೆಸ್ಕ್ ಟಾಪಿನ ಪುನರ್ ಚಿತ್ರಿಸುವುದರೊಂದಿಗೆ ಅನುರೂಪಿಸಲು ಸಹ ಕಾರ್ಯತತ್ಪರವಾಗಿದ್ದು, ನಿರ್ವಿಘ್ನವಾದ ಡೆಸ್ಕಟಾಪಿನ ಅನುಭವವಾಗುವಂತೆ ಮಾಡುತ್ತದೆ.

Compiz ಲೈವ್ ತಂಬ್ ನೈಲ್ ವಿಂಡೋಗಳು, ವಿಂಡೋದ ಬೀಳುವ ನೆರಳುಗಳು, ವಿಂಡೋ ಚಿಕ್ಕದಾಗಿಸುವಾಗಿನ ಚಲನೆ ಮತ್ತು ವಾಸ್ತವ ಡೆಸ್ಕ್ ಟಾಪುಗಳ ಪರಸ್ಪರ ನಡುವೆ ಬದಲಾಯಿಸಲು ೩ಡಿ ಯಂತ್ರಾಂಶ ವೇಗವರ್ಧಕವನ್ನು ಉಪಯೋಗಿಸುತ್ತದೆ.

ಪ್ರಸ್ತುತ ರೆಂಡರಿಂಗ್ ಆರ್ಕಿಟೆಕ್ಚರಿನ ಮಿತಿಯ ಕಾರಣದಿಂದ, compiz ರೆಂಡರಿಂಗ್ OpenGL ಅನ್ವಯಗಳೊಂದಿಗೆ ಅಥವ Xv ವಿಸ್ತೃತದ ಅನ್ವಯಗಳೊಂದಿಗೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇಂತಹ ಅನ್ವಯಗಳು ತೊಂದರೆ ಮಾಡದಂತಹ ರೆಂಡರಿಂಗ್ ಆರ್ಟಿಫಾಕ್ಟುಗಳನ್ನು ವ್ಯಕ್ತ ಪಡಿಸುತ್ತದೆ; ಆದ ಕಾರಣ, compiz ವು ಪ್ರಸ್ತುತ ಒಂದು ತಂತ್ರಜ್ಞಾನ ಪೂರ್ವಾವಲೋಕನ.

Ext3 ಗೆ ವರ್ಧಕ

Red Hat ಎಂಟರ್ಪ್ರೈಸ್ ಲಿನಕ್ಸ್ 5ನಲ್ಲಿ, EXT3 ಕಡತ ವ್ಯವಸ್ಥೆಯ ಸಾಮರ್ಥ್ಯವನ್ನು ೮ಟೀಬಿಗಿಂತಲೂ ಜಾಸ್ತಿಗೊಳಿಸಿ ಗರಿಷ್ಠ ೧೬ ಟೀಬಿಯಷ್ಟು ಮಾಡಲಾಗಿದೆ. ಈ ಸಾಮರ್ಥ್ಯವನ್ನು ಒಂದು ತಾಂತ್ರಿಕ ಪೂರ್ವಾವಲೋಕನವಾಗಿ ಸೇರ್ಪಡಿಸಲಾಗಿದೆ, ಹಾಗು ಮುಂಬರುವ Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಬಿಡುಗಡೆಯಲ್ಲಿ ಸಂಪೂರ್ಣ ಬೆಂಬಲ ನೀಡುವ ಗುರಿಯನ್ನು ಹೊಂದಲಾಗಿದೆ.

AIGLX

AIGLX ಸಂಪೂರ್ಣವಾಗಿ ಬೆಂಬಲಿತವಾದ X ಪರಿಚಾರಕದ ಒಂದು ತಂತ್ರಜ್ಞಾನ ಪೂರ್ವಾವಲೋಕನ ಘಟಕ. ಇದು ಡೆಸ್ಕ್ ಟಾಪಿನ ಮೇಲೆ GL-ವೇಗವರ್ಧಿತ ಪರಿಣಾಮಗಳನ್ನು ಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಈ ಪರಿಯೋಜನೆಯು ಈ ಕೆಳಗಿನ ವಿಷಯಗಳನ್ನು ಒಳಗೊಂಡಿದೆ:

  • ಲಘುವಾಗಿ ಮಾರ್ಪಡಿಸಿದ ಒಂದು X ಪರಿಚಾರಕ

  • ಹೊಸ ಪ್ರೋಟೋಕಾಲ್ ಬೆಂಬಲವನ್ನು ಸೇರಿಸ ಬಲ್ಲ ಒಂದು ಅಪ್ಡೇಟೇಡ್ ಮೇಸಾ ಪ್ಯಾಕೇಜ್

ಈ ಘಟಕಗಳನ್ನು ಅನುಸ್ಥಾಪಿಸುವುದರಿಂದ, ಕೆಲವೇ ಬದಲಾವಣೆಗಳೊಂದಿಗೆ ನಿಮ್ಮ ಡೆಸ್ಕ್ ಟಾಪ್ ನಲ್ಲಿ GL-ವೇಗವರ್ಧಿತ ಪರಿಣಾಮಗಳನ್ನು, ಹಾಗೆಯೇ X ಪರಿಚಾರಕವನ್ನು ಬದಲಾಯಿಸದೆ ಅವುಗಳನ್ನು ಅಶಕ್ತ ಮತ್ತು ಶಕ್ತಗೊಳಿಸಬಲ್ಲ ಸಾಮರ್ಥ್ಯವನ್ನು ನೀವು ಹೊಂದಬಹುದು. AIGLX ಯಂತ್ರಾಂಶದ GLX ವೇಗವರ್ಧಕದ ಲಾಭ ಪಡೆಯಲು ದೂರದ GLX ಅನ್ವಯಗಳನ್ನು ಸಹ ಶಕ್ತಗೊಳಿಸುತ್ತದೆ.

Frysk GUI

frysk ಪರಿಯೋಜನೆಯು ಒಂದು ಚುರುಕಾದ, ಹರಡಲ್ಪಟ್ಟ, ಯಾವಾಗಲೂ ಆನ್ ಆಗಿ ಗಣಕವನ್ನು ಪರಿವೀಕ್ಷಿಸುತ್ತಿರುವ ಮತ್ತು ದೋಷ ನಿವಾರಣ ಉಪಕರಣವನ್ನು ನಿರ್ಮಿಸಿ, ಅಭಿವೃದ್ಧಿಗಾರರು ಹಾಗು ವ್ಯವಸ್ಥಾ ವ್ಯವಸ್ಥಾಪಕರಿಗೆ ಈ ಕೆಳಗಿನ ಅನುಮತಿ ನೀಡಬಲ್ಲದಾದ ಉದ್ದೇಶವನ್ನು ಹೊಂದಿದೆ:

  • ಚಲಾಯಿಸುವ ಪ್ರಕ್ರಿಯೆ ಮತ್ತು ಎಳೆಗಳನ್ನು ಪರಿವೀಕ್ಷಿಸು ( ಸೃಜನೆ ಮತ್ತು ವಿನಾಶ ಘಟನೆಯನ್ನು ಸೇರಿಸಿ)

  • locking primitiveಗಳ ಉಪಯೋಗವನ್ನು ಪರಿವೀಕ್ಷಿಸು

  • deadlockಗಳನ್ನು ಹೊರತೋರಿಸು

  • ದತ್ತಾಂಶಗಳನ್ನು ಒಟ್ಟುಗೂಡಿಸು

  • ಈ ಪಟ್ಟಿಯಲ್ಲಿ ಕೊಟ್ಟ ಯಾವುದೇ ಪ್ರಕ್ರಿಯೆಯ ದೋಷ ನಿವಾರಣೆ ಮಾಡಬಲ್ಲ ಅಥವ ಕುಸಿದ ಅಥವ ತಪ್ಪಾಗಿ ವರ್ತಿಸುತ್ತಿರುವ ಒಂದು ವಿಂಡೋದಲ್ಲಿ frysk ಗೆ ಯಾವುದೇ ಒಂದು ಆಕರ ಕೋಡನ್ನು (ಅಥವ ಬೇರೆ) ತೆರೆಯಲು ಅನುಮತಿಸಬಲ್ಲ

Red Hat ಎಂಟರ್ಪ್ರೈಸ್ ಲಿನಕ್ಸ್ 5ನಲ್ಲಿ frysk ಚಿತ್ರಾತ್ಮಕ ಉಪಯೋಗಿ ಅಂತರ್ಮುಖಿ ಒಂದು ತಂತ್ರಜ್ಞಾನ ಪೂರ್ವಾವಲೋಕನ, ಆದರೆ frysk ಆಜ್ಞಾ ಸಾಲಿನ ಅಂತರ್ಮುಖಿಯು ಸಂಪೂರ್ಣವಾಗಿ ಬೆಂಬಲಿತವಾಗಿದೆ.

Systemtap

Systemtap ಯು ಚಾಲನೆಯಲ್ಲಿರುವ ಲಿನಕ್ಸ್ ವ್ಯವಸ್ಥೆಯ ಬಗೆಗಿನ ಮಾಹಿತಿಯನ್ನು ಒಟ್ಟುಗೂಡಿಸುವಿಕೆಯನ್ನು ಸರಳಗೊಳಿಸುವ ಉಚಿತ ತಂತ್ರಾಂಶ (GPL) ಸೌಕರ್ಯವನ್ನು ನೀಡುತ್ತದೆ. ಇದು ಒಂದು ಕಾರ್ಯ ನಿರ್ವಹಣೆ ಅಥವ ಕಾರ್ಯಕಾರಿ ತೊಂದರೆ ನಿವಾರಣೆಗೆ ಸಹಾಯ ಒದಗಿಸುತ್ತದೆ. systemtapನ ಸಹಾಯದಿಂದ, ಅಭಿವೃದ್ಧಿಗಾರರು ದತ್ತವನ್ನು ಪಡೆಯಲು ಬೇಕಿರುವ ಕಷ್ಟಕರ ಮತ್ತು ವಿಸ್ತಾರವಾದ ಸಾಧನ, ರಿಕಂಪೈಲ್, ಅನುಸ್ಥಾಪನೆ, ಮತ್ತು ರೀಬೂಟ್ ಅನುಕ್ರಮಗಳೊಂದಿಗೆ ಇನ್ನು ಹಾದು ಹೋಗ ಬೇಕಿಲ್ಲ.

Dogtail

Dogtail ಯು ಒಂದು GUI ಪರೀಕ್ಷಣಾ ಉಪಕರಣ ಮತ್ತು ಡೆಸ್ಕ್ ಟಾಪ್ ಅನ್ವಯಗಳೊಂದಿಗೆ ಸಂಪರ್ಕಿಸಲು Accessibility ತಾಂತ್ರಿಕತೆಯನ್ನು ಉಪಯೋಗಿಸಬಲ್ಲ, Pythonನಲ್ಲಿ ಬರೆಯಲ್ಪಟ್ಟ ಯಾಂತ್ರೀಕೃತಗೊಂಡ ಫ್ರೇಮ್ ವರ್ಕ್.

ಭಾರತೀಯ ಮತ್ತು ಸಿಂಹಳೀಯ ಭಾಷೆಗಳಿಗೆ ಬೆಂಬಲ

ತಂತ್ರಜ್ಞಾನ ಪೂರ್ವಾವಲೋಕನವಾಗಿ Red Hat ಎಂಟರ್ಪ್ರೈಸ್ ಲಿನಕ್ಸ್ 5 ಕೆಳಗಿನ ಭಾಷೆಗಳಿಗೆ ಬೆಂಬಲವನ್ನು ನೀಡುತ್ತದೆ:

  • ಅಸ್ಸಾಮಿ

  • ಕನ್ನಡ

  • ಸಿಂಹಳೀಯ

  • ತೆಲುಗು

ಈ ಭಾಷೆಗಳನ್ನು ಹೇಗೆ ಅನುಸ್ಥಾಪಿಸುವುದು ಹಾಗೂ ಬೆಂಬಲವನ್ನು ಶಕ್ತಗೊಳಿಸುವುದು ಎಂಬುದರ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ಈ ದಸ್ತಾವೇಜಿನಅಂತರಾಷ್ಟ್ರೀಕರಣ ವಿಭಾಗವನ್ನು ಸಂಪರ್ಕಿಸಿ.

dm-multipath ಸಾಧನಗಳಿಗೆ ಅನುಸ್ಥಾಪಿಸುತ್ತಿರುವುದು

Anacondaವು ಪತ್ತೆ ಹಚ್ಚುವ, ನಿರ್ಮಿಸುವ, ಮತ್ತು dm-multipath ಸಾಧನಗಳಿಗೆ ಅನುಸ್ಥಾಪಿಸುವ ಸಾಮರ್ಥ್ಯವನ್ನು ಹೊಂದಿದ. ಈ ಲಕ್ಷಣವನ್ನು ಶಕ್ತಗೊಳಿಸಲು,ನಿಯತಾಂಕ mpath ವನ್ನು ಕರ್ನಲ್ ಬೂಟ್ ಸಾಲಿಗೆ ಸೇರಿಸಿ.

ಒಂದು ಸಾಧನದ major:minor ಸಂಖ್ಯೆಗಳಲ್ಲಿ ಬದಲಾವಣೆಯಾದರೆ, ನಿಯತಾಂಕ mpath ವು ಬೂಟ್ ವಿಫಲತೆಗೆ ಕಾರಣವಾಗಬಹುದು. ಈ ತೊಂದರೆಯನ್ನು Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಮುಂಬರುವ ಅಪ್ಡೇಟುಗಳಲ್ಲಿ ಸರಿಪಡಿಸಲಾಗುವುದು.

ಅನುಸ್ಥಾಪನೆ / ಬೂಟ್ iSCSI ತಂತ್ರಾಂಶ ಆರಂಭಕ (ಮುಕ್ತ-iscsi)

ಈಗ ಅನಕೊಂಡಾ ಒಂದು iSCSI ಸಾಧನವನ್ನು ಅನುಸ್ಥಾಪಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಬೂಟ್ ಮಾಡುವುದು ಮತ್ತು ಅನುಸ್ಥಾಪಿಸುವುದು QLogic qla4xxx ಯಂತ್ರಾಂಶ ಆರಂಭಕದಿಂದ ಸಂಪೂರ್ಣವಾಗಿ ಬೆಂಬಲಿತವಾಗಿದೆ. ಆದರೆ, open-iscsi ತಂತ್ರಾಂಶ ಆರಂಭಕಕ್ಕಾಗಿ ಒಂದು iSCSI ಸಾಧನವನ್ನು ಅನುಸ್ಥಾಪಿಸುವ ಸಾಮರ್ಥ್ಯವು ಪ್ರಸ್ತುತ ಈ ಕೆಳಗಿನ ವಿಷಯಗಳ ಕಾರಣದಿಂದಾಗಿ ಒಂದು ತಂತ್ರಜ್ಞಾನ ಪೂರ್ವಾವಲೋಕನ ಎಂದು ನಿಗದಿಪಡಿಸಲಾಗಿದೆ:

  • ಪಠ್ಯ ಕ್ರಮದ ಅನುಸ್ಥಾಪನೆಯು ಪೂರ್ಣಗೊಳ್ಳುವುದಿಲ್ಲ. ನೀವು ಚಿತ್ರಾತ್ಮಕ ಅನುಸ್ಥಾಪನೆಯನ್ನು ಮಾಡಬೇಕು, ಅಥವ ಒಂದು ಸ್ವಯಂಚಾಲಿತ ಕಿಕ್-ಸ್ಟಾರ್ಟ್ ಅನುಸ್ಥಾಪನೆಯನ್ನು ಮಾಡಬೇಕು

  • ಮಾಧ್ಯಮ ಆಧರಿತ ಅನುಸ್ಥಾಪನೆಗಳು ಪೂರ್ಣಗೊಳ್ಳುವುದಿಲ್ಲ. ನೀವು ಒಂದು ಜಾಲಬಂಧ ಅನುಸ್ಥಾಪನೆಯನ್ನು ಮಾಡಬೇಕು.

  • ಘಟನೆಗಳ ಸಮಯಕ್ಕಾಧರಿತವಾಗಿ, ಅನಕೊಂಡ ಎಲ್ಲಾ iSCSI ಟಾರ್ಗೆಟ್ಟುಗಳನ್ನು ಅಥವ ಅಥವ LUNಗಳನ್ನು ಪತ್ತೆ ಹಚ್ಚಲು ವಿಫಲವಾಗಬಹುದು. ಇದು ಘಟಿಸಿದಾಗ, ಶೇಖರಣೆಯನ್ನು iSCSI ಆಜ್ಞೆಗಳ ಮೂಲಕ ಸಂರಚಿಸಲು ಅನುಸ್ಥಾಪಕ ಶೆಲ್ಲನ್ನು ಉಪಯೋಗಿಸಿ.

  • iscsid ಡೆಮೊನ್ ಸರಿಯಾದ ರೀತಿಯಲ್ಲಿ ಆರಂಭಗೊಳ್ಳದಿರಬಹುದು. ಅಂತಹ ಒಂದು ಘಟನೆಯು ಗಣಕವು ಜಾಲಬಂಧದ ತೊಂದರೆಗಳು, SCSI/iSCSI ಟೈಮ್-ಔಟ್ ಗಳು, ಹಾಗು ಗುರಿ ದೋಷಗಳಂತಹ ಎಲ್ಲಾ iSCSI ದೋಷಗಳನ್ನು ನಿಭಾಯಿಸುವುದನ್ನು ನಿರ್ಬಂಧಿಸಬಹುದು. iscsid ಡೆಮೋನ್ ಚಾಲನೆಯಲ್ಲಿದೆ ಎಂದು ಇದನ್ನು ಖಾತ್ರಿಪಡಿಸಿಕೊಳ್ಳಲು, iscsiadm -m session -i ಆಜ್ಞೆಯನ್ನು ಚಲಾಯಿಸಿ ಹಾಗು, Internal iscsid Session State: ಸಾಲಿನಲ್ಲಿ ಒಂದು ಮೌಲ್ಯ ವರದಿಯಾಗಿದೆಯೇ ಎಂದು ಪರೀಕ್ಷಿಸಿ (ಅದು ಯಾವುದೇ ಮೌಲ್ಯವಾಗಿರಬಹುದು).

  • ಕೆಲವೊಂದು iSCSI ಗುರಿಯನ್ನು ನೆರವೇರಿಸುವಾಗ, ಗಣಕವನ್ನು ಮುಚ್ಚುವಾಗ ಸ್ಥಗಿತಗೊಳ್ಳಬಹುದು.

  • ಕೆಲವೊಂದು iSCSI ಗುರಿಯನ್ನು ನೆರವೇರಿಸುವಾಗ, ಗಣಕವನ್ನು ರೀಬೂಟ್ ಮಾಡುವಾಗ ಸ್ಥಗಿತಗೊಳ್ಳಬಹುದು.ಇದನ್ನು ತಪ್ಪಿಸಲು, ಗಣಕವನ್ನು ಮುಚ್ಚಿ ಹಾಗು ಪುನಃ ಬೂಟ್ ಮಾಡಿ (ಒಂದು ಸೆಶನ್ನಿನಿಂದ ನೇರವಾಗಿ ರೀಬೂಟ್ ಮಾಡುವ ಬದಲು).

  • iSCSI ಸಾಧನಗಳಿಂದ IBM System p ಯಲ್ಲಿ ಬೂಟ್ ಮಾಡುವುದು ನಂಬಿಕಾರ್ಹವಾಗಿ ಕೆಲಸ ಮಾಡುವುದಿಲ್ಲ. ಒಂದು ಸಾಧನದಲ್ಲಿ ಅನುಸ್ಥಾಪನೆ ಯಶಸ್ವಿಯಾಗಿದೆ ಎಂದು ತೋರಿಸಿದರೂ, ಅದರಿಂದ ದೊರೆತ ಅನುಸ್ಥಾಪನೆಯು ಸರಿಯಾಗಿ ಬೂಟ್ ಆಗುವುದಿಲ್ಲ.

  • ಅನುಸ್ಥಾಪನೆಯ ನಂತರದ ಪ್ರಥಮ ಬೂಟ್ ನಲ್ಲಿ, ನಿಮಗೆ ಈ ಕೆಳಗಿನ ರೀತಿಯ SELinux ದೋಷಗಳು ಕಾಣಿಸಿಕೊಳ್ಳಬಹುದು:

    kernel: audit(1169664832.270:4): avc:  denied  { read
    } for  pid=1964 comm="iscsid" 
    

    ಇದರೊಂದಿಗೆ ಕೆಲಸ ಮಾಡಲು, ಗಣಕವನ್ನು enforcing=0 ಕರ್ನಲ್ ನಿಯತಾಂಕಗಳೊಂದಿಗೆ ಬೂಟ್ ಮಾಡಿ. ಒಮ್ಮೆ ಗಣಕವು ಸರಿಯಾಗಿ ಬೂಟ್ ಆಯಿತೆಂದರೆ, ಒತ್ತಾಯ ಕ್ರಮವನ್ನು ಮರಳುವಂತೆ ಮಾಡಲು setenforce 1 ಆಜ್ಞೆಯನ್ನು ಬಳಸಿ.

ಈ ಮಿತಿಗಳನ್ನು Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ಮುಂಬರುವ ಅಪ್ಡೇಟುಗಳಲ್ಲಿ ಪರಿಹರಿಸಲಾಗುವುದು.

ಗೊತ್ತಿರುವ ವಿಷಯಗಳು

  • MegaRAID ಚಾಲಕಗಳನ್ನು ಉಪಯೋಗಿಸುವ ಅತಿಥೇಯ ಬಸ್ ಅಡಾಪ್ಟರುಗಳನ್ನು "Mass Storage"ಯನ್ನು ಮೀರಿಸುವ ಕ್ರಮಕ್ಕೆ ಹೊಂದಿಸಬೇಕು, "I2O"ಮೀರಿಸುವ ಕ್ರಮಕ್ಕಲ್ಲ. ಹೀಗೆ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:

    1. MegaRAID BIOS Set Up Utilityಯನ್ನು ನಮೂದಿಸಿ.

    2. Adapter settings menuಅನ್ನು ನಮೂದಿಸಿ.

    3. ಉಳಿದ ಅಡಾಪ್ಟರ್ ಆಯ್ಕೆಗಳ ಅಡಿಯಲ್ಲಿ,ಎಮ್ಯುಲೇಶನ್ ಅನ್ನು ಆರಿಸಿ ಮತ್ತು ಅದನ್ನು ಮಾಸ್ ಸ್ಟೋರೇಜ್ಗೆ ಹೊಂದಿಸಿ.

    ಎಲ್ಲಿಯಾದರೂ ಅಡಾಪ್ಟರ್ ಸರಿಯಲ್ಲದ ರೀತಿಯಲ್ಲಿ "I2O" ಎಮ್ಯುಲೇಶನ್ನಿಗೆ ಹೊಂದಿಸಲ್ಪಟ್ಟಿದ್ದರೆ, ಗಣಕವು i2o ಚಾಲಕವನ್ನು ಲೋಡ್ ಮಾಡಲು ಪ್ರಯತ್ನಿಸುತ್ತದೆ. ಇದು ವಿಫಲಗೊಂಡು, ಸರಿಯಾದ ಚಾಲಕವನ್ನು ಲೋಡು ಮಾಡುವುದನ್ನು ತಪ್ಪಿಸುತ್ತದೆ.

    ಹಿಂದಿನ Red Hat ಎಂಟರ್ಪ್ರೈಸ್ ಲಿನಕ್ಸ್ ಬಿಡುಗಡೆಗಳು ಸಾಮಾನ್ಯವಾಗಿ MegaRAID ಚಾಲಕಗಳನ್ನು ಲೋಡು ಮಾಡುವ ಮೊದಲು I2O ಚಾಲಕವನ್ನು ಲೋಡ್ ಮಾಡುವ ಪ್ರಯತ್ನ ಮಾಡುವುದಿಲ್ಲ. ಇದರ ಹೊರತಾಗಿ, ಲಿನಕ್ಸ್ ಅನ್ನು ಉಪಯೋಗಿಸಿದಾಗ ಯಾವಾಗಲೂ ಯಂತ್ರಾಂಶವು "Mass Storage"ನ ಎಮುಲೇಶನ್ ಕ್ರಮಕ್ಕೆ ಹೊಂದಿಸಿರಬೇಕು.

  • vcpus=2ನಿಂದ ಸ್ವರೂಪಿತವಾದ ಸಂಪೂರ್ಣ ವಾಸ್ತವೀಕರಣ ಅತಿಥಿಯನ್ನು ಅನುಸ್ಥಾಪಿಸಿದಾಗ, ಸಂಪೂರ್ಣ ವಾಸ್ತವೀಕರಣಗೊಂಡ ಅತಿಥಿಯು ಬೂಟಾಗಲು ವಿನಾಕಾರಣ ಹೆಚ್ಚು ಸಮಯವನ್ನು ತೆಗೆದುಕೊಳ್ಳ ಬಹುದು.

    ಇದರೊಂದಿಗೆ ಕೆಲಸ ಮಾಡಲು, xm destroy <guest id> ಆಜ್ಞೆಯನ್ನು ಉಪಯೋಗಿಸಿಕೊಂಡು ನಿಧಾನ-ಬೂಟಿಂಗ್ ಅತಿಥಿಯನ್ನು ನಾಶಗೊಳಿಸಿ ಮತ್ತು xm create <guest id> ಅನ್ನು ಉಪಯೋಗಿಸಿ ನಂತರ ಅದೇ ಅತಿಥಿಯನ್ನು ಆರಂಭಿಸಿ.

  • Red Hat ಎಂಟರ್ಪ್ರೈಸ್ ಲಿನಕ್ಸ್ 5ಯು openmpi-1.1.1-4.el5 ವನ್ನು ಹೊಂದಿದ್ದು (OFED 1.1 ವಿತರಣೆಯಿಂದ), ಇದು ಕೆಲಸ ಮಾಡುತ್ತಿರುವಾಗ ಕೊನೆಯಲ್ಲಿ ಸಂಪೂರ್ಣವಾಗಿ ನಿಲ್ಲಲ್ಪಡುವುದು ಕಂಡುಬಂದಿದೆ. openmpiವು ಕೆಲಸವನ್ನು ನಿರೀಕ್ಷಣೆಯಿಂದ ಕೆಲಸಮಯದವರೆಗೆ ರಾಶಿ ಹಾಕಿಕೊಂಡ ನಂತರ ರೀತಿ ಜರುಗುತ್ತದೆ.

    openmpiನ ಅಪ್ಡೇಟಡ್ ಆವೃತ್ತಿಗಳಿಗಾಗಿ, ದಯವಿಟ್ಟು http://people.redhat.com/dledford/Infiniband/openmpi ಅನ್ನು ನೋಡಿ

  • ಸಂಪೂರ್ಣ ವಾಸ್ತವಿಕರಣಗೊಂಡ Red Hat ಎಂಟರ್ಪ್ರೈಸ್ ಲಿನಕ್ಸ್ 5ನಲ್ಲಿ ವಿಂಡೋಸ್ ಪರಿಚಾರಕ ೨೦೦೩ ಅನ್ನು ಅತಿಥಿಯಾಗಿ ಅನುಸ್ಥಾಪಿಸುವುದರಿಂದ ಅದು ಅನಿರೀಕ್ಷಿತವಾಗಿ ಕೊನೆಗೊಳ್ಳಬಹುದು. ಹೀಗೆ ಆದಾಗ ಚಿತ್ರಾತ್ಮಕ ಕನ್ಸೋಲ್ ವಿಂಡೋ ಮುಚ್ಚಲ್ಪಡುತ್ತದೆ, ಮತ್ತು ಅತಿಥಿಯು Virtual Machine Manager ನಲ್ಲಿನ ಯಂತ್ರಗಳ ಪಟ್ಟಿಯಿಂದ ಮಾಯವಾಗಿ, ಒಂದು Broken pipe ದೋಷಕ್ಕೆ ಕಾರಣವಾಗುತ್ತದೆ.

    ಈ ತೊಂದರೆಯನ್ನು ಮುಂಬರುವ Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ಅಪ್ಡೇಟುಗಳಲ್ಲಿ ಪರಿಹರಿಸಲಾಗುವುದು. ಇದರೊಂದಿಗೆ ಕೆಲಸ ಮಾಡಲು, ಟರ್ಮಿನಲ್ಲಿ ಈ ಆಜ್ಞೆಯನ್ನು ಉಪಯೋಗಿಸಿ:

    xm create /etc/xen/<name of guest machine>

    ನಂತರದಲ್ಲಿ, ವಾಸ್ತವ ಗಣಕವನ್ನು ತೆರೆ.

  • ಸೀಡಿ/ಡೀವಿಡಿ ಇಂದ ಸಂಪೂರ್ಣವಾಗಿ ವಾಸ್ತವೀಕರಣಗೊಂಡ Windows Server 2003 ಅನ್ನು ನಿರ್ಮಿಸುವಾಗ, ಎರಡನೇ ಹಂತದ ಅತಿಥಿ ಅನುಸ್ಥಾಪನೆಯು ರೀಬೂಟ್ ಆದ ನಂತರ ಮುಂದುವರೆಯುತ್ತದೆ.

    ಇದರೊಂದಿಗೆ ಕೆಲಸ ಮಾಡಲು, ಸೀಡಿ / ಡೀವಿಡಿ ಸಾಧನಗಳಿಗೆ ಸರಿಯಾಗಿ ಒಂದು ನಮೂದನ್ನು ಸೇರಿಸುವ ಮೂಲಕ /etc/xen/<name of guest machine> ಅನ್ನು ಸಂಪಾದಿಸಿ.

    ಎಲ್ಲಿಯಾದರೂ ಒಂದು ಸಾಮಾನ್ಯ ಕಡತದ ಅನುಸ್ಥಾಪನೆಯನ್ನು ವಾಸ್ತವ ಸಾಧನವಾಗಿ ಉಪಯೋಗಿಸಲ್ಪಟ್ಟರೆ, ಡಿಸ್ಕ್ ಸಾಲಿನ /etc/xen/<name of guest machine> ಈ ರೀತಿ ಓದಲ್ಪಡುತ್ತದೆ:

    disk = [ 'file:/PATH-OF-SIMPLE-FILE,hda,w']
    

    ಅತಿಥೇಯದ ಮೇಲೆ /dev/dvd ಆಗಿ ಇರುವ ಒಂದು ಡೀವಿಡಿ-ರಾಮ್ ಸಾಧನವನ್ನು ಅನುಸ್ಥಾಪನೆಯ ೨ನೇ ಮಜಲಿನಲ್ಲಿ 'phy:/dev/dvd,hdc:cdrom,r'ನಂತಹ ನಮೂದನ್ನು ಸೇರಿಸುವ ಮೂಲಕ hdc ಆಗಿ ದೊರೆಯುವಂತೆ ಮಾಡಬಹುದಾಗಿದೆ. ಡಿಸ್ಕ್ ಸಾಲು ಈಗ ಈ ಕೆಳಗಿನ ರೀತಿಯಲ್ಲಿ ಓದಲ್ಪದುತ್ತದೆ:

    disk = [ 'file:/opt/win2003-sp1-20061107,hda,w', 'phy:/dev/dvd,hdc:cdrom,r']
    

    ಉಪಯೋಗಿಸಬೇಕಾದ ನಿಖರ ಸಾಧನ ಮಾರ್ಗವು ಯಂತ್ರಾಂಶಕ್ಕನುಗುಣವಾಗಿ ಬದಲಾಗುತ್ತದೆ.

  • rmmod xennet ಯು domUಅನ್ನು ಕುಸಿಯಲು ಕಾರಣವಾಗುತ್ತದೆ; ಇದು ವಾಸ್ತವೀಕರಣದ ಗ್ರಾಂಟ್ ಟೇಬಲ್ ವಿವಾದದ ನಿಮಿತ್ತ ಆಗಿದೆ. ಗ್ರಾಂಟ್ ಟೇಬಲ್ ಕಾರ್ಯಗಳನ್ನು ಅನುರೂಪವಾಗಿ ಮಾಡಲಾಗದ ವಾಸ್ತವೀಕರಣ ಘಟಕದಲ್ಲಿನ ಸದ್ಯದ ಅಸಮರ್ಥತೆಯು ಇದಕ್ಕೆ ಕಾರಣವಾಗಿದೆ, xennet ಮಾಡ್ಯುಲನ್ನು ಅತಿಥಿಗಳಲ್ಲಿ ಅನ್-ಲೋಡ್ ಮಾಡುವುದು ಸುರಕ್ಷಿತವಲ್ಲ. ಅಂತಹ ಸಂದರ್ಭಗಳಲ್ಲಿ, ಗ್ರಾಂಟ್ ಟೇಬಲ್ಲುಗಳನ್ನು ಬ್ಯಾಕೆಂಡ್-ಫ್ರಂಟೆಂಡ್ ಸಂವಾದಕ್ಕೆ ಬಳಸಲಾಗುತ್ತದೆ, ಮತ್ತು ಬ್ಯಾಕೆಂಡ್ ರೆಫರೆನ್ಸುಗಳನ್ನು ವಿತರಣೆ ಮಾಡುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ, ಇದು ಅನಿವಾರ್ಯ ಮೆಮೊರಿ ಸೋರಿಕೆಗೆ ಕಾರಣವಾಗುತ್ತದೆ.

    ಈ ವಿಷಯವು Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ಮುಂಬರುವ ಕಿರಿಯ ಬಿಡುಗಡೆಯಲ್ಲಿ ನಿವಾರಿಸಲ್ಪಡುತ್ತದೆ. ಈಗ ಸದ್ಯದಲ್ಲಿ, ಬಳಕೆದಾರರು ಅತಿಥಿಯಲ್ಲಿ xennet ಮಾಡ್ಯೂಲನ್ನು ಇಳಿಸುವುದನ್ನು ಮಾಡದಿರಲು ಸಲಹೆ ಮಾಡುತ್ತದೆ.

  • ethtool eth0 ಅನ್ನು ಚಲಾಯಿಸುವುದರಿಂದ ಎತರ್ನೆಟ್ ಕಾರ್ಡ್ ಹೊಂದಾಣಿಕೆಗಳ ಬಗೆಗಿನ ಅಪೂರ್ಣ ಮಾಹಿತಿ ನೀಡುತ್ತದೆ. ಇದು ಒಂದು ವಾಸ್ತವೀಕೃತಗೊಂಡ ಕರ್ನಲ್ಲಿನಿಂದ ಚಲಾಯಿಸಲ್ಪಟ್ಟ ಗಣಕಗಳಲ್ಲಿ ಮಾತ್ರವೇ ಘಟಿಸುತ್ತದೆ, ಏಕೆಂದರೆ ಭೌತಿಕ ಎತರ್ನೆಟ್ ಸಾಧನವು peth0 ಎಂದು ಗುರುತಿಸಲ್ಪಡುವಲ್ಲಿ ವಾಸ್ತವೀಕರಣಗೊಂಡ ಘಟಕಗಳು ಜಾಲಬಂಧ ಸೆಟ್-ಅಪ್ ಗಳನ್ನು ಉಪಯೋಗಿಸುತ್ತವೆ. ಸದ್ಯದಲ್ಲಿ, ಭೌತಿಕ ಎತರ್ನೆಟ್ ಸಾಧನಗಳ ಬಗೆಗಿನ ಮಾಹಿತಿಯನ್ನು ಮರುಪಡೆಯಲು ethtool peth0ವು ಸರಿಯಾದ ಆಜ್ಞೆಯಾಗಿದೆ.

  • Red Hat ಎಂಟರ್ಪ್ರೈಸ್ ಲಿನಕ್ಸ್ 5ಅನ್ನು ಚಿಪ್ ಸೆಟ್ ಅನುಸ್ಥಾಪಿತವಾಗಿರುವnVidia CK804 ಗಣಕದಲ್ಲಿ ಉಪಯೋಗಿಸುವಾಗ, ನಿಮಗೆ ಈ ರೀತಿಯ ಕರ್ನಲ್ ಸಂದೇಶಗಳು ದೊರೆಯಬಹುದು:

    kernel: assign_interrupt_mode Found MSI capability
    kernel: pcie_portdrv_probe->Dev[005d:10de] has invalid IRQ. Check vendor BIOS
    

    ಈ ಸಂದೇಶಗಳು ಕೆಲವೊಂದು PCI-ಪೋರ್ಟುಗಳು IRQಗಳಿಗಾಗಿ ಕೋರುತ್ತಿಲ್ಲ ಎಂದು ಸೂಚಿಸುತ್ತದೆ, ಹಾಗೆಯೇ, ಈ ಸಂದೇಶಗಳು ಯಾವುದೇ ಕಾರಣಕ್ಕೂ ಗಣಕದ ಕಾರ್ಯ ನಿರ್ವಹಣೆಯ ಮೇಲೆ ಪ್ರಭಾವ ಬೀರುವುದಿಲ್ಲ.

  • ಕೆಲವೊಂದು Cisco Aironet ವೈರ್ ಲೆಸ್ ಸಾಧನಗಳು NetworkManager ಒಂದು SSIDಯನ್ನು ಪ್ರಸಾರ ಮಾಡದ ವೈರ್ ಲೆಸ್ ಜಾಲಬಂಧಗಳ ಸಂಪರ್ಕ ಮಾಹಿತಿಗಳನ್ನು ಶೇಖರಿಸದಂತೆ ತಡೆಯುತ್ತದೆ. ಇದು Cisco Aironet ವೈರ್ ಲೆಸ್ ಸಾಧನದ ಒಂದು ಫರ್ಮ್ ವೇರ್ ಮಿತಿಯಿಂದ ಆಗಿರುತ್ತದೆ.

  • Cisco Aironet MPI-350 ವೈರ್-ಲೆಸ್ ಕಾರ್ಡುನ್ನು ಹೊಂದಿದ ಲ್ಯಾಪ್-ಟಾಪ್ ಗಳಿಗೆ ತಂತಿಯುಕ್ತ ಎತರ್ನೆಟ್ ಪೋರ್ಟನ್ನು ಉಪಯೋಗಿಸಿ ಜಾಲಬಂಧ ಆಧರಿತ ಅನುಸ್ಥಾಪನೆಯನ್ನು ಮಾಡುವಾಗ DHCP ವಿಳಾಸವನ್ನು ಪಡೆಯುವ ಯತ್ನದಲ್ಲಿ ಗಣಕ ಸ್ತಗಿತಗೊಳ್ಳಬಹುದು.

    ಇದರೊಂದಿಗೆ ಕೆಲಸ ಮಾಡಲು, ನಿಮ್ಮ ಅನುಸ್ಥಾಪನೆಗೆ ಸ್ಥಳೀಯ ಮಾಧ್ಯಮವನ್ನು ಉಪಯೋಗಿಸಿ. ಬದಲಾಗಿ, ಅನುಸ್ಥಾಪನೆಗೂ ಮೊದಲು ನೀವು ಲ್ಯಾಪ್ಟಾಪಿನ BIOS ನ ವೈರ್ಲೆಸ್ ಕಾರ್ಡನ್ನು ಅಶಕ್ತಗೊಳಿಸಬಹುದು (ಅನುಸ್ಥಾಪನೆ ಮುಗಿದ ನಂತರ ನೀವು ವೈರ್ಲೆಸ್ ಕಾರ್ಡನ್ನು ಪುನಃ ಶಕ್ತಗೊಳಿಸಬಹುದು).

  • ಪ್ರಸ್ತುತ, system-config-kickstart ವು ಪ್ಯಾಕೇಜಿನ ಆರಿಸುವಿಕೆ ಮತ್ತು ಆರಿಸದಿರುವಿಕೆಯನ್ನು ಬೆಂಬಲಿಸುವುದಿಲ್ಲ. system-config-kickstart ಅನ್ನು ಉಪಯೋಗಿಸುವಾಗ, ಪ್ಯಾಕೇಜನ್ನು ಆರಿಸು ಆಯ್ಕೆ ಅಶಕ್ತಗೊಂಡಿದೆ ಎಂದು ಸೂಚಿಸುತ್ತದೆ. ಇದು ಏಕೆಂದರೆ system-config-kickstart ವು ಸಮೂಹ ಮಾಹಿತಿಯನ್ನು ಪಡೆಯಲು yum ಅನ್ನು ಉಪಯೋಗಿಸುತ್ತದೆ, yumಅನ್ನು Red Hat ಜಾಲಬಂಧಗೆ ಜೋಡಿಸುವಂತೆ ಸಂರಚಿಸಲು ಸಾಧ್ಯವಾಗಿರುವುದಿಲ್ಲ.

    ಪ್ರಸ್ತುತ ಈ ವಿವಾದವನ್ನು ಮುಂದಿನ Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ಚಿಕ್ಕ ಬಿಡುಗಡೆಯಲ್ಲಿ ಪರಿಹರಿಸಲು ತನಿಖೆ ನಡೆಯುತ್ತಿದೆ. ಪ್ರಸ್ತುತ, ನೀವು ನಿಮ್ಮ ಕಿಕ್-ಸ್ಟಾರ್ಟ್ ಕಡತಗಳಲ್ಲಿನ ಪ್ಯಾಕೇಜ್ ಅಧ್ಯಾಯಗಳನ್ನು ಸ್ವಹಸ್ತದಿಂದ ಆರಿಸ ಬೇಕಾಗುತ್ತದೆ. ಕಿಕ್-ಸ್ಟಾರ್ಟ್ ಕಡತಗಳನ್ನು ತೆರೆಯಲು system-config-kickstart ಆಜ್ಞೆಯನ್ನು ಉಪಯೋಗಿಸುವಾಗ, ಅದು ಪ್ಯಾಕೇಜಿನ ಎಲ್ಲಾ ಮಾಹಿತಿಗಳನ್ನು ಸಂರಕ್ಷಿಸುತ್ತದೆ ಮತ್ತು ಅದನ್ನು ನೀವು ಉಳಿಸಿದಾಗ ಪುನಃ ಬರೆಯುತ್ತದೆ.

  • SATA ನಿಯಂತ್ರಕಗಳನ್ನು ಹೊಂದಿದ ಗಣಕಗಳು ಈ ಕೆಳಗಿನ ದೋಷ ಸಂದೇಶವನ್ನು ತೋರಿಸಿ ಕೆಲಕಾಲ ಸ್ಥಗಿತಗೊಳ್ಳಬಹುದು:

    ata2: port is slow to respond, please be patient
    

    ನಂತರದಲ್ಲಿ, ಈ ಕೆಳಗಿನ ದೋಷ ಸಂದೇಶ ಕಾಣಿಸುತ್ತದೆ:

    ata2: reset failed, giving up
    

    ಎರಡನೇ ದೋಷ ಸಂದೇಶದ ನಂತರ ಗಣಕವು ಮಾಮೂಲಿ ಬೂಟ್ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ ಎಂಬುದನ್ನು ಗಮನಿಸಿ. ಎಲ್ಲಿಯವರೆಗೆ SATA ಸಾಧನಗಳು ಭೌತಿಕವಾಗಿ ಇದ್ದು, ಇನ್ನೂ ಸರಿಯಾಗಿ ಪತ್ತೆಯಾಗುತ್ತಿದ್ದರೆ, ತಡವಾಗುವುದನ್ನು ಹೊರತಾಗಿ ಗಣಕದ ಮೇಲೆ ಬೇರಾವುದೇ ಪರಿಣಾಮವನ್ನು ಬೀರುವುದಿಲ್ಲ.

  • node 0 ನಲ್ಲಿ ಮೆಮೊರಿ ಸಂರಚಿತವಾಗದ 4-ಸಾಕೆಟ್ಟಿನ AMD Sun Blade X8400 Server Module ಗಣಕಗಳು ಬೂಟ್ ಆಗುವಾಗ ಗಾಬರಿ ಬೀಳುತ್ತವೆ. ಕರ್ನಲ್ ಗಾಬರಿಯನ್ನು ತಪ್ಪಿಸಲು, ಗಣಕಗಳು ಮೆಮೊರಿಯೊಂದಿಗೆ node 0 ನಲ್ಲಿ ಸಂರಚಿಸಬೇಕು.

  • Anaconda ಮೂಲಕ LVM ದರ್ಪಣ ಸಾಧನಗಳನ್ನು ಅನುಸ್ಥಾಪಿಸುವುದನ್ನು ಪ್ರಸ್ತುತ ಬೆಂಬಲಿಸುತ್ತಿಲ್ಲ. ಈ ಸಾಮರ್ಥ್ಯವನ್ನು ಮುಂದಿನ Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಅಪ್ಡೇಟುಗಳಲ್ಲಿ ಸೇರಿಸಲಾಗುವುದು.

  • ಒಂದು ಕೋಶದಿಂದ Red Hat ಎಂಟರ್ಪ್ರೈಸ್ ಲಿನಕ್ಸ್ 5ಅನ್ನು Red Hat ಎಂಟರ್ಪ್ರೈಸ್ ಲಿನಕ್ಸ್ ISO ಚಿತ್ರಿಕೆಗಳನ್ನು ಹೊಂದಿದ ಒಂದು NFS ಪರಿಚಾರಕದ ಮೇಲೆ ಅನುಸ್ಥಾಪಿಸುವಾಗ, ಅನಕೊಂಡವು ಈ ಕೆಳಗಿನ ದೋಷ ಸಂದೇಶವನ್ನು ತೋರಿಸುತ್ತದೆ:

    ಸಂಗ್ರಹದ ಘನದತ್ತವನ್ನು (metadata) ಓದಲಾಗುತ್ತಿಲ್ಲ. ಇದಕ್ಕೆ ಕಾರಣ ಕಾಣೆಯಾದ ಸಂಪುಟದತ್ತ (repodata) ಕಡತಕೋಶವಿರಬಹುದು. 
    ದಯವಿಟ್ಟು ನಿಮ್ಮ ಅನುಸ್ಥಾಪನಾ ವೃಕ್ಷ ಸರಿಯಾಗಿ ಸೃಷ್ಟಿಯಾಗಿದೆಯೆಂದು ಖಚಿತಪಡಿಸಿಕೊಳ್ಳಿ. ಆಕರಕ್ಕಾಗಿ 
    repomd.xml ಕಡತವನ್ನು ತೆಗೆಯಲು/ಓದಲು ಆಗುತ್ತಿಲ್ಲ:
    

    ಎಲ್ಲಿಯಾದರೂ ISO ಚಿತ್ರಿಕೆಗಳನ್ನು ಹೊಂದಿದ ಕೋಶವು ಭಾಗಶಃ ಪ್ಯಾಕ್ ಮಾಡದ ಅನುಸ್ಥಾಪನ ವೃಕ್ಷವನ್ನು ಹೊಂದಿದ್ದರೆ ಈ ತೊಂದರೆ ಎದುರಾಗುತ್ತದೆ (ಉದಾಹರಣೆಗೆ, ಪ್ರಥಮ ISOದಲ್ಲಿನ /images ಕೋಶ). ಅಂತಹ ಕೋಶಗಳು ಇದ್ದರೆ ಮೇಲೆ ತಿಳಿಸಿದ ದೋಷಕ್ಕೆ ಕಾರಣವಾಗುತ್ತದೆ.

    ಈ ದೋಷವು ಆಗದಂತೆ ತಡೆಯಲು, ವೃಕ್ಷಗಳನ್ನು ಅನುಸ್ಥಾಪನ ISO ಚಿತ್ರಿಕೆಗಳನ್ನು ಹೊಂದಿರದ ಕೋಶಗಳಿಗೆ ಮಾತ್ರ ಅನ್-ಪ್ಯಾಕ್ ಮಾಡಿ.

  • ಈ Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಬಿಡುಗಡೆಯಲ್ಲಿ /var/log/boot.logಗೆ ಬೂಟ್-ಸಮಯ ಲಾಗಿಂಗ್ ಲಭ್ಯವಿರುವುದಿಲ್ಲ. ಇದಕ್ಕೆ ಸಮನಾದ ಕಾರ್ಯಕಾರಿಯನ್ನು ಮುಂಬರುವ Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಅಪ್ಡೇಟುಗಳಲ್ಲಿ ಸೇರಿಸಲಾಗುವುದು .

  • kexec ಆಗಲಿ ಅಥವ kdump ಆಗಲಿ ಒಂದು accraid ನಿಯಂತ್ರಕಕ್ಕೆ ಲಗತ್ತಿಸಲಾದ ಡಿಸ್ಕಿಗೆ ಡಂಪ್ ಮಾಡಲು ಶಕ್ತವಾಗಿರುತ್ತದೆ.

    ಈ ವಿಷಯದೊಂದಿಗೆ ಕೆಲಸ ಮಾಡಲು, scpಅನ್ನು ಜಾಲಬಂಧ ಡಂಪಿಂಗಿಗಾಗಿ ಉಪಯೋಗಿಸಿ. ಇದಲ್ಲದೆ, ನೀವು ಬೇರೊಂದು ನಿಯಂತ್ರಕಗಳ ಮೂಲಕ ಡಿಸ್ಕಿನ ಮೇಲೆಯೂ ಸಹ ಡಂಪ್ ಮಾಡಬಹುದು.

  • IBM T43 ಲ್ಯಾಪ್ಟಾಪನ್ನು ಸೆಕೆಂಡರಿ ಡೆಲ್ ತೆರೆಯೊಂದಿಗೆ ಲಗತ್ತಿಸಿದ ಡಾಕಿಂಗ್ ನಿಲ್ದಾಣದ ಮೇಲೆ ಉಪಯೋಗಿಸಿದಾಗ, ಬೂಟಾದ ನಂತರ ಲ್ಯಾಪ್ಟಾಪ್ ಹಾಗು ಸೆಕೆಂಡರಿ ತೆರೆ ಎರಡೂ ತಪ್ಪಾದ ರೆಸಲ್ಯೂಷನನ್ನು ತೋರಿಸುತ್ತದೆ.

    ಮುಂದಿನ ಲಾಗಿನ್ನುಗಳಲ್ಲಿ ಈ ರೀತಿ ಆಗದಂತೆ ತಡೆಗಟ್ಟಲು, ಈ ಕೆಳಗಿನ ಕ್ರಮವನ್ನು ಅನುಸರಿಸಿ:

    1. system-config-display ಅನ್ನು ಉಪಯೋಗಿಸಿಕೊಂಡು ಡಿಸ್-ಪ್ಲೇ ಹೊಂದಾಣಿಕೆಗಳು ಮೆನು ಅನ್ನು ತೆರೆಯಿರಿ.

    2. ಡ್ಯುಯಲ್ ಹೆಡ್ ಟ್ಯಾಬನ್ನು ಕ್ಲಿಕ್ಕಿಸಿ.

    3. ಡ್ಯುಯಲ್ ಹೆಡ್ ಉಪಯೋಗಿಸುಅನ್ನು ಪರೀಕ್ಷಿಸು ಮತ್ತು ಸೆಕೆಂಡರಿ ತೆರೆಗೆ ಸರಿಯಾದ ಸಂರಚನೆಯನ್ನು ನಮೂದಿಸಿ.

    4. ಗಣಕವನ್ನು ರೀಬೂಟ್ ಮಾಡಿ.

  • ಒಂದು ಸಂಪೂರ್ಣ ವಾಸ್ತವೀಕರಣಗೊಂಡ ಅತಿಥಿಯನ್ನು ವಿಭಜಿಸಲಾದ ಅನುಸ್ಥಾಪನ ಮಾಧ್ಯಮದಿಂದ -- ಉದಾ., ಅನೇಕ CD-ROMಗಳಿಂದ ಅನುಸ್ಥಾಪಿಸುವಾಗ, ಸೀಡಿಗಳನ್ನು ಬದಲಾಯಿಸ ಬೇಕಾದಾಗ ಪ್ರಕ್ರಿಯೆಯು ವಿಫಲಗೊಳ್ಳಬಹುದು. ಅತಿಥಿ OS ಅನುಸ್ಥಾಪನ ಪ್ರಕ್ರಿಯೆಯಲ್ಲಿ, ಬಳಕೆದಾರರು ಸೀಡಿಗಳನ್ನು ಆರೋಹಿಸಿವುದು ಅಥವ ಹೊರ ತೆಗೆಯುವುದಂತೆ ತಡೆಯಬಹುದು, ಇದರಿಂದ ಅನುಸ್ಥಾಪನೆಯನ್ನು ಪೂರ್ಣಗೊಳಿಸುವುದನ್ನು ತಡೆಯುತ್ತದೆ.

    ಅತಿಥಿ OS ಅನುಸ್ಥಾಪನ ಪ್ರಕ್ರಿಯೆಯಲ್ಲಿ CD-ROM ಚಿತ್ರಿಕೆಗಳನ್ನು ಬದಲಾಯಿಸಲು ನೀವು QEMU ತೆರೆ ಕನ್ಸೋಲನ್ನು ಉಪಯೋಗಿಸಲು ಸೂಚಿಸಲಾಗುತ್ತದೆ. ಈ ವಿಧಾನವು ಹೀಗಿದೆ:

    1. ಅತಿಥಿ OSಗಾಗಿ ಒಂದು ಚಿತ್ರಾತ್ಮಕ VNC ಕನ್ಸೋಲನ್ನು ತೆರೆಯಿರಿ.

    2. ಅತಿಥಿ OSನಲ್ಲಿ CD-ROM ಸಾಧನವನ್ನು ಅವರೋಹಿಸಿ.

    3. Ctrl-Alt-2ಅನ್ನು ಒತ್ತುವುದರ ಮೂಲಕ QEMU ತೆರೆ ಕನ್ಸೋಲಿಗೆ ಬದಲಾಯಿಸಿ.

    4. ಆಜ್ಞೆ eject hdcಯನ್ನು ಚಲಾಯಿಸಿ.

    5. ಆಜ್ಞೆ change hdc <path to the CD-ROM in host system>ಯನ್ನು ಚಲಾಯಿಸಿ.

    6. Ctrl-Alt-1ಅನ್ನು ಒತ್ತಿ ಪುನಃ ಅತಿಥಿ OS ಕನ್ಸೋಲಿಗೆ ಬದಲಾಯಿಸಿ.

    7. CD-ROM ಸಾಧನವನ್ನು ಅತಿಥಿ OSನಲ್ಲಿ ಆರೋಹಿಸಿ.

    ಒಂದು ಕ್ರಮವಾದ VNC ಕ್ಲೈಂಟನ್ನು ಉಪಯೋಗಿಸುವಾಗ, ಅತಿಥೇಯ X ಪರಿಚಾರಕವು Ctrl-Alt-2 ಮತ್ತು Ctrl-Alt-1 ಆಜ್ಞೆಯನ್ನು ವ್ಯಾಖ್ಯಾನಿಸುವಾಗ ತೊಂದರೆ ಎದುರಿಸಬಹುದು. ಇದರೊಂದಿಗೆ virt-managerನಲ್ಲಿ ಕೆಲಸ ಮಾಡಲು, sticky keysಅನ್ನು ಉಪಯೋಗಿಸಿ. Ctrlಅನ್ನು ಮೂರು ಬಾರಿ ಒತ್ತಿದರೆ, ಮುಂದಿನ non-modifier ಅನ್ನು ಒತ್ತುವವರೆಗೆ ಅದನ್ನು "sticky"ಆಗಿಸುತ್ತದೆ. ಉದಾಹರಣೆಗೆ, Ctrl-Alt-1ಅನ್ನು ರವಾನಿಸಲು, Ctrl-Alt-1ಅನ್ನು ಒತ್ತುವ ಮೊದಲು Ctrl ಅನ್ನು ಎರಡು ಬಾರಿ ಒತ್ತಿರಿ .

  • ಬೂಟ್-ಪಾಥ್-ಮಾರ್ಪಡಿಸುವ ಒಂದು ಚಾಲಕವನ್ನು ಒಳಗೊಂಡkmod ಪ್ಯಾಕೇಜನ್ನು ಅನುಸ್ಥಾಪಿಸಿದಾಗ Red Hat ಎಂಟರ್ಪ್ರೈಸ್ ಲಿನಕ್ಸ್ 5 Driver Update Model ಯು ಮಾರ್ಪಡಿಸಲಾದ initrd ಚಿತ್ರಿಕೆಗಳನ್ನು ನಿರ್ಮಿಸುತ್ತದೆ. ಕೆಲವೊಮ್ಮೆ, /boot ವಿಭಜನೆಯನ್ನು initrd ಚಿತ್ರಿಕೆಗಳ ಬ್ಯಾಕ್-ಅಪ್ ನಿಂದ ಬೇಗ ಭರ್ತಿಯಾಗಬಹುದು, ವಿಶೇಷವಾಗಿ ಗಣಕದಲ್ಲಿ ಒಂದು ಸೈಜೆಬಲ್ ಸಂಖ್ಯೆಯ ಚಾಲಕ ಅಪ್ಡೇಟುಗಳು ಆಗುತ್ತಿದ್ದರೆ.

    ಹಾಗೆಯೇ, ನೀವು ನಿಯಮಿತವಾಗಿ ಚಾಲಕ ಅಪ್ಡೇಟುಗಳನ್ನು ಮಾಡುವಂತಿದ್ದರೆ, /boot ವಿಭಜಕದಲ್ಲಿನ ಖಾಲಿ ಸ್ಥಳಗಳನ್ನು ಪರಿವೀಕ್ಷಿಸುತ್ತಿರುವುದು ಒಳಿತು. ಹಳೆಯ initrd ಚಿತ್ರಿಕೆಗಳನ್ನು ತೆಗೆಯುವ ಮೂಲಕ ನೀವು /bootನಲ್ಲಿನ ಜಾಗಗಳನ್ನು ತೆರವುಗೊಳಿಸಬಹುದು; ಆ ಕಡತಗಳು .img0, .img1, .img2ಗಳು ಹಾಗೂ ಇತರೆ...ಇಂದ ಕೊನೆಗೊಳ್ಳುತ್ತವೆ.

  • ತೆಗೆಯಬಹುದಾದ ಮಾಧ್ಯಮವನ್ನು ಸ್ವಯಂ ಚಾಲಿಸುವುದನ್ನು ಅಶಕ್ತಗೊಳಿಸಲಾಗಿದೆ. Red Hat ಎಂಟರ್ಪ್ರೈಸ್ ಲಿನಕ್ಸ್ ನ ಪೂರಕ CD ಯಿಂದ ಪ್ಯಾಕೇಜುಗಳನ್ನು ಅನುಸ್ಥಾಪಿಸಲು, ಹಸ್ತ ಮುಖೇನ CD ಅನುಸ್ಥಾಪಕವನ್ನು ಈ ಕೆಳಗಿನ ಆಜ್ಞೆಯನ್ನು ಉಪಯೋಗಿಸಿ ಆರಂಭಿಸಿ:

    system-cdinstall-helper /media/path-to-mounted-drive

  • Red Hat ಎಂಟರ್ಪ್ರೈಸ್ ಲಿನಕ್ಸ್ 4 ರಿಂದ Red Hat ಎಂಟರ್ಪ್ರೈಸ್ ಲಿನಕ್ಸ್ 5 ಗೆ ಅಪ್ಗ್ರೇಡ್ ಮಾಡುವಾಗ, ನಿಯೋಜನಾ ಮಾರ್ಗದರ್ಶಿಯು ಸ್ವಯಂಚಾಲಿತವಾಗಿ ಅನುಸ್ಥಾಪಿತವಾಗಿರುವುದಿಲ್ಲ. ಅಪ್ಗ್ರೇಡ್ ಪೂರ್ಣಗೊಂಡ ನಂತರ ಈ pirut ಆಜ್ಞೆಯನ್ನು ಬಳಸಿ ನೀವು ಹಸ್ತ ಮುಖೇನ ಅನುಸ್ಥಾಪಿಸಬೇಕು.

  • ದೋಷವು ಅನೇಕ ಆರೋಹಣಗಳು ಸರಿಯಾಗಿ ಕೆಲಸ ಮಾಡುವುದಂತೆ autofs ತಡೆಯುತ್ತದೆ.

    ಒಂದು ಅವಧಿ ಪೂರ್ಣಗೊಂಡರೆ, ಪರೀಕ್ಷಿಸಬೇಕಿರುವ ಕೊನೆಯ ಬಹು ಆರೋಹಣ ಘಟಕದೊಂದಿಗೆ ಒಂದು ಆರೋಹಕವಿಲ್ಲದೇ ಇದ್ದರೆ ಹಾಗು ಇತರೆ ಘಟಕಗಳು ಕಾರ್ಯಮಗ್ನವಾಗಿದ್ದರೆ, autofs ದೋಷಪೂರಿತವಾಗಿ ಬಹು-ಆರೋಹಣವನ್ನು ಪೂರ್ಣಗೊಂಡಿದೆ ಎಂದು ನಿರ್ಧರಿಸುತ್ತದೆ. ಇದು ಬಹು-ಆರೋಹಣ ತಾಣವನ್ನು ಭಾಗಷಃ ಅವಧಿ ಪೂರ್ಣಗೊಳ್ಳಲು ಕಾರಣವಾಗಿ, ಇದು ಬಹು-ಆರೋಹಣವನ್ನು ಮುಂದಿನ ಮನವಿಗಳಿಗೆ ಪ್ರತಿಕ್ರಿಯಿಸದಂತೆ ಮಾಡುತ್ತದೆ ಹಾಗು ಅವಧಿಯ ಅಂತ್ಯ ಚಾಲನೆಯಾಗುತ್ತದೆ.

    ಈ ತೊಂದರೆಯನ್ನು ಶಾಶ್ವತವಾಗಿ ನಿವಾರಿಸಲು, ಆಜ್ಞೆ yum update autofs ಅನ್ನು ಬಳಸಿಕೊಂಡು autofs ಅನ್ನು ಅಪ್ದೇಟ್ ಮಾಡಿ.

  • ಎಲ್ಲಿಯಾದರೂ X ಚಲಾಯಿತವಾಗುತ್ತಿದ್ದು ಮತ್ತು vesa ವಲ್ಲದೆ ಬೇರೆ ಒಂದು ಚಾಲಕವನ್ನು ಬಳಸುತ್ತಿದ್ದರೆ, ಗಣಕವು ಒಂದು kexec/kdump ಕರ್ನಲ್ಲಿಗೆ ಯಶಸ್ವಿಯಾಗಿ ಬೂಟ್ ಆಗದೇ ಇರಬಹುದು. ATI Rage XL ಚಿತ್ರಾತ್ಮಕ ಚಿಪ್ ಸೆಟ್ಟುಗಳಲ್ಲಿ ಮಾತ್ರ ಈ ತೊಂದರೆಯು ಕಾಣಿಸಿಕೊಳ್ಳುತ್ತದೆ.

    ATI Rage XL ನಿಂದ ಅಣಿಗೊಂಡ ಗಣಕದಲ್ಲಿ X ಚಾಲನೆಯಾಗುತ್ತಿದ್ದರೆ, ಒಂದು kexec/kdump ಕರ್ನಲ್ಲಿಗೆ ಯಶಸ್ವಿಯಾಗಿ ಬೂಟ್ ಮಾಡಲು ಅನುವಾಗುವಂತೆ vesa ಚಾಲಕವನ್ನು ಬಳಸಲು ಮರೆಯದಿರಿ.

  • ಒಂದು boot.iso ಅನ್ನು ಉಪಯೋಗಿಸಿಕೊಂಡು ಬರೆ-ಓದುವಿನಲ್ಲಿ ಆರೋಹಿತವಾದ ಒಂದು NFS ಹಂಚಿಕೆಯ ಮೇಲೆ ಒಂದು ಸಂಪೂರ್ಣ ವಾಸ್ತವೀಕರಣಗೊಂಡ ಅತಿಥಿಯನ್ನು ನಿರ್ಮಿಸುವುದು ಸಂಪೂರ್ಣ ಸರಿಯಾಗುವುದಿಲ್ಲ. ಈ ತೊಂದರೆಯೊಂದಿಗೆ ಕೆಲಸ ಮಾಡಲು, NFS ಹಂಚಿಕೆಯನ್ನು ಓದಲು ಮಾತ್ರ ಎಂದು ಆರೋಹಿಸಿ.

    ನೀವು NFS ಹಂಚಿಕೆಯನ್ನು ಓದಲು ಮಾತ್ರಕ್ಕೆ ಆರೋಹಿಸಲು ಆಗದೇ ಇದ್ದರೆ, boot.iso to the local /var/lib/xen/images/ ಕೋಶವನ್ನು ನಕಲಿಸಿ.

ಸಾಮಾನ್ಯ ಮಾಹಿತಿ

ಈ ದಸ್ತಾವೇಜಿನ ಬೇರಾವುದೇ ವಿಭಾಗಕ್ಕೆ ನಿಶ್ಚಿತವಾಗಿ ಸಂಬಂಧಿಸದ ಸಾಮಾನ್ಯ ಮಾಹಿತಿಯು ಈ ವಿಭಾಗದಲ್ಲಿ ಇದೆ.

Red Hat ಎಂಟರ್ಪ್ರೈಸ್ ಲಿನಕ್ಸ್ ನಿಯೋಜನಾ ಮಾರ್ಗದರ್ಶಕ

Red Hat ಎಂಟರ್ಪ್ರೈಸ್ ಲಿನಕ್ಸ್ನ ಈ ಬಿಡುಗಡೆಯು ಬಹಳಷ್ಟು ಮಟ್ಟಿಗೆ ವಿಸ್ತೃತವಾದ ನಿಯೋಜನ ಮಾರ್ಗದರ್ಶಿಯನ್ನು ಹೊಂದಿದೆ. ಅದಕ್ಕಾಗಿ, ಗಣಕ (ಮೇಲಿನ ಪ್ಯಾನೆಲ್ ನಲ್ಲಿ) => ದಸ್ತಾವೇಜಿಕರಣ => Red Hat ಎಂಟರ್ಪ್ರೈಸ್ ಲಿನಕ್ಸ್ ನಿಯೋಜನ ಮಾರ್ಗದರ್ಶಿನಲ್ಲಿ ನೋಡಿ.

ಎಲ್ಲಾ ಬೆಂಬಲಿತ ಭಾಷೆಗಳಿಗಾಗಿ ಎಲ್ಲಾ ಪ್ರಾದೇಶಿಕ ಆವೃತ್ತಿಗಳ ನಿಯೋಜನ ಮಾರ್ಗದರ್ಶಿಯನ್ನು ನೀಡುವುದು Red Hat ನ ಉದ್ದೇಶವಾಗಿದೆ. ನೀವು ನಿಯೋಜನ ಮಾರ್ಗದರ್ಶಿಯ ಪ್ರಾದೇಶಿಕ ಆವೃತ್ತಿಯನ್ನು ಅನುಸ್ಥಾಪಿಸಿಕೊಂಡಿದ್ದರೆ, Red Hat ಜಾಲಬಂಧ ನಲ್ಲಿ ಹೊಸ ಆವೃತ್ತಿ ಬಂದಾಗ ನೀವು ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ.

ವಾಸ್ತವೀಕರಣ (Virtualization)

Red Hat ಎಂಟರ್ಪ್ರೈಸ್ ಲಿನಕ್ಸ್ 5 ಯು i686 ಮತ್ತು x86-64 ಗೆ Xen-ಆಧರಿತ ವಾಸ್ತವೀಕರಣ ಸಾಮರ್ಥ್ಯವನ್ನು, ಹಾಗೂ ಒಂದು ವಾಸ್ತವೀಕರಣ ವಾತಾವರಣವನ್ನು ನಿರ್ವಹಿಸಲು ಅಗತ್ಯವಿರುವ ತಂತ್ರಾಂಶ ಸೌಕರ್ಯವನ್ನು ಹೊಂದಿದೆ.

Red Hat ಎಂಟರ್ಪ್ರೈಸ್ ಲಿನಕ್ಸ್ 5ನಲ್ಲಿ ವಾಸ್ತವೀಕರಣವನ್ನು ಕಾರ್ಯಗತವಾಗಿಸುವುದುhypervisorನ ಮೇಲೆ ನಿರ್ಧರಿತವಾಗಿದೆ, ಇದು ಪ್ಯಾರಾ-ವಾಸ್ತವೀಕರಣದ ಮೂಲಕ ಬಹಳ ಕಡಿಮೆ ಮಟ್ಟದ ವಾಸ್ತವೀಕರಣವನ್ನು ಸುಗಮಗೊಳಿಸುತ್ತದೆ. Intel Virtualization Technology ಅಥವ AMD AMD-V ಸಾಮರ್ಥ್ಯವಿರುವ ಪ್ರೊಸೆಸರ್ರುಗಳೊಂದಿಗೆ, Red Hat ಎಂಟರ್ಪ್ರೈಸ್ ಲಿನಕ್ಸ್ 5ದಲ್ಲಿನ ವಾಸ್ತವೀಕರಣವು ಕಾರ್ಯವ್ಯವಸ್ಥೆಯನ್ನು ಬದಲಾಯಿಸದೇ ಪೂರ್ಣ ವಾಸ್ತವೀಕೃತಗೊಂಡ ಕ್ರಮದಲ್ಲೇ ಚಲಾಯಿಸಲು ಅನುಮತಿಸುತ್ತದೆ.

Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಮೇಲಿನ ವಾಸ್ತವೀಕರಣವು ಈ ಕೆಳಗಿನ ಲಕ್ಷಣಗಳನ್ನು ಸಹ ಹೊಂದಿದೆ:

  • Libvirt, ವಾಸ್ತವ ಗಣಕಗಳನ್ನು ನಿರ್ವಹಿಸಲು ಬೇಕಾಗುವ ಸ್ಥಿರ, ಸುಲಭ ವರ್ಗಾಯಿಸಬಲ್ಲ ಒಂದು API ಲೈಬ್ರರಿಯನ್ನು ನೀಡುತ್ತದೆ.

  • Virtual Machine Manager, ವಾಸ್ತವ ಗಣಕಗಳನ್ನು ನಿರ್ವಹಿಸಲು ಹಾಗೂ ಮೇಲ್ವಿಚಾರಣೆಯನ್ನು ನೋಡಿಕೊಳ್ಳಬಲ್ಲ ಒಂದು ಚಿತ್ರಾತ್ಮಕ ಸಹಾಯಕ.

  • ವಾಸ್ತವಯಂತ್ರಗಳನ್ನು ಕಿಕ್-ಸ್ಟಾರ್ಟ್ ಮಾಡಬಲ್ಲ ಸಾಮರ್ಥ್ಯವನ್ನು ಸೇರಿ, ಅನುಸ್ಥಾಪಕದಲ್ಲಿ ವಾಸ್ತವಯಂತ್ರದ ಬೆಂಬಲ.

Red Hat ಜಾಲಬಂಧವು ವಾಸ್ತವ ಗಣಕಗಳನ್ನು ಸಹ ಬೆಂಬಲಿಸುತ್ತದೆ.

ಈ ಸದ್ಯದಲ್ಲಿ, ವಾಸ್ತವೀಕರಣವು ಈ ಕೆಳಗಿನ ಮಿತಿಗಳನ್ನು ಅನ್ನು ಹೊಂದಿದೆ:

  • ವಾಸ್ತವೀಕರಣವನ್ನು ಶಕ್ತಗೊಳಿಸಿದಾಗ, RAM ಗೆ ತಡೆಹಿಡಿ ಅಥವ ಡಿಸ್ಕಿಗೆ ತಡೆಹಿಡಿ ಯು ಬೆಂಬಲಿತವಾಗಿರುವುದಿಲ್ಲ, ಹಾಗು CPU ಆವರ್ತನಗಳ ಸ್ಕೇಲಿಂಗ್ ನಡೆಸಲು ಆಗುವುದಿಲ್ಲ

  • ಯಂತ್ರಾಂಶ-ವಾಸ್ತವಿಕರಣಗೊಂಡ ಅತಿಥಿಗಳು ೨ಜೀಬಿಗಿಂತ ಹೆಚ್ಚಿನ ವಾಸ್ತವ ಮೆಮೊರಿಯನ್ನು ಹೊಂದಿರುವಂತಿಲ್ಲ.

  • ಸಂಪೂರ್ಣವಾಗಿ ವಾಸ್ತವಿಕರಣಗೊಂಡ ಅತಿಥಿಗಳನ್ನು ಉಳಿಸಲು, ಪುನಃಸ್ಥಾಪಿಸಲು ಅಥವ ಸ್ಥಳಾಂತರಿಸಲು ಆಗುವುದಿಲ್ಲ

  • xm create ಆಜ್ಞೆಯು ವಾಸ್ತವ ಗಣಕ ನಿರ್ವಾಹಕನಲ್ಲಿ ಚಿತ್ರಾತ್ಮಕ ಸಮಾನಾರ್ಥಕವನ್ನು ಹೊಂದಿರುವುದಿಲ್ಲ.

  • ವಾಸ್ತವೀಕರಣವು ಕೇವಲ bridged networking ಘಟಕವನ್ನು ಮಾತ್ರ ಬೆಂಬಲಿಸುತ್ತದೆ. ಅತಿಥಿಗಳಿಂದ ಉಪಯೋಗಿಸಲ್ಪಟ್ಟ ಎಲ್ಲಾ ಅನುರೂಪವಾದ ಉಪಕರಣಗಳು ಸ್ವಯಂಚಾಲಿತವಾಗಿ ಇದನ್ನೆ ಡೀಫಾಲ್ಟ್ ಆಗಿ ಆರಿಸುತ್ತವೆ.

  • ಡೀಫಾಲ್ಟ್ Red Hat SELinux ಕಾರ್ಯನೀತಿಯು ವಾಸ್ತವೀಕರಣಕ್ಕೆ ಕೇವಲ ಸಂರಚನ ಕಡತಗಳನ್ನು /etc/xenಕ್ಕೆ, ಲಾಗ್ ಕಡತಗಳನ್ನು /var/log/xen/ಕ್ಕೆ, ಮತ್ತು ಡಿಸ್ಕ್ ಕಡತಗಳನ್ನು (ಕೋರ್ ಡಂಪ್ ಗಳನ್ನು ಸೇರಿಸಿ) /var/lib/xenಕ್ಕೆ ಬರೆಯುವುದನ್ನು ಮಾತ್ರ ಅನುಮತಿಸುತ್ತದೆ. ಈ ಡೀಫಾಲ್ಟುಗಳನ್ನು semanage ಉಪಕರಣವನ್ನು ಉಪಯೋಗಿಸಿ ಬದಲಾಯಿಸಬಹುದು.

  • ವಾಸ್ತವೀಕರಣದ ಈ ಬಿಡುಗಡೆಯಲ್ಲಿ ಸೇರಿಸಲ್ಪಟ್ಟಿರುವ hypervisor ಗೆ NUMA ಬಗ್ಗೆ ತಿಳಿದಿಲ್ಲ; NUMA ಗಣಕಗಳ ಅದರ ಮೇಲೆ ಕಾರ್ಯ ಕ್ಷಮತೆಯು ಅಷ್ಟು ಉತ್ತಮವಲ್ಲದಿರಬಹುದು. ಭವಿಷ್ಯದ Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಅಪ್ಡೇಟುಗಳಲ್ಲಿ ಇದರ ಬಗ್ಗೆ ಗಮನ ಹರಿಸಲಾಗುವುದು.

    ಇದರೊಂದಿಗೆ ಕೆಲಸ ಮಾಡಲು, NUMA ಗಣಕದ BIOSನಲ್ಲಿ memory node interleaving ಅನ್ನು ಶಕ್ತಗೊಳಿಸಿ. ಇದು ಅಧಿಕ ಸ್ಥಿರ ಕಾರ್ಯನಿರ್ವಹಣೆಯನ್ನು ಖಾತರಿಗೊಳಿಸುತ್ತದೆ.

  • ಪ್ಯಾರ ವಾಸ್ತವೀಕರಣಗೊಂಡ ಕ್ಷೇತ್ರಗಳು ಪ್ರಸ್ತುತ en-US ಕೀಲಿ ನಕ್ಷೆಯನ್ನು ಬಿಟ್ಟು ಬೇರಾವುದೇ ಕೀಲಿ ನಕ್ಷೆಯನ್ನು ಬೆಂಬಲಿಸುವುದಿಲ್ಲ. ಬೇರೆ ಕೀಲಿಮಣೆಗಳಲ್ಲಿ ಕೆಲವೊಂದು ಕೀಲಿಯನ್ನು ಟೈಪಿಸಲು ಸಾಧ್ಯವಿಲ್ಲದೇ ಇರಬಹುದು. ಇದನ್ನು Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ಭವಿಷ್ಯದ ಅಪ್ಡೇಟುಗಳಲ್ಲಿ ಗಮನಿಸಲಾಗುವುದು .

  • ವಾಸ್ತವೀಕರಣಗೊಂಡ ಕರ್ನಲ್ಲುಗಳು kdump ಕ್ರಿಯೆಯನ್ನು ಉಪಯೋಗಿಸಲಾಗುವುದಿಲ್ಲ.

  • qcow ಮತ್ತು vmdk ಚಿತ್ರಿಕೆಗಳು ಬೆಂಬಲಿತವಾಗಿಲ್ಲ. ಸ್ವಹಸ್ತದಿಂದ ಸಂರಚಿತವಾದ ಅತಿಥಿಗಳು, ಚಿತ್ರಿಕೆಗಳು ಒಂದು ಭೌತಿಕ ಅಥವ ಲಾಜಿಕಲ್ ಸಾಧನದ ಸಮರ್ಥನೆ ಪಡೆದವುಗಳು phy: ರೀತಿಯನ್ನು ಉಪಯೋಗಿಸಿಬೇಕು. ಸಮರ್ಥಿತ ಕಡತಗಳಿಗಾಗಿ, ಪ್ಯಾರಾವಾಸ್ತವೀಕರಣಗೊಂಡ ಅತಿಥಿಗಳ ಚಿತ್ರಿಕೆಯ ನಮೂನೆಯನ್ನು tap:aio: ಗೆ ಮತ್ತು ಸಂಪೂರ್ಣವಾಗಿ ವಾಸ್ತವೀಕರಣಗೊಂಡ ಅತಿಥಿಗಳfile: ಗೆ ಹೊಂದಿಸಿ.

  • ಸಂಪೂರ್ಣ ವಾಸ್ತವ ಡೊಮೈನುಗಳನ್ನು ಪ್ರೊಫೈಲಿಂಗ್ ಮಾಡಿದ್ದು ಸರಿಯಲ್ಲದಿರಬಹುದು. ಈ ವಿವಾದವನ್ನು ಮುಂಬರುವ Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಚಿಕ್ಕ ಬಿಡುಗಡೆಯಲ್ಲಿ ಗಮನಿಸಲಾಗುವುದು

  • ಪ್ಯಾರಾ ವಾಸ್ತವೀಕರಣಗೊಂಡ ಡೊಮೈನುಗಳು ಕೇವಲ ಮೌಸ್ ಚಲನೆಯನ್ನು ಮಾತ್ರ ಸ್ವಯಂ ಪತ್ತೆ ಮಾಡುತ್ತದೆ, ಮತ್ತು ಸೂಚಕದ ಚಲನೆಯು ಹೆಚ್ಚು ಕಡಿಮೆ ಅನಿಶ್ಚಿತವಾಗಿರುತ್ತದೆ. ಇದನ್ನು ಮುಂಬರುವ Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ಅಪ್ಡೇಟುಗಳಲ್ಲಿ ಗಮನಿಸಲಾಗುವುದು.

  • ಕೆಲವೊಂದು dom0 ಅನುಕ್ರಮಿತ ಕನ್ಸೋಲ್ ಸೆಟ್ಟಪ್ ಗಳಿಗೆ ಹೆಚ್ಚಿನ ಸಂರಚನೆಯ ಅಗತ್ಯ ಬೀಳಬಹುದು. ಸೂಚಿಸಲಾದ ಸಂರಚನೆಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ Virtualization GuideTroubleshootingವಿಭಾಗವನ್ನು ಸಂಪರ್ಕಿಸಿ.

  • ಪ್ಯಾರಾ ವಾಸ್ತವೀಕರಣಗೊಂಡ ಅತಿಥಿಗಾಗಿ ಒಂದು ಕಾರ್ಯ ನಿರತ ಕನ್ಸೋಲನ್ನು ಹೊಂದಲು, ನೀವು ಕರ್ನಲ್ ಆಜ್ಞಾ ಸಾಲಿನಲ್ಲಿ console=xvc0 ಅನ್ನು ನಿಗದಿ ಪಡಿಸಬೇಕು.

  • ಅತಿಥಿ ಕಾರ್ಯ ವ್ಯವಸ್ಥೆಯು ಚದುರಿದ ಕಡತಗಳನ್ನು ಬಳಸಲು ಸಂರಚಿಸಿದಾಗ, dom0 ಕ್ಕೆ ಡಿಸ್ಕ್ ಜಾಗ ಇಲ್ಲದೇ ಹೋಗಬಹುದು. ಅಂತಹ ಘಟನೆಗಳು ಅತಿಥಿ ಡಿಸ್ಕ್ ಸಂಪೂರ್ಣವಾಗಿ ಬರೆಯುವುದನ್ನು ನಿರ್ಬಂಧಿಸುತ್ತದೆ, ಮತ್ತು ಅತಿಥಿಗಳಲ್ಲಿನ ದತ್ತಾಂಶವು ನಷ್ಟಗೊಳ್ಳಬಹುದು. ಅಷ್ಟೇ ಅಲ್ಲದೆ, ಚದುರಿದ ಕಡತಗಳನ್ನು ಬಳಸುವ ಅತಿಥಿಗಳು I/O ವನ್ನು ಸುರಕ್ಷಿತವಾಗಿ ಹೊಂದಾಣಿಕೆ ಮಾಡುವುದಿಲ್ಲ.

    ಬದಲಿಗೆ ಚದುರಿಲ್ಲದ ಕಡತಗಳನ್ನು ಬಳಸಬೇಕೆಂದು ಸೂಚಿಸಲಾಗುತ್ತದೆ. ಅತಿಥಿಯನ್ನು ಚದುರಿಲ್ಲದ ಕಡತಗಳನ್ನು ಬಳಸುವಂತೆ ಸಂರಚಿಸಲು, ಒಂದು virt-install ಅನ್ನು ನಿರ್ವಹಿಸುವಾಗ --nonsparse ಆಯ್ಕೆಯನ್ನು ಬಳಸಿ.

ಜಾಲ ಪರಿಚಾರಕ ಪ್ಯಾಕೇಜಿಂಗ್ ಬದಲಾವಣೆಗಳು

ಈಗ Red Hat ಎಂಟರ್ಪ್ರೈಸ್ ಲಿನಕ್ಸ್ 5ವು Apache HTTP ಪರಿಚಾರಕದ ೨.೨. ಆವೃತ್ತಿಯನ್ನು ಒಳಗೊಂಡಿದೆ. ೨.೦ ಸೀರಿಸ್ ಗೆ ಹೋಲಿಸಿದಲ್ಲಿ ಈ ಬಿಡುಗಡೆಯು ಬಹಳಷ್ಟು ಸಂಖ್ಯೆಯ ಸುಧಾರಣೆಗಳನ್ನು ತಂದಿದೆ, ಅವುಗಳಲ್ಲಿ:

  • ಮುಂದುವರೆದ ಕ್ಯಾಚಿಂಗ್ ಮಾಡ್ಯೂಲುಗಳು (mod_cache, mod_disk_cache, mod_mem_cache)

  • ಹಿಂದಿನ ಆವೃತ್ತಿಗಳಲ್ಲಿ ನೀಡಲಾದ ದೃಡೀಕರಣ ಮಾಡ್ಯೂಲುಗಳ ಬದಲಿಗೆ ಒಂದು ಹೊಸ ದೃಡೀಕರಣ ಮತ್ತು ಹಕ್ಕು ನೀಡಿಕೆ ಬೆಂಬಲದ ಸ್ವರೂಪ

  • ಪ್ರಾಕ್ಸಿ ಲೋಡ್ ಹೊಂದಾಣಿಕೆಗಳಿಗೆ ಬೆಂಬಲ(mod_proxy_balancer)

  • ೩೨-ಬಿಟ್ ಪ್ಲಾಟ್-ಫಾರ್ಮಗಳ ಮೇಲೆ ದೊಡ್ಡ ಕಡತಗಳನ್ನು (ಉದಾ., ೨ಜೀಬಿಗಿಂತ ಹೆಚ್ಚಿನ) ನಿಭಾಯಿಸಲು ಬೆಂಬಲ

ಡೀಫಾಲ್ಟ್ httpd ಸಂರಚನೆಯಲ್ಲಿ ಈ ಕೆಳಗಿನ ಬದಲಾವಣೆಯನ್ನು ಮಾಡಲಾಗಿದೆ:

  • ಇನ್ನುಮುಂದೆ mod_cern_meta ಮತ್ತು mod_asis ಮಾಡ್ಯೂಲುಗಳು ಡೀಫಾಲ್ಟ್ ಆಗಿ ಲೋಡ್ ಆಗುವುದಿಲ್ಲ.

  • mod_ext_filter ಮಾಡ್ಯೂಲನ್ನು ಈಗ ಡೀಫಾಲ್ಟ್ ಆಗಿ ಲೋಡ್ ಮಾಡಲಾಗಿದೆ.

ನೀವು ಹಿಂದೆ ಬಿಡುಗಡೆಯಾದ Red Hat ಎಂಟರ್ಪ್ರೈಸ್ ಲಿನಕ್ಸ್ ಅನ್ನು ಅಪ್ಗ್ರೇಡ್ ಮಾಡುವಂತಿದ್ದರೆ, httpd ಸಂರಚನೆಯನ್ನು httpd ೨.೨ಗೆ ಅಪ್ಡೇಟ್ ಮಾಡುವ ಅಗತ್ಯವಿದೆ. ಹೆಚ್ಚಿನ ಮಾಹಿತಿಗಾಗಿ,http://httpd.apache.org/docs/2.2/upgrading.html ಅನ್ನು ಸಂಪರ್ಕಿಸಿ.

httpd.2 ಕ್ಕೆ ಸಂಕಲಿಸಿದ ಯಾವುದಾದರೂ ಮೂರನೆ ಪಕ್ಷದ ಮಾಡ್ಯೂಲುಗಳನ್ನು httpd 2.2 ಗಾಗಿ ಪುನರ್ರಚನೆ ಮಾಡಬೇಕು.

php

ಈಗ Red Hat ಎಂಟರ್ಪ್ರೈಸ್ ಲಿನಕ್ಸ್ 5ಯು PHPಯ ಆವೃತ್ತಿ ೫.೧ಯನ್ನು ಒಳಗೊಂಡಿದೆ, ಇದು ಭಾಷೆಗೆ ಬಹಳಷ್ಟು ಬದಲಾವಣೆಗಳ ಜೊತೆಗೆ ಕಾರ್ಯ ನಿರ್ವಹಣೆಯಲ್ಲಿ ಗುರುತರ ಸುಧಾರಣೆಗಳನ್ನು ಒಳಗೊಂಡಿದೆ. ಹೊಸ ಆವೃತ್ತಿಯೊಂದಿಗೆ ಉಪಯೋಗಿಸಲು ಕೆಲವೊಂದು ಸ್ಕ್ರಿಪ್ಟುಗಳನ್ನು ಸಂಪಾದಿಸ ಬೇಕು; PHP ೪.೩ ನಿಂದ PHP ೫.೧ಗೆ ಬದಲಾಯಿಸಲು ಹೆಚ್ಚಿನ ಮಾಹಿತಿಗಳಿಗೆ ದಯವಿಟ್ಟು ಈ ಕೆಳಗಿನ ಲಿಂಕನ್ನು ಸಂಪರ್ಕಿಸಿ:

http://www.php.net/manual/en/migration5.php

ಕಾರ್ಯಗತಗೊಳಿಸಬಲ್ಲ /usr/bin/php ವು ಈಗ CGI SAPIಗೆ ಬದಲಾಗಿ CLI command-line SAPIಯಿಂದ ನಿರ್ಮಿತವಾಗಿದೆ. CGI SAPIಗೆ /usr/bin/php-cgi ಅನ್ನು ಉಪಯೋಗಿಸಿ. ಕಾರ್ಯಗತಗೊಳಿಸಬಲ್ಲ php-cgiವು FastCGI ಬೆಂಬಲವನ್ನು ಸಹ ಒಳಗೊಂಡಿದೆ.

ಈ ಕೆಳಗಿನ ಎಕ್ಸಟೆನ್ಶನ್ ಮಾಡ್ಯೂಲುಗಳನ್ನು ಸೇರಿಸಲಾಗಿದೆ:

  • mysqli ಎಕ್ಸಟೆನ್ಶನ್, MySQL 4.1 ಗೆ ವಿಶೇಷವಾಗಿ ರಚಿತವಾದ ಒಂದು ಹೊಸ ಅಂತರ್ಮುಖಿ (php-mysql ಪ್ಯಾಕೇಜಿನಲ್ಲಿ ಸೇರಿಸಲಾಗಿದೆ)

  • date, hash, Reflection, SPL ಮತ್ತು SimpleXML (php ಪ್ಯಾಕೇಜಿನೊಂದಿಗೆ ಸೇರಿಸಲ್ಪಟ್ಟ)

  • pdo ಮತ್ತು pdo_psqlite (php-pdo ಪ್ಯಾಕೇಜಿನಲ್ಲಿ)

  • pdo_mysql (php-mysql ಪ್ಯಾಕೇಜಿನಲ್ಲಿ)

  • pdo_pgsql (php-pgsql ಪ್ಯಾಕೇಜಿನಲ್ಲಿ)

  • pdo_odbc (php-odbc ಪ್ಯಾಕೇಜಿನಲ್ಲಿ)

  • soap (php-soap ಪ್ಯಾಕೇಜಿನಲ್ಲಿ)

  • xmlreader ಮತ್ತುxmlwriter (php-xml ಪ್ಯಾಕೇಜಿನಲ್ಲಿ)

  • dom (php-xmlನ ಪ್ಯಾಕೇಜಿನಲ್ಲಿನ domxml ಎಕ್ಸಟೆನ್ಶನ್ ಅನ್ನು ಬದಲಾಯಿಸಲಾಗಿ)

ಈ ಕೆಳಗಿನ ಎಕ್ಸಟೆನ್ಶನ್ ಮಾಡ್ಯೂಲುಗಳು ಇನ್ನು ಮುಂದೆ ಸೇರ್ಪಡೆಯಾಗಿರುವುದಿಲ್ಲ:

  • dbx

  • dio

  • yp

  • overload

  • domxml

The PEAR Framework

PEAR ಚೌಕಟ್ಟು ಈಗ php-pear ಪ್ಯಾಕೇಜಿನಲ್ಲಿ ಪ್ಯಾಕೇಜುಗೊಳಿಸಲಾಗಿದೆ. ಈ ಕೆಳಗಿನ PEAR ಘಟಕಗಳನ್ನು ಮಾತ್ರ Red Hat ಎಂಟರ್ಪ್ರೈಸ್ ಲಿನಕ್ಸ್ 5ನಲ್ಲಿ ಸೇರ್ಪಡಿಸಲಾಗಿದೆ:

  • Archive_Tar

  • Console_Getopt

  • XML_RPC

ಎನ್ಕ್ರಿಪ್ಟ್ ಆದ ಸ್ವಾಪ್ ವಿಭಜನೆಗಳು ಮತ್ತು ಮೂಲವಲ್ಲದ ಕಡತ ವ್ಯವಸ್ಥೆಗಳು

Red Hat ಎಂಟರ್ಪ್ರೈಸ್ ಲಿನಕ್ಸ್ 5ವು ಈಗ ಎನ್ಕ್ರಿಪ್ಟ್ ಆದ ಸ್ವಾಪ್ ವಿಭಜನೆಗಳು ಮತ್ತು ಮೂಲವಲ್ಲದ ಕಡತ ವ್ಯವಸ್ಥೆಗಳಿಗೆ ಮೂಲಭೂತ ಬೆಂಬಲವನ್ನು ನೀಡುತ್ತದೆ. ಈ ಲಕ್ಷಣಗಳನ್ನು ಉಪಯೋಗಿಸಲು, /etc/crypttabಗೆ ಯೋಗ್ಯ ನಮೂದನ್ನು ಸೇರಿಸಿ ಮತ್ತು ಹೀಗೆ ನಿರ್ಮಿಸಲ್ಪಟ್ಟ ಸಾಧನಗಳನ್ನು/etc/fstabನಲ್ಲಿ ಉಲ್ಲೇಖಿಸಿ.

ಕೆಳಗೆ /etc/crypttab ನಮೂದಿನ ಒಂದು ನಮೂನೆ ಇದೆ:

my_swap /dev/hdb1 /dev/urandom swap,cipher=aes-cbc-essiv:sha256

ಇದು ಎನ್ಕ್ರಿಪ್ಟ್ ಆದ ಬ್ಲಾಕ್ ಸಾಧನ /dev/mapper/my_swap ವನ್ನು ನಿರ್ಮಿಸುತ್ತದೆ, ಇದನ್ನು /etc/fstab ನಲ್ಲಿ ಉಲ್ಲೇಖಿಸಬಹುದು.

ಕೆಳಗೆ ಒಂದು ಕಡತ ವ್ಯವಸ್ಥೆಯ ಸಂಪುಟದ /etc/crypttab ನಮೂದಿನ ನಮೂನೆ ಇದೆ:

my_volume /dev/hda5 /etc/volume_key cipher=aes-cbc-essiv:sha256

/etc/volume_key ಕಡತವು ಒಂದು ಸರಳಪಠ್ಯ ಎನ್ಕ್ರಿಪ್ಶನ್ ಕೀಯನ್ನು ಹೊಂದಿದೆ. ನೀವು noneಅನ್ನು ಒಂದು ಕಡತದ ಹೆಸರಾಗಿಯೂ ಸಹ ನಿಗದಿತಗೊಳಿಸಬಹುದು; ಬದಲಿಗೆ ಇದು, ಬೂಟ್ ಆಗುವಾಗ ಎನ್ಕ್ರಿಪ್ಶನ್ ಕೀಯನ್ನು ಕೇಳುವಂತೆ ಗಣಕವನ್ನು ಸಂರಚಿಸುತ್ತದೆ.

ಗಣಕದ ಸಂಪುಟಗಳನ್ನು ಹೊಂದಿಸುವಾಗ LUKS (Linux Unified Key Setup)ಅನ್ನು ಉಪಯೋಗಿಸಲು ಸೂಚಿಸುತ್ತೇವೆ. ಹೀಗೆ ಮಾಡಲು, ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:

  1. cryptsetup luksFormatಅನ್ನು ಉಪಯೋಗಿಸಿ ಎನ್ಕ್ರಿಪ್ಟೆಡ್ ಸಂಪುಟವನ್ನು ರಚಿಸಿ.

  2. /etc/crypttabಗೆ ಅಗತ್ಯ ನಮೂದನ್ನು ಸೇರಿಸಿ.

  3. ಸ್ವಹಸ್ತವನ್ನು ಉಪಯೋಗಿಸಿ cryptsetup luksOpen ಸಂಪುಟವನ್ನು ಹೊಂದಿಸಿ(ಅಥವ ರೀಬೂಟ್ ಮಾಡಿ).

  4. ಎನ್ಕ್ರಿಪ್ಟೆಡ್ ಸಂಪುಟದಲ್ಲಿ ಒಂದು ಕಡತ ವ್ಯವಸ್ಥೆಯನ್ನು ರಚಿಸಿ.

  5. /etc/fstabಗೆ .ಅಗತ್ಯ ನಮೂದನ್ನು ಸೇರಿಸಿ.

ಆರೋಹಿಸು ಮತ್ತು ಅವರೋಹಿಸು

mount ಮತ್ತು umount ಆಜ್ಞೆಗಳು ಇನ್ನು ಮುಂದೆ NFS ಅನ್ನು ನೇರವಾಗಿ ಬೆಂಬಲಿಸುವುದಿಲ್ಲ, ಒಂದು ಬಿಲ್ಟ್-ಇನ್ NFS ಕ್ಲೈಂಟ್ ಅಸ್ತಿತ್ವದಲ್ಲಿರುವುದಿಲ್ಲ. /sbin/mount.nfs ಮತ್ತು /sbin/umount.nfs ಸಹಾಯಕಗಳನ್ನು ನೀಡಬಲ್ಲ ಒಂದು ಪ್ರತ್ಯೇಕ nfs-utils ಪ್ಯಾಕೇಜನ್ನು ಇದಕ್ಕಾಗಿ ಅನುಸ್ಥಾಪಿಸರಬೇಕು

CUPS ಮುದ್ರಕದ ಶೋಧನೆ

ಒಂದು ಸ್ಥಳೀಯ ಸಬ್-ನೆಟ್ ನ ಮೇಲೆ ಶೋಧಿಸುವ CUPS ಮುದ್ರಕವನ್ನು ಚಿತ್ರಾತ್ಮಕ ಉಪಕರಣ system-config-printerವನ್ನು ಉಪಯೋಗಿಸಿ ಸಂರಚಿಸಬಹುದು. ಇದನ್ನು CUPS ಜಾಲ ಅಂತರ್ಮುಖಿ http://localhost:631/ ಯನ್ನು ಉಪಯೊಗಿಸಿಕೊಂಡು ನೆರೆವೇರಿಸಬಹುದು.

ಸಬ್-ನೆಟ್ ನ ನಡುವೆ ಶೋಧಿಸುವ ಮುದ್ರಕಕ್ಕಾಗಿ ನೇರಯುತ ಪ್ರಸಾರವನ್ನು ಉಪಯೋಗಿಸಲು, ಕ್ಲೈಂಟಿನ ಮೇಲೆ /etc/cups/cupsd.conf ಅನ್ನು ತೆರೆಯಿರಿ ಮತ್ತು BrowseAllow @LOCAL ಅನ್ನು BrowseAllow ALLನೊಂದಿಗೆ ಬದಲಾಯಿಸಿ.

ATI ಮತ್ತು R500 ಬೆಂಬಲ

R500 ಚಿಪ್-ಸೆಟ್ ಆಧರಿತ ATI ಚಿತ್ರಾತ್ಮಕ ಕಾರ್ಡುಗಳು vesa ಚಾಲಕಕ್ಕೆ ಮಾತ್ರ ಬೆಂಬಲಿತವಾಗಿದೆ, ಮತ್ತು ಇವು ಬಾಹ್ಯ ತೆರೆಗಳು, LCD ಪ್ರಕ್ಷೇಪಕಗಳು ಅಥವ ವೇಗವರ್ಧಿತ ೩ಡಿ ಬೆಂಬಲಗಳ ಮೇಲೆ Red Hat ಎಂಟರ್ಪ್ರೈಸ್ ಲಿನಕ್ಸ್ 5 ಇಂದ ಬೆಂಬಲಿತವಾಗಿಲ್ಲ.

up2date ಮತ್ತು yum

up2date ಯು yum ನ ಪರವಾಗಿ ಅಸಮ್ಮತಿಗೊಳ್ಳುತ್ತಿದೆ (Yellowdog Updater Modified). ಹಾಗೆಯೇ, ನಿಮ್ಮ ಗಣಕವು ಯಾವುದೇ up2date-ಪರಾವಲಂಬಿ ಸ್ಕ್ರಿಪ್ಟನ್ನು ಉಪಯೋಗಿಸುತ್ತಿದೆಯೇ ಎಂದು ಪುನರ್ ಪರಿಶೀಲಿಸುವುದು ಉತ್ತಮ. yumನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, man yumಆಜ್ಞೆಯೊಂದಿಗೆ ಅದರ ಮ್ಯಾನ್ ಪುಟವನ್ನು ಸಂಪರ್ಕಿಸಿ; ನೀವು/usr/share/doc/yum-<version> ಮತ್ತು /usr/share/doc/yum-metadata-parser-<version> ಕೋಶಗಳಡಿಯಲ್ಲಿ ಅನುಸ್ಥಾಪಿತವಾದ ದಸ್ತಾವೇಜನ್ನು ಸಹ ಸಂಪರ್ಕಿಸಬಹುದು(<version> ಅನ್ನು ಅನುಸ್ಥಾಪಿತವಾದ yum ಮತ್ತು yum-metadata-parser ನ ಸರಿಯಾದ ಆವೃತ್ತಿಯೊಂದಿಗೆ ಬದಲಾಯಿಸಿ).

OpenLDAP ಪರಿಚಾರಕ ಮತ್ತು Red Hat ಕೋಶ ಪರಿಚಾರಕ

Red Hat ಕೋಶ ಪರಿಚಾರಕವು ಒಂದು LDAP ಆಧರಿತ ಪರಿಚಾರಕ, ಇದು ಎಂಟರ್ಪ್ರೈಸ್ ಹಾಗೂ ಜಾಲಬಂಧ ದತ್ತವನ್ನು ಒಂದು OS-ಅವಲಂಬಿತವಾಗದ,ಜಾಲಬಂಧ ಆಧರಿತ ರಿಜಿಸ್ಟ್ರಿಯ ರೀತಿಯಲ್ಲಿ ಕೇಂದ್ರೀಕೃತಗೊಳಿಸುತ್ತದೆ. ಇದನ್ನು OpenLDAP ಪರಿಚಾರಕ ಘಟಕಗಳನ್ನು ಬದಲಾಯಿಸುವಂತೆ ಹೊಂದಿಸಲಾಗಿದೆ, ಇದು Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ನಂತರ ಅಸಮ್ಮತಿಗೊಳ್ಳುತ್ತದೆ. Red Hat ಕೋಶ ಪರಿಚಾಕದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ http://www.redhat.com/software/rha/directory/ ಅನ್ನು ಸಂಪರ್ಕಿಸಿ.

i810 ಚಾಲಕ ಮತ್ತು i830 ಬೆಂಬಲ

i810 ಚಾಲಕಗಳು i810 ನಿಂದ i965 ವರೆಗೂ ಎಲ್ಲಾ ಸಂಘಟಿತವಾದ ಇಂಟೆಲ್ ಚಿತ್ರಾತ್ಮಕ ಚಿಪ್-ಸೆಟ್ಟುಗಳನ್ನು ಬೆಂಬಲಿಸುತ್ತದೆ. ಆದರೆ i830 (ಮತ್ತು ಹೊಸ) ಚಿಪ್-ಸೆಟ್ಟುಗಳಿಗೆ ನೀಡುವ ಬೆಂಬಲ ಮಾತ್ರ ಸೀಮಿತವಾಗಿದೆ; i810 ಚಾಲಕವು ವೀಡಿಯೂ BIOS ನಲ್ಲಿ ಪಟ್ಟಿಯಾದ ಕ್ರಮಗಳಿಗೆ ಮಾತ್ರ ಹೊಂದಿಸಬಲ್ಲದು. ನಿಮ್ಮ ಗಣಕದಲ್ಲಿ i830 ಅಥವ ಹೊಸ ಚಿಪ್-ಸೆಟ್ ಅನುಸ್ಥಾಪಿತಗೊಂಡಿದ್ದರೆ, ಲಭ್ಯವಿರುವ ಕ್ರಮಗಳನ್ನು ಕಂಡುಕೊಳ್ಳಲು ಈ ಕೆಳಗಿನ ಆಜ್ಞೆಯನ್ನು ಚಲಾಯಿಸಿ:

grep Mode: /var/log/Xorg.0.log

ನಕ್ಷತ್ರ (*) ಚಿಹ್ನೆಯಿಂದ ಗುರುತು ಹಾಕಲ್ಪಟ್ಟ ಕ್ರಮಗಳು ಆಯ್ಕೆಗೆ ಲಭ್ಯವಿದೆ

ಬಹಳಷ್ಟು ಲ್ಯಾಪ್-ಟಾಪ್ ವಿಡಿಯೋ BIOSಗಳು ಸ್ಥಳೀಯ ಪ್ಯಾನೆಲ್ ಗಾತ್ರಕ್ಕೆ ಹೊಂದುವಂತಹ ಒಂದು ಕ್ರಮವನ್ನು ಒದಗಿಸುವುದಿಲ್ಲ. ಆದ್ದರಿಂದ ಆಯ್ದ ಕ್ರಮವು ಎಳೆದಂತೆ, ವಿರೂಪಗೊಳಿಸಿದಂತೆ, ಅಥವ ಕಪ್ಪು ಅಂಚುಗಳನ್ನು ಹೊಂದಿರುವಂತೆ ಕಾಣುತ್ತದೆ. ಹಾಗೆಲ್ಲಿಯಾದರೂ ನೀವು ಆರಿಸಿದ ಕ್ರಮದಲ್ಲಿ ಸರಿಯಾಗಿ ತೋರದೇ ಹೋದರೆ, ನಿಮ್ಮ ಗಣಕಕ್ಕೆ, ಸ್ಥಳೀಯ ಪ್ಯಾನೆಲ್ ಗಾತ್ರ ಸರಿಯಾಗಿ ಕೆಲಸ ಮಾಡಲು ನಿಮ್ಮ ಯಂತ್ರಾಂಶ ವ್ಯಾಪಾರಿಯಿಂದ ಒಂದು BIOS ಅಪ್ಡೇಟಿನ ಮಾಡಿಕೊಳ್ಳ ಬೇಕು.

ಸ್ಮಾರ್ಟ್ ಕಾರ್ಡ್ ಪ್ರವೇಶ

Red Hat ಎಂಟರ್ಪ್ರೈಸ್ ಲಿನಕ್ಸ್ 5 ಯು ಸ್ಮಾರ್ಟ್ ಕಾರ್ಡುಗಳಿಗೆ ಬೆಂಬಲವನ್ನು ನೀಡುತ್ತದೆ, ಇದು ನಿಮ್ಮ ಕೀ ಜೊತೆಗೆ ಮತ್ತು ಒಂದು ಅಸೋಸಿಯೇಟೆಡ್ ಸಾರ್ವತ್ರಿಕ ಕೀ ಸರ್ಟಿಫಿಕೇಟಿಗೆ ಸುಭದ್ರ ಶೇಖರಣೆಯನ್ನು ಒದಗಿಸುತ್ತದೆ. ಈ ಕೀಗಳು ಒಂದು ಪಿನ್ ಕೋಡಿನಿಂದ ಸುರಕ್ಷಿತವಾಗಿದ್ದು, ಸ್ಮಾರ್ಟ್ ಕಾರ್ಡಿನ ಮೇಲೆ ಕೀ ಅಥವ ಸರ್ಟಿಫಿಕೇಟಿನ ಅವಶ್ಯಕತೆ ಇದ್ದಾಗ ಈ ಪಿನ್ ಅನ್ನು ನೀಡಬೇಕಾಗುತ್ತದೆ.

ಒಂದು Red Hat ಎಂಟರ್ಪ್ರೈಸ್ ಲಿನಕ್ಸ್ 5ನಲ್ಲಿ ಸ್ಮಾರ್ಟ್ ಕಾರ್ಡನ್ನು ನಿಯೋಜಿಸುವುದರಿಂದ ವಾತಾವರಣವು, ದೃಢೀಕರಣಕ್ಕೆ ಸಂಬಂಧಿತ ಸುರಕ್ಷತೆಗಳನ್ನು ಹೆಚ್ಚಿಸಿಕೊಳ್ಳಲು Kerberos ಮತ್ತು S/MIMEಗಳಂತಹುಗಳ ಪ್ರಯೋಜನ ಪಡೆಯಲು ಅನುಮತಿಸುತ್ತದೆ. Red Hat ಎಂಟರ್ಪ್ರೈಸ್ ಲಿನಕ್ಸ್ 5 ವು ಈ ಕೆಳಗಿನವುಗಳನ್ನು ಬೆಂಬಲಿಸುತ್ತದೆ:

  • Axalto Cyberflex 32K e-Gate

  • DoD CAC ಕಾರ್ಡುಗಳು

ಸ್ಮಾರ್ಟ್ ಕಾರ್ಡ್ ದೃಡೀಕರಣವನ್ನು ಹೊಂದಿಸಲು, ನಿಮ್ಮ ಜಾಲಬಂಧವು Red Hat ಮತ್ತು Red Hatಸರ್ಟಿಫಿಕೇಟ್ ವ್ಯವಸ್ಥೆಯಿಂದ ಸಜ್ಜುಗೊಂಡಿರುವುದು ಅಗತ್ಯ. ಸ್ಮಾರ್ಟ್ ಕಾರ್ಡುಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, Red Hat ಎಂಟರ್ಪ್ರೈಸ್ ಲಿನಕ್ಸ್ ನಿಯೋಜನ ಮಾರ್ಗದರ್ಶಿಯ ಅಧ್ಯಾಯ Single Sign-On ಅನ್ನು ಸಂಪರ್ಕಿಸಿ.

Intel PRO/Wireless 3945ABG ಜಾಲಬಂಧ ಸಂಪರ್ಕಕ್ಕೆ ಬೆಂಬಲ

Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಬಿಡುಗಡೆಯು ipw3945 (Intel PRO/Wireless 3945ABG ಜಾಲಬಂಧ ಸಂಪರ್ಕ) ಅಡಾಪ್ಟರ್ರಿಗೆ ಬೆಂಬಲವನ್ನು ಒಳಗೊಂಡಿದೆ. Red Hat ಎಂಟರ್ಪ್ರೈಸ್ ಲಿನಕ್ಸ್ 5 ದ ಪೂರಕ ಡಿಸ್ಕ್ ಅಡಾಪ್ಟರನ್ನು ಬೆಂಬಲಿಸಲು ಬೇಕಾಗುವ ಚಾಲಕಗಳು, ರೆಗ್ಯುಲೇಟರಿ ಡೆಮೊನ್ ಮತ್ತು ಫರ್ಮ್-ವೇರನ್ನು ಒಳಗೊಂಡಿದೆ.

ipw3945 ವೈರ್-ಲೆಸ್ ಅಡಾಪ್ಟರ್ ಗೆ ಸಮರ್ಥನೆಯನ್ನು ಶಕ್ತಗೊಳಿಸಲು, Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ಪೂರಕ ಡಿಸ್ಕಿನಲ್ಲಿನ ಕಡತ ಸಂಖ್ಯೆ "3945"ಅನ್ನು ಹೊಂದಿದ ಪ್ಯಾಕೇಜುಗಳನ್ನು ಹುಡುಕಿ ಅವುಗಳನ್ನು ಗಣಕದಲ್ಲಿ ಅನುಸ್ಥಾಪಿಸಿ.

rawio

rawioಯು ಅಸಮ್ಮತಿಗೊಂಡ ಒಂದು ಅಂತರ್ಮುಖಿ; ಆದರೂ ಇದಕ್ಕೆ Red Hat ಎಂಟರ್ಪ್ರೈಸ್ ಲಿನಕ್ಸ್ 5ನಲ್ಲಿ ಬೆಂಬಲವನ್ನು ಉಳಿಸಲಾಗಿದೆ. ನಿಮ್ಮಲ್ಲಿ ಯಾವುದಾದರೂ ಅನ್ವಯಗಳು rawioಅನ್ನು ಉಪಯೋಗಿಸಿಕೊಂಡ ಸಾಧನವನ್ನು ನಿಲುಕಿಸಿಕೊಳ್ಳುತ್ತಿದ್ದರೆ, ಬ್ಲಾಕ್ ಸಾಧನವನ್ನು O_DIRECT ಫ್ಲಾಗನ್ನು ಉಪಯೋಗಿಸಿಕೊಂಡು ತೆರೆಯುವಂತೆ ನಿಮ್ಮ ಅನ್ವಯವನ್ನು ಮಾರ್ಪಡಿಸಲು ಬಲವಾಗಿ ಸಲಹೆ ನೀಡುತ್ತೇವೆ. rawio ಅಂತರ್ಮುಖಿಯು Red Hat ಎಂಟರ್ಪ್ರೈಸ್ ಲಿನಕ್ಸ್ 5ನೊಂದಿಗೆ ಸದಾ ಇದ್ದರೂ ಮುಂದೊಂದು ಅದನ್ನು ಬಿಡುಗಡೆಯಲ್ಲಿ ತೆಗೆಯಲಾಗುತ್ತದೆ.

ಪ್ರಸ್ತುತ, ಕಡತ ವ್ಯವಸ್ಥೆಗಳ ಮೇಲೆ AIO (Asynchronous I/O)ಯು O_DIRECT ಅಥವ ಬಫರ್ ಅಲ್ಲದ ಕ್ರಮದಲ್ಲಿ ಮಾತ್ರ ಬೆಂಬಲಿತವಾಗಿದೆ. ಅಲ್ಲದೇ, ಅನುರೂಪವಲ್ಲದ ಪೋಲ್ ಅಂತರ್ಮುಖಿಯು ಅಸ್ತಿತ್ವದಲ್ಲಿಲ್ಲ, ಮತ್ತು ಆ AIO ಪೈಪುಗಳ ಮೇಲೆ ಇನ್ನು ಮುಂದೆ ಬೆಂಬಲಿತವಾಗಿರುವುದಿಲ್ಲ.

ctmpc

ctmpc ಒಂದು ಅಸಮ್ಮತಿಗೊಂಡ ಚಾಲಕ, ಆದರೆ ಇದು ಇನ್ನೂ Red Hat ಎಂಟರ್ಪ್ರೈಸ್ ಲಿನಕ್ಸ್ 5ನೊಂದಿಗೆ ಉಳಿಸಿಕೊಳ್ಳಲಾಗಿದೆ. ಮುಂಬರುವ ಬಿಡುಗಡೆಯಲ್ಲಿ ಇದನ್ನು ತೆಗೆಯಲಾಗುತ್ತದೆ ಎಂಬುದನ್ನು ಗಮನಿಸಿ.

Policy Moduleಗಳು ಹಾಗೂ semanageಗಳಿಗಾಗಿನ ಸಮರ್ಥನೆ

Red Hat ಎಂಟರ್ಪ್ರೈಸ್ ಲಿನಕ್ಸ್ 5 ಈಗ ಪಾಲಿಸಿ ಮಾಡ್ಯೂಲುಗಳು ಮತ್ತು semanageಅನ್ನು ಬೆಂಬಲಿಸುತ್ತದೆ. ಪಾಲಿಸಿ ಮಾಡ್ಯೂಲುಗಳು semodule ಮತ್ತು checkmodule ಉಪಕರಣವನ್ನು ಉಪಯೋಗಿಸುವ ಮೂಲಕ ಪಾಲಿಸಿ ಗ್ರಾಹಕೀಕರಣ ಮತ್ತು ಮೂರನೇ ವ್ಯಕ್ತಿ ಪಾಲಿಸಿಗಳ ನಿರ್ಮಾಣ ಹಾಗೂ ವಿತರಣೆಯನ್ನು ಸರಳಗೊಳಿಸುತ್ತದೆ

semanage ಉಪಕರಣವು SELinux ಸಂರಚನೆಯನ್ನು ಮಾರ್ಪಡಿಸುವ ಒಂದು ಪಾಲಿಸಿ ವ್ಯವಸ್ಥಾಪನ ಉಪಕರಣ. ಅದು ನಿಮಗೆ Linux-ನಿಂದ-SELinux ಕಡತ ಸನ್ನಿವೇಶಗಳು, ಜಾಲಬಂಧ ಘಟಕ ಲೇಬಲಿಂಗ್, ಮತ್ತು ಬಳಕೆದಾರ ಮ್ಯಾಪಿಂಗುಗಳನ್ನು ಸಂರಚಿಸಲು ಅನುಮತಿಸುತ್ತದೆ.

raw ಡಿವೈಸ್ ಮ್ಯಾಪಿಂಗ್

raw ಸಾಧನಗಳ ಅಂತರ್ಮುಖಿಯು Red Hat ಎಂಟರ್ಪ್ರೈಸ್ ಲಿನಕ್ಸ್ 5ನಲ್ಲಿ ಅಸಮ್ಮತಿಗೊಂಡಿದೆ; rawಸಾಧನ ಮ್ಯಾಪಿಂಗ್ ಈಗ udevನಿಯಮಗಳ ಮೂಲಕ ಸಂರಚಿಸಲಾಗುವುದು.

raw ಸಾಧನ ಮಾಪಿಂಗನ್ನು ಸಂರಚಿಸಲು, ಯೋಗ್ಯವಾದ ನಮೂದನ್ನು /etc/udev/rules.d/60-raw.rulesಗೆ ಈ ಕೆಳಗಿನ ರೀತಿಯಲ್ಲಿ ಸೇರಿಸಿ:

  • ಸಾಧನದ ಹೆಸರುಗಳಿಗಾಗಿ:

    ACTION=="add", KERNEL="<ಸಾಧನದ ಹೆಸರು>", RUN+="raw /dev/raw/rawX %N"
    
  • ಹಿರಿಯ / ಕಿರಿಯ ಸಂಖ್ಯೆಗಳಿಗೆ:

    ACTION=="add", ENV{MAJOR}="A", ENV{MINOR}="B", RUN+="raw /dev/raw/rawX %M %m"
    

<ಸಾಧನದ ಹೆಸರು> ವನ್ನು ನೀವು ಬೈಂಡ್ ಮಾಡಬೇಕೆಂದಿರುವ ಸಾಧನದ ಹೆಸರಿನಿಂದ ಬದಲಾಯಿಸಿ (ಉದಾಹರಣೆಗೆ, /dev/sda1). "A" ಮತ್ತು "B" ವು ನೀವು ಬೈಂಡ್ ಮಾಡಬೇಕೆಂದಿರುವ ಸಾಧನದ ಹಿರಿಯ / ಕಿರಿಯ ಸಂಖ್ಯೆಗಳು ಹಾಗು X ವು ನೀವು ಗಣಕದಲ್ಲಿ ಉಪಯೋಗಿಸಬೇಕೆಂದಿರುವ raw ಸಾಧನ ಸಂಖ್ಯೆ.

ನಿಮ್ಮಲ್ಲಿ ಬಹುದೊಡ್ಡ, ಈಗಾಗಲೇ ಇರುವ /etc/sysconfig/rawdevices ಕಡತವಿದ್ದರೆ, ಅದನ್ನು ಈ ಕೆಳಗಿನ ಸ್ಕ್ರಿಪ್ಟಿನ ಸಹಾಯದಿಂದ ಬದಲಾಯಿಸಿ:

#!/bin/sh

grep -v "^ *#" /etc/sysconfig/rawdevices | grep -v "^$" | while read dev major minor ; do
        if [ -z "$minor" ]; then
                echo "ACTION==\"add\", KERNEL==\"${major##/dev/}\", RUN+=\"/usr/bin/raw $dev %N\""
        else
                echo "ACTION==\"add\", ENV{MAJOR}==\"$major\", ENV{MINOR}==\"$minor\", RUN+=\"/usr/bin/raw $dev %M %m\""
        fi
done
QLogic ಬೆಂಬಲ

Red Hat ಎಂಟರ್ಪ್ರೈಸ್ ಲಿನಕ್ಸ್ 5ಯು QLogic iSCSIನ ಸಂಕುಲ HBA (Host Bus Adapters)ಅನ್ನು ಬೆಂಬಲಿಸುತ್ತದೆ. ಪ್ರಸ್ತುತ,ಈ ಬೋರ್ಡುಗಳಿಗಾಗಿ ಕೇವಲ iSCSI ಅಂತರ್ಮುಖಿಗಳು ಮಾತ್ರ ಬೆಂಬಲಿತವಾಗಿವೆ ( qla4xxx ಚಾಲಕವನ್ನು ಉಪಯೋಗಿಸಿಕೊಂಡು.

ಅಲ್ಲದೇ, Red Hat ಪ್ರಸ್ತುತ Ethernet NICನಂತಹ ಬೋರ್ಡುಗಳನ್ನು ಬೆಂಬಲಿಸುವುದಿಲ್ಲ, ಏಕೆಂದರೆ ಈ ಸಾಮರ್ಥ್ಯಕ್ಕೆ qla3xxx ಚಾಲಕದ ಆವಶ್ಯಕತೆ ಇದೆ. ಈ ವಿವಾದವನ್ನು ಮುಂಬರುವ Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಸಣ್ಣ ಪುಟ್ಟ ಬಿಡುಗಡೆಯಲ್ಲಿ ಸರಿಪಡಿಸಲಾಗುವುದು.

IBM System z ಮಾಹಿತಿ ಪಟ್ಟಿ

IBM System z ದ ಸೂಚನಾ ಸೆಟ್ಟನ್ನು 31-bit ಅನ್ವಯಗಳಿಗಾಗಿ ಅನುಕೂಲಕರ ರೀತಿಯಲ್ಲಿ ಬಳಸಿಕೊಳ್ಳಲು, ನೀವು gcc ಆಯ್ಕೆ -march=z900 ಯನ್ನು ಬಳಸಿ ಎಂದು ಸೂಚಿಸಲಾಗುತ್ತದೆ. 64-bit ಅನ್ವಯಗಳಿಗೆ, gcc ಯು IBM System z ಸೂಚನಾ ಸೆಟ್ಟನ್ನು ಡೀಫಾಲ್ಟ್ ಆಗಿ ಬಳಸಿಕೊಳ್ಳುತ್ತದೆ.

Linux ಗಾಗಿ iSeries ಅನುಮತಿ

Linux ನ iSeries ODBC ಚಾಲಕವನ್ನು Linux ನ iSeries ಅನುಮತಿ ಯಿಂದ ಬದಲಾಯಿಸಲಾಗಿದ್ದು, ಅದನ್ನು ಈ ಕೆಳಗಿನ ಲಿಂಕಿನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು:

http://www.ibm.com/eserver/iseries/access/linux/

Linux ನ iSeries ಅನುಮತಿ iSeries ಪರಿಚಾರಕಕ್ಕೆ Linux-ಆಧರಿತ ಅನುಮತಿಯನ್ನು ನೀಡುತ್ತದೆ, ಮತ್ತು ನಿಮಗಾಗಿ:

  • ODBC ಚಾಲಕದ ಮೂಲಕ (Universal Database) iSeries ಗಾಗಿDB2 UDB ಯನ್ನು ನಿಲುಕಿಸಿಕೊಳ್ಳುತ್ತದೆ

  • ಒಂದು Linux ಕ್ಲೈಂಟಿನಿಂದ ಒಂದು iSeries ಪರಿಚಾರಕಕ್ಕೆ ಒಂದು 5250 ಸೆಶನ್ನನ್ನು ಸ್ಥಾಪಿಸು

  • EDRS (Extended Dynamic Remote SQL) ಚಾಲಕದ ಮೂಲಕ DB2 UDB ಅನ್ನು ನಿಲುಕಿಸಿಕೊಳ್ಳುತ್ತದೆ

  • 32-bit (i386 ಮತ್ತು PowerPC) ಮತ್ತು 64-bit (x86-64 ಮತ್ತು PowerPC) ಪ್ಲಾಟ್-ಫಾರ್ಮುಗಳನ್ನು ಸಮರ್ಥಿಸುತ್ತದೆ

IBM Power4 iSeries

Red Hat ಎಂಟರ್ಪ್ರೈಸ್ ಲಿನಕ್ಸ್ ಯು ಇನ್ನು ಮುಂದೆ IBM Power4 iSeries ಅನ್ನು ಬೆಂಬಲಿಸುತ್ತಿಲ್ಲ.

ಚಾಲಕ ಅಪ್ಡೇಟ್ ಪ್ರೋಗ್ರಾಂ

ಈ ವಿಭಾಗವು Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ಕಾರ್ಯಗತಮಾಡುವ ಬಗೆಗಿನ ಮಾಹಿತಿಯನ್ನು ಒಳಗೊಂಡಿದೆ. ಚಾಲಕ ಅಪ್ಡೇಟ್ ಪ್ರೋಗ್ರಾಂ.

ಕರ್ನಲ್ ಮಾಡ್ಯೂಲ್ ಪ್ಯಾಕೇಜುಗಳು

Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಮೇಲೆ, ಒಂದು ನಿಶ್ಚಿತ ಬಿಡುಗಡೆ ಸಂಖ್ಯೆಯ ಮೇಲಲ್ಲದೆ ಮತ್ತು ಪ್ರಸ್ತುತ ಕರ್ನಲ್ ABI ಆವೃತ್ತಿಗೆ ಆಧರಿತವಾಗಿ ಅಪ್ಡೇಟಾದ ಕರ್ನಲ್ ಮಾಡ್ಯೂಲು ಪ್ಯಾಕೇಜುಗಳನ್ನು ನಿರ್ಮಿಸಲು ಸಾಧ್ಯ. ಇದು ಒಂದೇ ಒಂದು ಬಿಡುಗಡೆಯ ಬದಲಿಗೆ Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ಒಂದು ಸರಣಿ ಕರ್ನಲ್ಲುಗಳಲ್ಲಿ ಉಪಯೋಗಿಸ ಬಲ್ಲ ಕರ್ನಲ್ ಮಾಡ್ಯೂಲುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಈ ಪರಿಯೋಜನ ವೆಬ್-ಸೈಟಾದ http://www.kerneldrivers.org/ ನಲ್ಲಿ ಪ್ಯಾಕೇಜು ನಿರ್ಮಾಣದ ಪ್ರಕ್ರಿಯೆಯ ಬಗೆಗಿನ ಹೆಚ್ಚಿನ ಮಾಹಿತಿಯ ಜೊತೆಗೆ ಹಲವಾರು ಉದಾಹರಣೆಗಳನ್ನು ಹೊಂದಿದೆ.

ಈ ಕೆಳಗಿನ ವಿಷಯಗಳನ್ನೂ ಸಹ ಮಾರ್ಪಡಿಸಲಾಗಿದೆ ಎಂಬುದನ್ನು ಗಮನಿಸಿ:

  • kmod ಪ್ಯಾಕೇಜುಗಳಾಗಿ ವಿತರಿಸಲಾದ ಬೂಟ್ ಮಾರ್ಗ ಚಾಲಕಗಳಿಗೆ ಅಧೀಕೃತ ಬೆಂಬಲವಿಲ್ಲ.

  • ಈಗಿರುವ ಇನ್-ಕರ್ನಲ್ಲುಗಳನ್ನು ಹಿಂದೆಹಾಕುವು ಪ್ರಕ್ರಿಯೆಗೆ ಪ್ರಸ್ತುತ ಬೆಂಬಲವಿಲ್ಲ.

ಈ ವಿಷಯಗಳನ್ನು Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ಮುಂಬರುವ ಅಪ್ಡೇಟುಗಳಲ್ಲಿ ಗಮನಿಸಲಾಗುವುದು.

ಕರ್ನಲ್ ಮಾಡ್ಯೂಲನ್ನು ಲೋಡ್ ಮಾಡುತ್ತಿರುವುದು

Red Hat ಎಂಟರ್ಪ್ರೈಸ್ ಲಿನಕ್ಸ್ 5 ನಲ್ಲಿನ ಮಾಡ್ಯೂಲ್ ಲೋಡಿಂಗ್ ವರ್ತನೆಯು Red Hat ಎಂಟರ್ಪ್ರೈಸ್ ಲಿನಕ್ಸ್ ನ ಈ ಮೊದಲ ಬಿಡುಗಡೆಗಿಂತ ಬದಲಾಗಿದೆ. Red Hat ಎಂಟರ್ಪ್ರೈಸ್ ಲಿನಕ್ಸ್ 5 ಕರ್ನಲ್ ಪ್ಯಾಕೇಜುಗಳೊಂದಿಗೆ ಕಳುಹಿಸಲಾದ ಮಾಡ್ಯೂಲುಗಳು Red Hat ಎಂಟರ್ಪ್ರೈಸ್ ಲಿನಕ್ಸ್ 4 ನಂತೆಯೆ ಸಹಿಮಾಡಲಾಗಿದೆ. ಆದರೆ ಇನ್ನು ಮುಂದೆ Red Hat ಎಂಟರ್ಪ್ರೈಸ್ ಲಿನಕ್ಸ್ 5 ಕರ್ನಲ್ಲುಗಳಲ್ಲಿ, ಬೇರೊಂದು ಕರ್ನಲ್ ನಿರ್ಮಿತದಿಂದ ಒಂದು ಸಹಿಮಾಡಲಾದ ಮಾಡ್ಯೂಲನ್ನು ಲೋಡ್ ಮಾಡುವುದು ಅಸಾಧ್ಯ.

ಇದರರ್ಥ ಆರಂಭಿಕ Red Hat ಎಂಟರ್ಪ್ರೈಸ್ ಲಿನಕ್ಸ್ 5 ವಿತರಣೆಯೊಂದಿಗೆ ಕಳುಹಿಸಲಾದ ಒಂದು ಮಾಡ್ಯೂಲು ಭವಿಷ್ಯದ ಕರ್ನಲ್ ಅಪ್ಡೇಟುಗಳಲ್ಲಿ ಲೋಡ್ ಮಾಡಲಾಗುವುದಿಲ್ಲ. ಇದು ಸಮರ್ಥನೆಯಿಲ್ಲದ ಮಾಡ್ಯೂಲುಗಳನ್ನು ಬಳಕೆದಾರರು ಗಣಕಕ್ಕೆ ಲೋಡ್ ಮಾಡದಂತೆ ತಡೆಯಲು ಸಹಾಯ ಮಾಡುತ್ತದೆ. Red Hat ಕೇವಲ ಅದರಿಂದ ಸಹಿ ಮಾಡಲ್ಪಟ್ಟ ಹಾಗು ಅದರೊಂದಿಗೆ ವಿತರಿಸಲಾದ ಮಾಡ್ಯೂಲುಗಳನ್ನು ಮಾತ್ರ ಬೆಂಬಲಿಸುತ್ತದೆ.

ನೀವು ಒಂದು ಹಳೆಯ ಮಾಡ್ಯೂಲನ್ನು ಲೋಡ್ ಮಾಡಬೇಕೆಂದರೆ, ಒಂದು ಸಹಿ ಇಲ್ಲದೆ ಪುನರ್ ರಚಿಸಲು ಪ್ರಯತ್ನಿಸಿ. ವ್ಯತಿರಿಕ್ತವಾಗಿ, ನೀವು ಈ ಕೆಳಗಿನ ಆಜ್ಞೆಯನ್ನು ಉಪಯೋಗಿಸಿಕೊಂಡು ಬೈನರಿ ಕಡತದಿಂದ ಸಹಿಯನ್ನು ತೆಗೆಯಬಹುದು:

objcopy -R .module_sig <module name>-mod.ko <module name>-nosig.ko

ಸಹಿ ಮಾಡಲಾಗದ ಮಾಡ್ಯೂಲುಗಳನ್ನು ಲೋಡ್ ಮಾಡುವ ಮೊದಲು ಅಧೀಕೃತ Red Hat ಜಾಗತಿಕ ಬೆಂಬಲ ಪ್ರತಿನಿಧಿಯೊಂದಿಗೆ ಸಮಾಲೋಚಿಸಲು ಸೂಚಿಸಲಾಗುತ್ತದೆ.

ಅಂತರಾಷ್ತ್ರೀಕರಣ

ಈ ವಿಭಾಗವು Red Hat ಎಂಟರ್ಪ್ರೈಸ್ ಲಿನಕ್ಸ್ 5 ನ ಅಡಿಯಲ್ಲಿ ಭಾಷಾ ಬೆಂಬಲದ ಬಗೆಗಿನ ಮಾಹಿತಿಯನ್ನು ಒಳಗೊಂಡಿದೆ.

ಇನ್-ಪುಟ್ ಕ್ರಮಗಳು

SCIM (Smart Common Input Method) ವು IIIMFನ ಬದಲಿಗೆ ಏಷಿಯ ಮತ್ತು ಇತರ ಭಾಷೆಗಳ ಇನ್-ಪುಟ್ ಪದ್ದತಿಯಾಗಿ ಈ ಬಿಡುಗಡೆಯಲ್ಲಿ ಉಪಯೋಗಕ್ಕೆ ಬರುತ್ತಿದೆ. SCIMಗಾಗಿ ಡೀಫಾಲ್ಟ್ GTK ಇನ್-ಪುಟ್ ಪದ್ಧತಿ ಮಾಡ್ಯೂಲನ್ನು scim-bridgeನಲ್ಲಿ ನೀಡಲಾಗಿದೆ; Qtಯಲ್ಲಿ, ಇದು scim-qtimmನಲ್ಲಿ ನೀಡಲಾಗಿದ್ದೆ.

ವಿವಿಧ ಭಾಷೆಗಳಿಗಾಗಿ ಡೀಫಾಲ್ಟ್ ಟ್ರಿಗರ್ ಹಾಟ್ ಕೀಗಳನ್ನು ಕೆಳಗೆ ನೀಡಲಾಗಿದೆ:

  • ಎಲ್ಲಾ ಭಾಷೆಗಳಿಗೆ: Ctrl-Space

  • ಜಪಾನಿ: Zenkaku-Hankaku ಅಥವ Alt-`

  • ಕೊರಿಯನ್: Shift-Space

ಎಲ್ಲಿಯಾದರೂ SCIM ಅನುಸ್ಥಾಪಿಸಲ್ಪಟ್ಟಿದ್ದರೆ, ಅದು ಎಲ್ಲಾ ಉಪಯೋಗಿಗಳಿಗೂ ಡೀಫಾಲ್ಟ್ ಆಗಿ ಚಾಲಿತವಾಗುತ್ತದೆ.

SCIM ಯಂತ್ರದ ಪ್ಯಾಕೇಜುಗಳನ್ನು ಅನುಸ್ಥಾಪಿಸಿ ಅಥವ ತೆಗೆದ ನಂತರ SCIM ಭಾಷಾ ಮೆನುವಲ್ಲಿ ಬದಲಾವಣೆಗಳು ಕಾಣಿಸಕೊಳ್ಳಬೇಕೆಂದರೆ ಒಂದು ಹೊಸ ಡೆಸ್ಕ್-ಟಾಪ್ ಸೆಶನನ್ನು ಪ್ರಾರಂಭಿಸಲು ಸೂಚಿಸಲಾಗುತ್ತದೆ.

ಭಾಷೆಗಳ ಅನುಸ್ಥಾಪನೆ

ಏಶಿಯಾದ ಕೆಲವೊಂದು ಭಾಷೆಗಳಿಗೆ ಹೆಚ್ಚಿನ ಭಾಷಾ ಬೆಂಬಲವನ್ನು ಶಕ್ತಗೊಳಿಸಲು, ನೀವು ಅಗತ್ಯವಿರುವ ಭಾಷಾ ಬೆಂಬಲ ಪ್ಯಾಕೇಜುಗಳನ್ನು ಅನುಸ್ಥಾಪಿಸಬೇಕು. ಆ ಭಾಷೆಗಳ ಹಾಗು ಅನುಕ್ರಮವಾಗಿ ಅವುಗಳ ಭಾಷಾ ಬೆಂಬಲ ಪ್ಯಾಕೇಜುಗಳನ್ನು ಅನುಸ್ಥಾಪಿಸಲು ನೀವು ಚಲಾಯಿಸಬೇಕಿರುವ (ಮೂಲದಲ್ಲಿ) ಆಜ್ಞೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ:

  • ಅಸ್ಸಾಮಿ — yum install fonts-bengali m17n-db-assamese scim-m17n

  • ಬೆಂಗಾಲಿ — yum install fonts-bengali m17n-db-bengali scim-m17n

  • ಚೈನೀಸ್ — yum install fonts-chinese scim-chewing scim-pinyin scim-tables-chinese

  • ಗುಜರಾತಿ — yum install fonts-gujarati m17n-db-gujarati scim-m17n

  • ಹಿಂದಿ — yum install fonts-hindi m17n-db-hindi scim-m17n

  • ಜಪಾನಿ — yum install fonts-japanese scim-anthy

  • ಕನ್ನಡ — yum install fonts-kannada m17n-db-kannada scim-m17n

  • ಕೊರಿಯನ್ — yum install fonts-korean scim-hangul

  • ಮಲೆಯಾಳಂ — yum install fonts-malayalam m17n-db-malayalam scim-m17n

  • ಮರಾಠಿ — yum install fonts-hindi m17n-db-marathi scim-m17n

  • ಒರಿಯಾ — yum install fonts-oriya m17n-db-oriya scim-m17n

  • ಪಂಜಾಬಿ — yum install fonts-punjabi m17n-db-punjabi scim-m17n

  • ಸಿಂಹಳ — yum install fonts-sinhala m17n-db-sinhala scim-m17n

  • ತಮಿಳು — yum install fonts-tamil m17n-db-tamil scim-m17n

  • ತೆಲುಗು — yum install fonts-telugu m17n-db-telugu scim-m17n

ಹೆಚ್ಚಿನ ಭಾಷಾ ಬೆಂಬಲವನ್ನು ಶಕ್ತಗೊಳಿಸುವಾಗ scim-bridge-gtk ಹಾಗು scim-qtimmಅನ್ನು ಸಹ ಅನುಸ್ಥಾಪಿಸಲು ಸೂಚಿಸಲಾಗುತ್ತದೆ.scim-bridge-gtk ಪ್ಯಾಕೇಜು, ಮೂರನೇ ವ್ಯಕ್ತಿ ಅನ್ವಯಗಳು libstdc++ನ ಹಳೆಯ ಆವೃತ್ತಿಗಳೊಂದಿಗೆ ಜೋಡಣೆಯಾದಾಗ ಉಂಟಾಗಬಹುದಾದ ತಕರಾರನ್ನು ತಡೆಯುತ್ತದೆ.

ಹೆಚ್ಚಿನ ಭಾಷೆಗಳನ್ನು ಬೆಂಬಲಿಸುವ ಪ್ಯಾಕುಗಳುOpenOffice (openoffice.org-langpack-<language code>_<locale> ) ಮತ್ತು KDE (kde-i18n-<language>) ಗಳಿಗೂ ಸಹ ಲಭ್ಯವಿದೆ ಎಂಬುದನ್ನು ಗಮನಿಸಿ. ಈ ಪ್ಯಾಕೇಜುಗಳನ್ನು yumನ ಮೂಲಕವೂ ಅನುಸ್ಥಾಪಿಸಬಹುದು.

im-chooser

ಒಂದು ಹೊಸ ಸಂರಚನಾ ಉಪಕರಣ im-chooser ವನ್ನು ಸೇರ್ಪಡಿಸಲಾಗಿದೆ, ಇದು ನಿಮ್ಮ ಡೆಸ್ಕ್-ಟಾಪ್ ಮೇಲೆ ಇನ್-ಪುಟ್ ಕ್ರಮಗಳ ಉಪಯೋಗಗಳನ್ನು ಸುಲಭವಾಗಿ ಶಕ್ತ ಹಾಗೂ ಅಶಕ್ತಗೊಳಿಸಲು ನಿಮಗೆ ಅನುವುಮಾಡಿಕೊಡುತ್ತದೆ. ಆದ್ದರಿಂದ ನಿಮ್ಮಲ್ಲಿ SCIM ಅನುಸ್ಥಾಪಿತಗೊಂಡಿದ್ದು ಆದರೆ ನೀವು ಅದನ್ನು ನಿಮ್ಮ ಡೆಸ್ಕ್-ಟಾಪಿನಲ್ಲಿ ಚಲಾಯಿಸಲು ಇಚ್ಚಿಸದಿದ್ದರೆ, ಅದನ್ನುim-chooserಉಪಯೋಗಿಸಿ ಅಶಕ್ತಗೊಳಿಸಬಹುದು.

xinputrc

X ಸ್ಟಾರ್ಟಪ್ ನಲ್ಲಿ, xinput.sh now sources ~/.xinputrc ಅಥವ /etc/X11/xinit/xinputrc config ಕಡತಗಳನ್ನು ಹುಡುಕುವ ಬದಲು~/.xinput.d/ ಅಥವ /etc/xinit/xinput.d/.

Firefox ನಲ್ಲಿ Pangoಗೆ ಬೆಂಬಲ

Red Hat ಎಂಟರ್ಪ್ರೈಸ್ ಲಿನಕ್ಸ್ 5ನಲ್ಲಿ Pango ಜೊತೆಗೆ Firefox ನಿರ್ಮಿತವಾಗಿದೆ, ಇದು ಇಂಡಿಕ್ ಮತ್ತು ಸಿಜಿಕೆ ಸ್ಕ್ರಿಪ್ಟುಗಳಂತಹ ಕೆಲವು ಸ್ಕ್ರಿಪ್ಟುಗಳಿಗೆ ಉತ್ತಮ ಬೆಂಬಲವನ್ನು ನೀಡುತ್ತದೆ.

Pango ಉಪಯೋಗವನ್ನು ಅಶಕ್ತಗೊಳಿಸಲು, Firefox ಲಾಂಚ್ ಮಾಡುವ ಮೊದಲು ನಿಮ್ಮ ಪರಿಸರದಲ್ಲಿ MOZ_DISABLE_PANGO=1 ಅನ್ನು ಹೊಂದಿಸಿ.

ಫಾಂಟುಗಳು

ಬೋಲ್ಡ್ ಮುದ್ರೆಯನ್ನು ಹೊಂದಿರದ ಅಕ್ಷರಶೈಲಿಯನ್ನು ಕೃತ್ರಿಮವಾಗಿ ಬೋಲ್ಡುಗೊಳಿಸುವ ಕ್ರಮಕ್ಕೆ ಈಗ ಬೆಂಬಲ ಲಭ್ಯವಿದೆ.

ಚೈನೀಸಿಗೆ ಹೊಸ ಅಕ್ಷರ ಶೈಲಿಯನ್ನು ಸೇರಿಸಲಾಗಿದೆ: AR PL ShanHeiSun Uni (uming.ttf) ಮತ್ತು AR PL ZenKai Uni (ukai.ttf). ಡಿಫಾಲ್ಟ್ ಅಕ್ಷರ ಶೈಲಿಯು AR PL ShanHeiSun Uni ಆಗಿದೆ, ಇದು ಎಂಬೆಡೆಡ್ ಬಿಟ್-ಮ್ಯಾಪುಗಳನ್ನು ಒಳಗೊಂಡಿದೆ. ನಿಮಗೆ ಔಟ್-ಲೈನ್ ಗ್ಲಿಫ್ ಬೇಕಿದ್ದರೆ, ಕೆಳಗಿನ ಅಂಶವನ್ನು ನಿಮ್ಮ ~/.font.conf ಕಡತಕ್ಕೆ ಸೇರಿಸಿಕೊಳ್ಳಿ:

<fontconfig>
  <match target="font">
    <test name="family" compare="eq">
      <string>AR PL ShanHeiSun Uni</string>
    </test>
    <edit name="embeddedbitmap" mode="assign">
      <bool>false</bool>
    </edit>
  </match>
</fontconfig>                                
                        
gtk2 IM submenu

Gtk2 context menu IM submenu ಇನ್ನು ಡೀಫಾಲ್ಟ್ ಆಗಿ ಕಾಣಿಸಿಕೊಳ್ಳುವುದಿಲ್ಲ. ನೀವು ಕಮಾಂಡ್ ಸಾಲಿನಲ್ಲಿ ಈ ಕೆಳಗಿನ ಆಜ್ಞೆ ಉಪಯೋಗಿಸಿ ಅದನ್ನು ಶಕ್ತಗೊಳಿಸಬಹುದು:

gconftool-2 --type bool --set '/desktop/gnome/interface/show_input_method_menu' true

CJK ಮೇಲೆ ಪಠ್ಯ ಅನುಸ್ಥಾಪನೆಯ ಬೆಂಬಲ

ಅನಕೊಂಡ ಪಠ್ಯ ಅನುಸ್ಥಾಪನೆಯಿಂದ ಸಿಜಿಕೆ (ಚೈನೀಸ್, ಜಪಾನೀಸ್, ಮತ್ತು ಕೊರಿಯನ್) ರೆಂಡರಿಂಗ್ ಬೆಂಬಲವನ್ನು ತೆಗೆಯಲಾಗಿದೆ. GUI ಅನುಸ್ಥಾಪನೆ, VNC ಮತ್ತು ಕಿಕ್-ಸ್ಟಾರ್ಟ್ ಕ್ರಮಗಳನ್ನು ಆರಿಸುವುದರಿಂದ, ಪಠ್ಯ ಅನುಸ್ಥಾಪನ ಕ್ರಮವು ಬಹಳ ಸಮಯದ ನಂತರ ಅಸಮ್ಮತಿ ತೋರುತ್ತದೆ.

gtk+ deprecation

ಈ ಕೆಳಗಿನ ಪ್ಯಾಕೇಜುಗಳು ಅಸಮ್ಮತಿ ತೋರಿವೆ ಮತ್ತು ಅವನ್ನು Red Hat ಎಂಟರ್ಪ್ರೈಸ್ ಲಿನಕ್ಸ್ ನಲ್ಲಿ ತೆಗೆಯಲು ನಿರ್ಧರಿಸಲಾಗಿದೆ:

  • gtk+

  • gdk-pixbuf

  • glib

ಈ ಪ್ಯಾಕೇಜುಗಳು, ನಿರ್ದಿಷ್ಟವಾಗಿ ಅಂತರಾಷ್ಟ್ರೀಕರಣ ಮತ್ತು ಅಕ್ಷರ ಶೈಲಿಯನ್ನು ನಿಭಾಯಿಸುವಲ್ಲಿ ಉತ್ತಮ ಕಾರ್ಯದಕ್ಷತೆಯನ್ನು ತೋರುವ gtk2 ಸ್ಟ್ಯಾಕಿನ ಕಾರಣವಾಗಿ ಅಸಮ್ಮತಗೊಳ್ಳಲಿವೆ.

ಕನ್ಸೋಲಿನಲ್ಲಿ CJK ಇನ್-ಪುಟ್

ನಿಮ್ಮ ಕನ್ಸೋಲಿನಲ್ಲಿ ಚೈನಿಸ್, ಜಪಾನೀಸ್ ಅಥವ ಕೊರಿಯನ್ ಪಠ್ಯವು ಕಾಣಿಸಬೇಕೆಂದರೆ, ನೀವು ಒಂದು ಫ್ರೇಮ್-ಬಫರನ್ನು ಹೊಂದಿಸ ಬೇಕಾಗುತ್ತದೆ; ನಂತರ bogl-bterm ವನ್ನು ಅನುಸ್ಥಾಪಿಸಿ, ಮತ್ತು ಫ್ರೇಮ್-ಬಫರಿನಲ್ಲಿ bterm ಅನ್ನು ಚಲಾಯಿಸಿ.

ಕರ್ನಲ್ ಟಿಪ್ಪಣಿಗಳು

ಈ ವಿಭಾಗವು ೨.೬.೯ ( ಯಾವುದರ ಮೇಲೆ Red Hat ಎಂಟರ್ಪ್ರೈಸ್ ಲಿನಕ್ಸ್ 4 ಆಧರಿತವಾಗಿದೆಯೂ) ಹಾಗೂ ಜುಲೈ ೧೨ ೨೦೦೬ರ ೨.೬.೧೮ಗಳ ( ಯಾವುದು Red Hat ಎಂಟರ್ಪ್ರೈಸ್ ಲಿನಕ್ಸ್ 5ನಲ್ಲಿ ಮುಂದುವರೆಯುತ್ತದೊ) ನಡುವಿನ ವ್ಯತ್ಯಾಸವನ್ನು ಗುರುತಿಸುತ್ತದೆ. ನಾವು ಪ್ರಸ್ತುತ ಅಪ್-ಸ್ಟ್ರೀಮಿನಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಸ್ವರೂಪಗಳು (ಉದಾ., ವಾಸ್ತವೀಕರಣ), ಅಂದರೆ ಯಾವುವು ತಡವಾಗಿ ೨.೬.೧೮ ಅಥವ ೨.೬.೧೯ನಲ್ಲಿ ಬಳಕೆಗೆ ಬರುವವೋ ಅಂತಹುಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿಲ್ಲ. ಒಟ್ಟಿನಲ್ಲಿ ಈ ಪಟ್ಟಿಯಲ್ಲಿ ಈಗಾಗಲೇ ಅಪ್-ಸ್ಟ್ರೀಮಿನ Linus ವೃಕ್ಷದಲ್ಲಿ ಸೇರ್ಪಡೆಯಾದ ಆದರೆ ಪ್ರಸ್ತುತ ಯಾವುದೇ ಅಭಿವೃದ್ಧಿಯ ಅಡಿಯಲ್ಲಿಲ್ಲವೊ ಅಂತಹುಗಳನ್ನು ತೋರಿಸಲಾಗಿದೆ. ಅಪೇಕ್ಷಿಸಿದಂತೆ ಇದು ಒಂದು ಉತ್ತಮ ಅವಲೋಕನವನ್ನು ನೀಡಿದ್ದರು ಸಹ, ಇದು ಹೊಸ Red Hat ಎಂಟರ್ಪ್ರೈಸ್ ಲಿನಕ್ಸ್ 5ನ ಘಟಕಗಳ ಅಂತಿಮ ಅಥವ ಪರಿಪೂರ್ಣ ಪಟ್ಟಿಯಲ್ಲ. ಹಾಗೇಯೇ, ಈ ವಿಭಾಗವು ಅಪ್-ಸ್ಟ್ರೀಮಿನಲ್ಲಾಗುವ ಬದಲಾವಣೆಗಳ ಮುಂಖ್ಯಾಂಶಗಳನ್ನು ಮಾತ್ರ ಹೆಕ್ಕಿಕೊಳ್ಳುತ್ತದೆ ಎಂಬುದನ್ನು ಗಮನಿಸಿ, ಹಾಗಾಗಿ ಇದು ಸಂಪೂರ್ಣವಾಗಿ ವ್ಯಾಪಕವಲ್ಲ. ಇದು ಹಲವಾರು ಕೆಳಮಟ್ಟದ ಯಂತ್ರಾಂಶ ಬೆಂಬಲ ವರ್ಧಿತ ಹಾಗೂ ಸಾಧನ ಚಾಲಕ ಮಾಹಿತಿಗಳನ್ನು ಹೊಂದಿಲ್ಲ.

ಮುಂದಿನ ಮಟ್ಟದ ವಿಸ್ತೃತ ನೋಟಕ್ಕೆ ಒಂದು ಉತ್ತಮ ಆಕರವನ್ನು ಕೆಳಗೆ ಕೊಡಲಾಗಿದೆ:

http://kernelnewbies.org/LinuxChanges

ಕಾರ್ಯಕ್ಷಮತೆ / ಸ್ಕೇಲೆಬಿಲಿಟಿ
  • Big Kernel Lock preemption (2.6.10)

  • Voluntary preemption patches (2.6.13) (Red Hat ಎಂಟರ್ಪ್ರೈಸ್ ಲಿನಕ್ಸ್ 4 ನಲ್ಲಿನ ಉಪಭಾಗ)

  • futexeಗಳಿಗೆ ಪರಂಪರಾಗತ ಹಗುರತೂಕದ ಉಪಯೋಗಿ ಸ್ಥಳ ಪ್ರಾಶಸ್ತ್ಯದ (PI) ಬೆಂಬಲ, ರಿಯಲ್ ಟೈಮ್ ಅನ್ವಯಗಳಿಗೆ ಉಪಕಾರಿಯಾಗುತ್ತದೆ (೨.೬.೧೮)

  • ಹೊಸ 'mutex' locking primitive (2.6.16)

  • High resolution timers (2.6.16)

    • kernel/timer.cನಲ್ಲಿ ಜಾರಿಗೊಳಿಸಲಾದ ಕಡಿಮೆ ರೆಸಲ್ಯೂಶನ್ ಟೈಮ್-ಔಟ್ ಗೆ ಬದಲಾಗಿ, hrtimerಗಳು ಗಣಕದ ಸಂರಚನೆ ಹಾಗು ಸಾಮರ್ಥ್ಯಕ್ಕನುಗುಣವಾಗಿ ಉತ್ತಮ ರೆಸಲ್ಯೂಶನ್ ಹಾಗು ನಿಖರತೆ ನೀಡುತ್ತದೆ. ಈ ಟೈಮರುಗಳು ಪ್ರಸ್ತುತ itimers, POSIX timers, nanosleep and precise in-kernel timingಗಳಲ್ಲಿ ಉಪಯೋಗಿಸಲಾಗುತ್ತಿದೆ.

  • Modular, on-the-fly switchable I/O schedulers (2.6.10)

    • ಇದನ್ನು Red Hat ಎಂಟರ್ಪ್ರೈಸ್ ಲಿನಕ್ಸ್ 4 ನಲ್ಲಿನ ಬೂಟ್ ಆಯ್ಕೆಯಲ್ಲಿ ಮಾತ್ರ ಸರಿಹೊಂದಿಸಬಹುದು (ಹಾಗೂ ಸರತಿಯ ಬದಲು ಗಣಕದಾದ್ಯಂತ).

  • ಹೊಸ ಪೈಪ್ ಜಾರಿಗೊಳಿಸುವುದು (೨.೬.೧೧)

    • ಪೈಪ್ ಬ್ಯಾಂಡ್-ವಿಡ್ತಿನಲ್ಲಿ ೩೦-೯೦%ದಷ್ಟು ಕಾರ್ಯನಿರ್ವಹಣೆಯಲ್ಲಿ ಏಳಿಗೆ

    • ವೃತ್ತಾಕಾರ ಬಫರ್ ಬರೆಯುವವನ್ನು ತಡೆಯುವ ಬದಲು ಹೆಚ್ಚು ಬಫರಿಂಗಿಗೆ ಅನುಮತಿಯನ್ನು ನೀಡುತ್ತದೆ

  • "Big Kernel Semaphore": Big Kernel Lockನ್ನು ಒಂದು semaphore ಆಗಿ ಬದಲಾಯಿಸುತ್ತದೆ

    • ಲಾಂಗ್ ಲಾಕ್ ಹೋಲ್ಡ್ ಹಾಗೂ ವಾಲೆಂಟರಿ ಪ್ರೀಇಂಪ್ಶನ್ ಅನ್ನು ಬೇರ್ಪಡಿಸುವ ಮೂಲಕ ಗುಪ್ತತೆಯನ್ನು ಕಡಿಮೆ ಮಾಡುತ್ತದೆ

  • X86 "SMP ಪರ್ಯಾಯಗಳು"

    • ಲಭ್ಯವಿರುವ ಪ್ಲಾಟ್-ಫಾರ್ಮಿಗೆ ಅನುಗುಣವಾಗಿ ಒಂದು ಕರ್ನಲ್ ಚಿತ್ರಿಕೆಯನ್ನು ರನ್-ಟೈಮಿನಲ್ಲಿ ಉತ್ತಮಗೊಳಿಸಿ

    • ref: http://lwn.net/Articles/164121/

  • libhugetlbfs

    • ಸೋರ್ಸ್ ಕೋಡ್ ಅನ್ನು ಮಾರ್ಪಡಿಸದೇ ಅನ್ವಯಗಳು huge page ಬೆಂಬಲವನ್ನು Linuxನಲ್ಲಿ ಉಪಯೋಗಿಸಲು ಅನುಮತಿಸುತ್ತದೆ

  • ಕರ್ನಲ್ ಹೆಡರ್ ಪ್ಯಾಕೇಜುಗಳು

    • glibc-kernheaders ಪ್ಯಾಕೇಜುಗಳನ್ನು ಬದಲಾಯಿಸುತ್ತದೆ

    • ೨.೬.೧೮ ಕರ್ನಲ್ಲಿನ ಹೊಸ headers_install ಲಕ್ಷಣವು ಉತ್ತಮ ಅರ್ಹತೆಯನ್ನು ನೀಡುತ್ತದೆ

    • ಗಮನಿಸಬೇಕಾದ ಕರ್ನಲ್ ಹೆಡರ್ ಸಂಬಂಧಿತ ಬದಲಾವಣೆಗಳು:

      • ಉಪಯೋಗವಿರದ ಕಾರಣ, <linux/compiler.h> ಹೆಡರ್ ಕಡತವನ್ನು ತೆಗೆಯಲಾಗಿದೆ

      • _syscallX() ಮ್ಯಾಕ್ರೋಸುಗಳನ್ನು ತೆಗೆಯಲಾಗಿದೆ; ಬದಲಿಗೆ ಯೂಸರ್-ಸ್ಪೇಸ್ C ಲೈಬ್ರರಿಯಿಂದ syscall()ಅನ್ನು ಉಪಯೋಗಿಸಬೇಕು

      • <asm/atomic.h> ಮತ್ತು <asm/bitops.h> ಹೆಡರ್ ಕಡತಗಳನ್ನು ತೆಗೆಯಲಾಗಿದೆ; C ಕಂಪೈಲರ್ ಬಳಕೆದಾರ-ಸ್ಪೇಸ್ ಪ್ರೋಗ್ರಾಂ ಸರಿಹೊಂದುವಂತ ಅದರ ಸ್ವಂತದ ಅಟಾಮಿಕ್-ಒಳ ನಿರ್ಮಿತ ಕಾರ್ಯಕಾರಿಗಳನ್ನು ನೀಡುತ್ತದೆ

      • ಈ ಮೊದಲು #ifdef __KERNEL__ ನೊಂದಿಗೆ ಸಂರಕ್ಷಿಸಲ್ಪಟ್ಟ ವಿಷಯಗಳು ಈಗ unifdef ಉಪಕರಣದ ಸಹಾಯದಿಂದ ಸಂಪೂರ್ಣವಾಗಿ ತೆಗೆಯಲಾಗಿದೆ; ಬಳಕೆದಾರ-ಸ್ಪೇಸಿಗೆ ಕಾಣಬಾರದ ಭಾಗಗಳನ್ನು ನೋಡುವು ಸಲುವಾಗಿ __KERNEL__ ಅನ್ನು ವಿವರಿಸುವುದು ಇನ್ನು ಮುಂದೆ ಪರಿಣಾಮಕಾರಿಯಾಗಿರುವುದಿಲ್ಲ

      • ಕೆಲವೊಂದು ಆರ್ಕಿಟೆಕ್ಚರುಗಳಿಂದ PAGE_SIZE ಮ್ಯಾಕ್ರೋವನ್ನು ತೆಗೆಯಲಾಗಿದೆ, ಪುಟಗಳ ಗಾತ್ರದಲ್ಲಿ ಆದ ಬದಲಾವಣೆಗಳ ಕಾರಣ; ಬಳಕೆದಾರ-ಸ್ಪೇಸ್ sysconf (_SC_PAGE_SIZE) ಅಥವ getpagesize() ಅನ್ನು ಉಪಯೋಗಿಸಬೇಕು

    • ಬಳಕೆದಾರ-ಸ್ಪೇಸಿಗೆ ಉತ್ತಮ ಸೌಕರ್ಯ ನೀಡಲು, ಬಹಳಷ್ಟು ಹೆಡರ್ ಕಡತಗಳನ್ನು ಮತ್ತು ಹೆಡರ್ ಕಂಟೆಂಟುಗಳನ್ನು ತೆಗೆಯಲಾಗಿದೆ

ಜೆನೆರಿಕ್ ಲಕ್ಷಣದ ಸೇರ್ಪಡಿಕೆಗಳು

  • kexec ಮತ್ತು kdump (2.6.13)

    • diskdump ಮತ್ತು netdump ಗಳು kexec ಮತ್ತು kdumpಗಳಿಂದ ಬದಲಾಯಿಸಲ್ಪಟ್ಟಿದೆ, ಇದು ಡೈಯಾಗ್ನೊಸ್ಟಿಕ್ ಗೆ ಅಗತ್ಯವಾಗುವ ವೇಗದ ಬೂಟ್-ಅಪ್ ಮತ್ತು ನಂಬಿಕಸ್ತ ಕರ್ನಲ್ಲು vmcoreಗಳ ರಚನೆಯನ್ನು ಖಾತ್ರಿಗೊಳಿಸುತ್ತವೆ. ಸಂರಚನಾ ಸೂಚನೆಗಳು ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ, ದಯವಿಟ್ಟು /usr/share/doc/kexec-tools-<version>/kexec-kdump-howto.txt ಅನ್ನು ಸಂಪರ್ಕಿಸಿ (<version>ಅನ್ನು ಅನುಸ್ಥಾಪಿತಗೊಂಡ kexec-tools ನ ಸೂಕ್ತವಾದ ಆವೃತ್ತಿಯ ಪ್ಯಾಕೇಜುಗಳಿಂದ ಬದಲಾಯಿಸಿ).

    • ಸದ್ಯದ ಪರಿಸ್ಥಿತಿಯಲ್ಲಿ, ವಾಸ್ತವೀಕರಣಗೊಂಡ ಕರ್ನಲ್ಲುಗಳು kdump ಕಾರ್ಯಗಳನ್ನು ಉಪಯೋಗಿಸಲಾಗುವುದಿಲ್ಲ ಎನ್ನುವುದನ್ನು ಗಮನಿಸಿ.

  • inotify (2.6.13)

    • ಇದಕ್ಕೆ ಬಳಕೆದಾರ ಅಂತರ್ಮುಖಿಯು ಈ ಕೆಳಗಿನ syscallಗಳ ಮೂಲಕ: sys_inotify_init, sys_inotify_add_watch, and sys_inotify_rm_watch.

  • Process Events Connector (2.6.15)

    • fork, exec ವರದಿ ಮಾಡುತ್ತದೆ, ಐಡಿ ಬದಲಾವಣೆ, ಮತ್ತು ಎಲ್ಲಾ ಪ್ರಕ್ರಿಯೆಗಳಲ್ಲಿ ಘಟನೆಗಳನ್ನು ಯೂಸರ್-ಸ್ಪೇಸಿಗೆ ಹೊರಹಾಕುತ್ತದೆ.

    • ಈ ಘಟನೆಯನ್ನು ಉಪಯೋಗಿಸುವ ಅನ್ವಯಗಳೆಂದರೆ, ಅಕೌಂಟಿಂಗ್ / ಆಡಿಟಿಂಗ್ (ಉದಾಹರಣೆಗೆ, ELSA), ಸಿಸ್ಟಂ ಆಕ್ಟಿವಿಟ್ ಮಾನಿಟರಿಂಗ್ (ಉದಾಹರಣೆಗೆ, top,ಸೆಕ್ಯುರಿಟಿ, ಮತ್ತು ಸಂಪನ್ಮೂಲ ವ್ಯವಸ್ಥಾಪನೆ (ಉದಾಹರಣೆಗೆ, CKRM). ಪರ್-ಯುಸರ್-ನೇಮ್ ಸ್ಪೇಸ್, "ಫೈಲ್ಸ್ ಆಸ್ ಡೈರೆಕ್ಟರೀಸ್" ಮತ್ತು ವರ್ಶನ್ಡ್ ಫೈಲ್ ಸಿಸ್ಟಂಸಿನಂತಹ ಸ್ವರೂಪಗಳ ನಿರ್ಮಾಣದಲ್ಲಿ ಸೆಮಂಟಿಂಕ್ಸ್ ಅಡಿಗಲ್ಲನ್ನು ನೀಡುತ್ತದೆ, .

  • ಜೆನೆರಿಕ್ RTC (RealTime Clock) ಉಪವ್ಯವಸ್ಥೆ (೨.೬.೧೭)

  • splice (2.6.17)

    • ಹೊಸ ಐಓ ಯಾಂತ್ರಿಕತೆಯು ಅನ್ವಯಗಳ ನಡುವೆ ದತ್ತಾಂಶಗಳನ್ನು ಸ್ಥಳಾಂತರಿಸುವಾಗ ದತ್ತಾಂಶಗಳು ನಕಲಾಗುವುದನ್ನು ತಪ್ಪಿಸುತ್ತವೆ

    • ref: http://lwn.net/Articles/178199/

ಕಡತ ವ್ಯವಸ್ಥೆ / LVM

  • EXT3

    • ext3 ಯಲ್ಲಿನ ದೊಡ್ಡ ಐನೋಡ್ ನ ಬಾಡಿಯಲ್ಲಿನ ಎಕ್ಸ್ಟೆಂಡೆಡ್ ಅಟ್ರಿಬ್ಯೂಟ್ಸ್ ಗಳಿಗೆ ಬೆಂಬಲ: ಕೆಲವೊಂದು ಸಂದರ್ಭಗಳಲ್ಲಿ ಜಾಗವನ್ನು ಉಳಿಸಿ ಹಾಗು ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ (೨.೬.೧೧)

  • ಸಾಧನ ಮ್ಯಾಪರ್ ಬಹುಪಥ ಸಮರ್ಥನೆ

  • NFSv3 ಮತ್ತು NFSv4ಗೆ ACL ಬೆಂಬಲ (೨.೬.೧೩)

  • NFS: ವೈರಿನ ಮೇಲೆ ದೊಡ್ಡ ಬರೆಯುವಿಕೆ ಮತ್ತು ಓದುವುದನ್ನು ಬೆಂಬಲಿಸುತ್ತದೆ (೨.೬.೧೬)

    • ಲಿನಕ್ಸ್ NFS ಕ್ಲೈಂಟ್ ಈಗ ೧ಎಂಬಿಯಷ್ಟು ಗಾತ್ರದ ಕಡತಗಳ ರವಾನೆಗೆ ಬೆಂಬಲವನ್ನು ನೀಡುತ್ತದೆ.

  • VFS ಬದಲಾವಣೆಗಳು

  • ದೊಡ್ಡ CIFS ಅಪ್ಡೇಟುಗಳು (2.6.15)

    • ಕಾರ್ಯನಿರ್ವಹಣೆಯಲ್ಲಿನ ಹಲವಾರು ಸುಧಾರಣೆಗಳು ಹಾಗು ಕರ್ಬರೋಸ್ ಮತ್ತು CIFS ACL ಗಳಿಗೆ ಬೆಂಬಲವನ್ನು ಹೊಂದಿದೆ

  • autofs4: ಯೂಸರ್-ಸ್ಪೇಸ್ autofsಗಳಿಗಾಗಿ ನೇರವಾಗಿ ಆರೋಹಿಸುವ ಬೆಂಬಲವನ್ನು ನೀಡುವಂತೆ ಅಪ್ಡೇಟನ್ನು ಮಾಡಲಾಗಿದೆ (೨.೬.೧೮)

  • cachefs ಕೋರ್ ಎನೇಬ್ಲರುಗಳು (೨.೬.೧೮)

ಭದ್ರತೆ

  • SEಲಿನಕ್ಸಿಗೆ ಬಹುಮಟ್ಟದ ಸುರಕ್ಷತೆಯ ನಿರ್ವಹಣೆ (೨.೬.೧೨)

  • ಉಪವ್ಯವಸ್ಥಾ ಆಡಿಟ್

    • ಪ್ರೋಸೆಸ್-ಕಾಂಟೆಕ್ಸ್ಟ್ ಆಧರಿತ ಫಿಲ್ಟರಿಂಗ್ ಗೆ ಬೆಂಬಲ (೨.೬.೧೭)

    • ಇನ್ನಷ್ಟು ಫಿಲ್ಟರ್ ನಿಯಮ ಕಂಪರೇಟರುಗಳು (೨.೬.೧೭)

  • TCP/UDP getpeercon: ಯು IPSec ಸುರಕ್ಷತ ಅಸೊಸಿಯೇಶನ್ ಅನ್ನು ಉಪಯೋಗಿಸಿಕೊಂಡು ಒಂದು ಸಾಕೆಟಿನ ಇನ್ನೊಂದು ಬದಿಯ ಒಂದು ಪ್ರಕ್ರಿಯೆಯ ಸಂಪೂರ್ಣ ಸುರಕ್ಷತ ಸನ್ನಿವೇಶವನ್ನು ಪುನಃಪಡೆಯುವ ಶಕ್ತಗೊಂಡ ಸುರಕ್ಷತ-ಜಾಗೃತ ಅನ್ವಯಿಕಗಳು. ಕೇವಲ MLS-ಮಟ್ಟದ ಮಾಹಿತಿಯ ಆವಶ್ಯಕವಿದ್ದರೆ ಅಥವ ಸಾಂಪ್ರದಾಯಿಕ ಯುನಿಕ್ಸ್ ಗಣಕದೊಂದಿಗೆ ಇಂಟರೊಪರೆಬಿಲಿಟಿಯ ಅಗತ್ಯವಿದ್ದರೆ, IPsec ಬದಲಿಗೆ NetLabel ಅನ್ನ್ನು ಉಪಯೋಗಿಸಬಹುದು.

ಜಾಲಬಂಧ

  • ಹಲವಾರು TCP ಕಂಜೆಶನ್ ಮಾಡ್ಯೂಲುಗಳನ್ನು ಸೇರಿಸಲಾಗಿದೆ (೨.೫.೧೩)

  • IPv6: ಅಧುನಿಕ APIನಲ್ಲಿನ ಹಲವಾರು ಹೊಸ sockopt / ancillary ದತ್ತಗಳಿಗೆ ಬೆಂಬಲ ನೀಡುತ್ತದೆ(೨.೬.೧೪)

  • IPv4/IPv6: UFO (UDP Fragmentation Offload) ಸ್ಕಾಟರ್-ಗ್ಯಾದರ್ ಅಪ್ರೋಚ್ (೨.೬.೧೫)

    • ಯುಎಪ್ಓ ಲಿನಕ್ಸ್ ಕರ್ನಲ್ ಜಾಲಬಂಧವು ಸ್ಟ್ಯಾಕ್ ಬೃಹತ್ ಯುಡಿಪಿ ಡಾಟಾಗ್ರಾಂನ ಐಪಿ ಛಿದ್ರಿಕೆಯನ್ನು ಯಂತ್ರಾಂಶಕ್ಕೆ ಭಾರವಿಳಿಸುವ ಒಂದು ಸ್ವರೂಪ. ಇದು ಬೃಹತ್ ಯುಡಿಪಿ ಡಾಟಾಗ್ರಾಮನ್ನು ಎಂಟಿಯು ಗಾತ್ರದ ಪೊಟ್ಟಣಗಳಾಗಿ ಛಿದ್ರಗೊಂಡಾಗಿನ ಸ್ಟ್ಯಾಕಿನ ಓವರ್-ಹೆಡ್ ಅನ್ನು ಕಡಿಮೆ ಮಾಡುತ್ತದೆ.

  • nf_conntrack ಉಪವ್ಯವಸ್ಥೆಯನ್ನು ಸೇರಿಸಲಾಗಿದೆ(2.6.15)

    • ನೆಟ್-ಫಿಲ್ಟರಿನಲ್ಲಿ ಅಸ್ತಿತ್ವದಲ್ಲಿರುವ ಕನೆಕ್ಷನ್ ಟ್ರಾಕಿಂಗ್ ಉಪವ್ಯವಸ್ಥೆಯು ಕೇವಲ ipv4ಅನ್ನು ಮಾತ್ರ ನಿಭಾಯಿಸಬಲ್ಲವು. ಕನೆಕ್ಷನ್ ಟ್ರಾಕಿಂಗ್ ಸಮರ್ಥನೆಯನ್ನು ipv6ಗೆ ಸೇರಿಸಲು ಎರಡು ಆಯ್ಕೆಗಳಿದ್ದವು, ಎಲ್ಲಾ ipv4 ಕನೆಕ್ಷನ್ ಟ್ರಾಕಿಂಗ್ ಕೋಡನ್ನು ipv6 ಕೌಂಟರ್-ಪಾರ್ಟಿಗೆ ನಕಲಿಸುವುದು ಅಥವ (ಈ ತೇಪೆಗಳಿಂದ ಆಯ್ಕೆಯನ್ನು ಪಡೆಯಲಾಗಿದೆ) ipv4 ಹಾಗು ipv6 ಎರಡನ್ನು ನಿಭಾಯಿಸಬಲ್ಲ ಒಂದು ಜೆನೆರಿಕ್ ಲೇಯರನ್ನು ರಚಿಸುವುದು ಮತ್ತು ಇದಕ್ಕೆ ಕೇವಲ ಒಂದು ಉಪ-ಪ್ರೋಟೋಕಾಲ್ (TCP, UDP, ಇತ್ಯಾದಿ) ಕನೆಕ್ಷನ್ ಟ್ರಾಕಿಂಗ್ ಹೆಲ್ಪರ್ ಮಾಡ್ಯೂಲನ್ನು ಬರೆದರೆ ಸಾಕಾಗುತ್ತದೆ. ನಿಜ ಹೇಳಬೇಕೆಂದರೆ,nf_conntrack ಯಾವುದೇ ೩ ಪ್ರೋಟೋಕಾಲುಗಳೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

  • IPV6

    • RFC 3484-ಕಂಪ್ಲೈಂಟ್ ಸೋರ್ಸ್ ಅಡ್ರೆಸ್ ಸೆಲೆಕ್ಷನ್ (೨.೬.೧೫)

    • ಮಾರ್ಗಕ ಇಚ್ಚೆಗೆ ಬೆಂಬಲವನ್ನು ಸೇರಿಸಲಾಗಿದೆ (RFC4191) (೨.೬.೧೭)

    • ಮಾರ್ಗಕ ಸಂಪರ್ಕ ಸಾಧ್ಯ ತನಿಖೆಯನ್ನು ಸೇರಿಸಲಾಗಿದೆ (RFC4191) (೨.೬.೧೭)

    • ಬಹು ಮಾರ್ಗೀಯತೆ ಟೇಬಲ್ಸ್ ಮತ್ತು ಪಾಲಿಸಿ ಮಾರ್ಗೀಯತೆಗೆ ಬೆಂಬಲ ಸೇರಿಸಲಾಗಿದೆ

  • ವೈರ್-ಲೆಸ್ ಅಪ್ಡೇಟುಗಳು

    • ಯಂತ್ರಾಂಶ ಕ್ರಿಪ್ಟೋ ಮತ್ತು ಫ್ರಾಗ್ಮೆಂಟೇಶನ್ ಆಫ್-ಲೋಡ್ ಬೆಂಬಲ

    • QoS (WME) ಬೆಂಬಲ, "ವೈರ್-ಲೆಸ್ ಪತ್ತೇದಾರಿ ಬೆಂಬಲ"

    • ಮಿಶ್ರ PTK/GTK

    • CCMP/TKIP ಬೆಂಬಲ ಮತ್ತು WE-19 HostAP ಬೆಂಬಲ

    • BCM43xx ವೈರ್-ಲೆಸ್ ಚಾಲಕ

    • ZD1211 ವೈರ್-ಲೆಸ್ ಚಾಲಕ

    • WE-20, ವೈರ್-ಲೆಸ್ ಎಕ್ಸಟೆನ್ಶನ್ನಿನ ಆವೃತ್ತಿ ೨೦ ೨.೬.೧೭)W

    • ಯಂತ್ರಾಂಶ-ಸ್ವತಂತ್ರ ತಂತ್ರಾಂಶ MAC ಲೇಯರನ್ನು ಸೇರಿಸಲಾಗಿದೆ, "Soft MAC" (೨.೬.೧೭)

    • LEAP ದೃಢೀಕರಣ ಕ್ರಮವನ್ನು ಸೇರಿಸಲಾಗಿದೆ

  • ಜೆನೆರಿಕ್ ಸೆಗ್ಮೆಂಟೇಶನ್ ಆಫ್-ಲೋಡ್ (GSO) (೨.೬.೧೮)

    • ಕೆಲವೊಂದು ಸನ್ನಿವೇಶಗಳಲ್ಲಿ ಇದು ಉತ್ತಮಗೊಳ್ಳಬಹುದು, ಆದರೂ ಇದನ್ನು ethtoolದ ಮೂಲಕ ಶಕ್ತಗೊಳಿಸುವುದು ಆವಶ್ಯಕ

  • DCCPv6 (2.6.16)

ಸೇರ್ಪಡೆಯಾದ ಯಂತ್ರಾಂಶ ಬೆಂಬಲ

ಸೂಚನೆ

ಈ ವಿಭಾಗವು ಬಹಳಷ್ಟು ಜನೆರಿಕ್ ಲಕ್ಷಣಗಳಲ್ಲಿ ಕೇವಲ ಎಣಿಕೆ ಮಾಡುವಷ್ಟು ಮಾತ್ರ ಹೊಂದಿದೆ.

  • x86-64 ಗೊಂಚಲಾದ APIC ಬೆಂಬಲ (2.6.10)

  • Infiniband ಬೆಂಬಲ (2.6.11)

  • ಹಾಟ್ ಪ್ಲಗ್

    • ಮೆಮೊರಿ ಹಾಟ್-ಪ್ಲಗ್ಗಿಗಾಗಿ ಜೆನೆರಿಕ್ ಮೆಮೊರಿ ಸೇರಿಸು/ತೆಗೆ ಮತ್ತು ಬೆಂಬಲಿತ ಕಾರ್ಯಕಾರಿಗಳನ್ನು ಸೇರಿಸಲಾಗಿದೆ(೨.೬.೧೫)

    • ಹೊಸ ಸಂಸ್ಕಾರಕಗಳನ್ನು ಭೌತಿಕವಾಗಿ ಸೇರಿಸುವುದನ್ನು ಹಾಟ್ ಪ್ಲಗ್ CPU ಬೆಂಬಲಿಸುತ್ತದೆ (ಹಾಟ್ ಪ್ಲಗ್ ಅಶಕ್ತ / ಶಕ್ತಗೊಳಿಸುವುದು ಈಗಾಗಲೆ ಅಸ್ತಿತ್ವದಲ್ಲಿರುವ CPUಗಳಿಗೆ ಈಗಾಗಲೆ ಬೆಂಬಲಿತವಾಗಿದೆ)

  • SATA/libata ವರ್ಧಕಗಳು, ಹೆಚ್ಚಿನ ಯಂತ್ರಾಂಶ ಬೆಂಬಲ

    • ಒಂದು ಸಂಪೂರ್ಣವಾಗಿ ಪುನರ್ ನಿರ್ಮಾಣಗೊಂಡ ಎರರ್ ಹ್ಯಾಂಡ್ಲರ್, ಈ ನಿರ್ಮಾಣದಿಂದ ವಿಸ್ತಾರ ವ್ಯಾಪ್ತಿಯ ದೋಷಗಳಿಂದ ಸುಧಾರಿಸಿಕೊಳ್ಳಲು ಒಂದು ಅಧಿಕ ಬಲಿಷ್ಟ SATA ಉಪವ್ಯವಸ್ಥೆಯು ಅಸ್ತಿತ್ವಕ್ಕೆ ಬರಬೇಕು.

    • Native Command Queuing (NCQ), SATA ಆವೃತ್ತಿಯ ಟ್ಯಾಗ್ಡ್ ಕಮಾಂಡ್ ಕ್ಯೂಯಿಂಗ್ - ಒಂದೇ ಡ್ರೈವ್ ಔಟ್-ಸ್ಟಾಂಡಿಂಗಿಗೆ ಒಂದೇ ಸಮಯದಲ್ಲಿ ಹಲವು I/O ಮನವಿಗಳನ್ನು ಹೊಂದಬಲ್ಲ ಸಾಮರ್ಥ್ಯ. (೨.೬.೧೮)

    • ಹಾಟ್ ಪ್ಲಗ್ ಬೆಂಬಲ (2.6.18)

  • EDAC ಬೆಂಬಲ (2.6.16)

    • EDAC ಗೋಲ್ ಗಣಕದಲ್ಲಿನ ದೋಷಗಳನ್ನು ಪತ್ತೆ ಮತ್ತು ವರದಿ ಮಾಡುತ್ತದೆ.

  • ಒಂದು ಹೊಸ ioatdma ಚಾಲಕವನ್ನು Intel(R) I/OAT DMA ಇಂಜಿನ್ನಿಗಾಗಿ ಸೇರ್ಪಡಿಸಲಾಗಿದೆ(2.6.18)

NUMA (ನಾನ್-ಯುನಿಫಾರ್ಮ್ ಮೆಮೊರಿ ಎಕ್ಸೆಸ್) / ಮಲ್ಟಿ-ಕೋರ್

  • Cpusets (2.6.12)

    • Cpusetಗಳು ಈಗ ನಿಗದಿತ ಸಂಖ್ಯೆಯ CPU ಮತ್ತು ಮೆಮೊರಿ ನೋಡ್ ಗಳನ್ನ ನಿಗದಿತ ಕಾರ್ಯಗಳಿಗೆ ನಿಯೋಜಿಸುವ ಒಂದು ರಚನೆಯನ್ನು ನೀಡುತ್ತದೆ. CpuseಗಳುsCPU ಮತ್ತು ಮೆಮೊರಿ ನಿಯೋಜನೆಯನ್ನು ಕಾರ್ಯಗಳ ಪ್ರಸ್ತುತ cpuset ಗಳ ಒಳಗಿನ ಸಂಪನ್ಮೂಲಗಳಿಗೆ ಮಾತ್ರ ಮಿತಿಗೊಳಿಸುತ್ತದೆ ಬೃಹತ್ ಗಣಕಗಳಲ್ಲಿನ ಕ್ರಿಯಾತ್ಮಕವಾದ ಕಾರ್ಯ ನಿಯೋಜನೆಯನ್ನು ನಿರ್ವಹಿಸುವಲ್ಲಿ ಇವುಗಳು ಮುಖ್ಯವಾಗುತ್ತದೆ.

  • NUMA -ಅವೇರ್ ಸ್ಲಾಬ್ (೨.೬.೧೪)

    • ಇದು ವಿವಿಧ ನೋಡ್ ಗಳ ಮೇಲೆ ಸ್ಲಾಬುಗಳನ್ನು ರಚಿಸುತ್ತದೆ ಮತ್ತು ಇದು ಸ್ಥಳದ ಹಂಚಿಕೆಯು ಅನುಕೂಲಕರವಾಗಿರುವಂತೆ ಸ್ಲಾಬುಗಳನ್ನು ನಿರ್ವಹಿಸುತ್ತದೆ. ಪ್ರತಿ ನೋಡ್ ಅದರದ್ದೇ ಆದ ಆಂಶಿಕ, ಮುಕ್ತ ಮತ್ತು ಸಂಪೂರ್ಣ ಸ್ಲಾಬುಗಳನ್ನು ಹೊಂದಿರುತ್ತದೆ. ಒಂದು ನೋಡ್ ಗೆ ಎಲ್ಲಾ ವಸ್ತುಗಳ ಹಂಚಿಕೆಯು ನೋಡ್-ನಿಶ್ಚಿತ ಸ್ಲಾಬ್ ಪಟ್ಟಿಯ ಮೂಲಕವೇ ಜರುಗುತ್ತದೆ.

  • ಸ್ವಾಪ್ ಮೈಗ್ರೇಶನ್ (೨.೬.೧.೬)

    • ಪ್ರಕ್ರಿಯೆಯು ಚಾಲನೆಯಲ್ಲಿದ್ದಾಗ, ಒಂದು NUMA ವ್ಯವಸ್ಥೆಯ ನೋಡ್ ಗಳ ನಡುವೆ ಪುಟಗಳ ಭೌತಿಕ ನೆಲೆಯ ಸ್ಥಳಾಂತರವನ್ನು ಸ್ವಾಪ್ ವಲಸೆಯು ಅನುಮತಿಸುತ್ತದೆ.

  • Huge pages (2.6.16)

    • huge pageಗಳಿಗೆ NUMA ಪಾಲಿಸಿ ಸಮರ್ಥನೆಯನ್ನು ಸೇರಿಸಲಾಗಿದೆ:ಮೆಮೊರಿ ಪಾಲಿಸಿ ಲೇಯರಿನ huge_zonelist() ಕಾರ್ಯಕಾರಿಯು NUMA ದೂರದಿಂದ ಆರ್ಡರ್ ಮಾಡಿರುವ ವಲಯಗಳ ಒಂದು ಪಟ್ಟಿಯನ್ನು ನೀಡುತ್ತದೆ. hugetlb ಲೇಯರ್ ಆ ಪಟ್ಟಿಯಲ್ಲಿ ಹಾಗೂ ಪ್ರಸ್ತುತ cpuset ನ ನೋಡ್-ಸೆಟ್ ನಲ್ಲಿಯೂ ಸಹ huge pageಗಳಿಗಾಗಿ ಲಭ್ಯವಿರುವ ಒಂದು ವಲಯವನ್ನು ಹುಡುಕುತ್ತ ಸಾಗುತ್ತದೆ.

    • huge pageಗಳು ಈಗ cpusetಗಳ ಆಜ್ಞೆಯನ್ನು ಪಾಲಿಸುತ್ತವೆ.

  • ವಲಯ ಪೂರ್ವ VM ಕೌಂಟರ್ ಗಳು

    • ವಲಯಾಧಾರಿತ VM ಅಂಕಿಅಂಶಗಳನ್ನು ನೀಡುತ್ತದೆ, ಇದು ಒಂದು ವಲಯವು ಮೆಮೊರಿಯ ಯಾವ ಸ್ಥಿತಿಯಲ್ಲಿದೆ ಎಂದು ಪತ್ತೆಹಚ್ಚಲು ಆವಶ್ಯಕವಾಗಿರುತ್ತದೆ

  • ನೆಟ್-ಫಿಲ್ಟರ್ ip_ಟೇಬಲ್ಲುಗಳು: NUMA-ಅವೇರ್ ಅಲೊಕೇಶನ್. (೨.೬.೧೬)

  • ಮಲ್ಟಿ-ಕೋರ್

    • ಕೋರುಗಳ ನಡುವಿನ ಹಂಚಿಕಾ ಕ್ಯಾಶಸ್ ನೊಂದಿಗಿನ ಮಲ್ಟಿ-ಕೋರನ್ನು ನಿರೂಪಿಸಲು ಒಂದು ಹೊಸ ಶೆಡ್ಯೂಲರ ಡೊಮೈನನ್ನು ಸೇರಿಸಲಾಗಿದೆ. ಇದರಿಂದ ಅಂತಹ ಗಣಕಗಳಲ್ಲಿ, ಚುರುಕಾದ cpu ಶೆಡ್ಯೂಲಿಂಗ್ ನಿರ್ಣಯಗಳನ್ನು ಮಾಡಲು ಸಾಧ್ಯವಾಗುತ್ತದೆ, ಹಾಗು ಇದರಿಂದ ಕೆಲವೂಂದು ಸಂದರ್ಭಗಳಲ್ಲಿ ಕಾರ್ಯಶೀಲತೆಯನ್ನು ಬಹಳ ಮಟ್ಟಿಗೆ ಸುಧಾರಿಸುತ್ತದೆ. (೨.೬.೧೭)

    • CPU ಶೆಡ್ಯೂಲರುಗಳಿಗಾಗಿ ವಿದ್ಯುಚ್ಚಕ್ತಿ ಉಳಿಸುವ ಪಾಲಿಸಿ: multicore/smt cpuಗಳಲ್ಲಿ, ಕಾರ್ಯಗಳನ್ನು CPUಗಳಾದ್ಯಂತ ಹಂಚುವ ಬದಲು, ಉಳಿದವುಗಳು ಎಲ್ಲಾ ಕೆಲಸ ಮಾಡುತ್ತಿರುವಾಗ ಕೆಲವೊಂದು ಪ್ಯಾಕೇಜುಗಳನ್ನು ಕೆಲಸ ಮಾಡದಂತೆ ನಿಲ್ಲಿಸಿ ವಿದ್ಯುಚ್ಚಕ್ತಿಯ ಬಳಕೆಯನ್ನು ನಿಯಂತ್ರಿಸಬಹುದು.

( x86 )



[1] http://www.opencontent.org/openpub/ನಲ್ಲಿ ಲಭ್ಯವಿರುವ Open Publication License, v1.0 ನಲ್ಲಿ ನಮೂದಿಸಲ್ಪಟಿರುವ ಕರಾರು ನಿಯಮಗಳಿಗನುಗುಣವಾಗಿ ಮಾತ್ರ ಈ ವಸ್ತುವನ್ನು ವಿತರಿಸಲಾಗುತ್ತದೆ.